SUDDIKSHANA KANNADA NEWS/ DAVANAGERE/DATE:19_08_2025
ದಾವಣಗೆರೆ: ನಗರದ ಬೇತೂರು ರಸ್ತೆಯ ಎರಡನೇ ಕ್ರಾಸಿನಲ್ಲಿರುವ ಶ್ರೀಕಂಠೆಮ್ಮ ದೇವಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಶ್ರಾವಣ ಮಾಸದ ಪೂಜಾ ಕಾರ್ಯಕ್ರಮ ಸಡಗರ, ಸಂಭ್ರಮದಿಂದ ನೆರವೇರಿತು.
READ ALSO THIS STORY: ಧರ್ಮಸ್ಥಳದಲ್ಲಿ ಎಲ್ಲವೂ ಗೊಂದಲಮಯ: ಸುಳ್ಳಿನ ಜಾಲದಿಂದ ದೇವಾಲಯದ ಪರಂಪರೆಗೆ ಧಕ್ಕೆ ತರುವ ಹುನ್ನಾರ!
ಇಲ್ಲಿನ ದೇವಸ್ಥಾನದಲ್ಲಿ ಕಂಟಕಗಳನ್ನು ದೂರ ಮಾಡುವ ತಾಯಿ ಶ್ರೀಕಂಠೇಮ್ಮ ದೇವಿಗೆ ಪ್ರತಿ ವರ್ಷದ ಶ್ರಾವಣ ಮಾಸದಂತೆ ಹೊಳೆಪೂಜೆಯನ್ನು ನಡೆಸಿ, ಭಕ್ತಿಭಾವದಿಂದ ದೇವಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆಯನ್ನು ಅರ್ಪಿಸಲಾಯಿತು.
ಮಂಗಳಗೌರಿಯ ಅಲಂಕಾರವನ್ನು ಮಾಡುವ ಮೂಲಕ ಸುಮಂಗಲೆಯರಿಂದ ದೇವಿಗೆ ಉಡಿ ತುಂಬಲಾಯಿತು. ದೇವಿಗೆ ಪ್ರೀಯವಾದ ಮೊಸರನ್ನ, ಹಾಲು, ತುಪ್ಪ, ಹೊಳಿಗೆ, ಖರ್ಚಿಕಾಯಿ ಇತರೆ ಖ್ಯಾದ್ಯಗಳನ್ನು ನೈವೇದ್ಯವಾಗಿ ಸಮರ್ಪಿಸಿದ ಭಕ್ತರು ಇಷ್ಟಾರ್ಥಗಳನ್ನು ಈಡೇರಿಸುವಂತೆ ಬೇಡಿಕೊಂಡರು.
ಬಂದ ಭಕ್ತರಿಗೆ ಹೂ ಕೊಡುವ ದೇವಿ
ಶ್ರೀ ಕಂಠೇಮ್ಮ ದೇವಿಯು ಕಂಟಕಗಳನ್ನು ದೂರ ಮಾಡುವ ದೇವಿಯಾಗಿ ಬೇತೂರು ರಸ್ತೆಯ ಎರಡನೇ ಕ್ರಾಸಿನಲ್ಲಿ ನೆಲೆಸಿದ್ದು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ದೇವಿಯಾಗಿದೆ. ಬರುವ ಭಕ್ತರು ಭಕ್ತಿಯಿಂದ ದೇವಿಗೆ ಪೂಜಿಸಿದರೆ ದೇವಿಯು ಹೂವನ್ನು ಬೀಳಿಸುವ ಮೂಲಕ ಅಚ್ಚರಿಯನ್ನು ಮೂಡಿಸುವಳು ಎನ್ನಲಾಗಿದೆ. ಹೀಗಾಗಿ ಸುತ್ತಮುತ್ತಲಿನ ನಿವಾಸಿಗಳು ಹಾಗೂ ಭಕ್ತರು ಶ್ರಾವಣ ಮಾಸದ ಕೊನೆಯ ಸೋಮವಾರದ ನಂತರದ ಮಂಗಳವಾರದಂದು ದೇವಿಗೆ ಸಲ್ಲಿಸುವ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿವರು, ದೇವಸ್ಥಾನದ ಅನ್ನಸಂತರ್ಪಣೆಯ ಪ್ರಸಾದವನ್ನು ಸವಿದು ಪುನೀತರಾಗುವರು..
ದೇವಸ್ಥಾನದ ಪೂಜಾ ಕಾರ್ಯಕ್ರಮದಲ್ಲಿ ಸ್ಥಳೀಯರಾದ ಜಯ್ಯಮ್ಮ ರಾಜಪ್ಪ, ಮಹಾಂತೇಶ್, ಸರಸ್ವತಿ ನಾಗರಾಜಪ್ಪ, ರಾಮ್ ಪ್ರಸಾದ್, ಶಿವು, ಶಿವಕುಮಾರ್, ಚಂದ್ರು, ರಾಮಕೃಷ್ಣ, ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.