ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

“ರಾಮ ಬಾಣ ಹೂಡ್ಯಾನಲೇ ಮಹಾತಾಯಿ ಬಲೆ ಬೀಸ್ಯಾಳಲೇ ಎಚ್ಚರ”: ಆನೆಕೊಂಡ ಬಸವೇಶ್ವರ ಸ್ವಾಮಿ ಕಾರ್ಣಿಕ

On: August 19, 2025 10:49 AM
Follow Us:
ರಾಮ
---Advertisement---

SUDDIKSHANA KANNADA NEWS/ DAVANAGERE/DATE:19_08_2025

ದಾವಣಗೆರೆ: ರಾಮ ರಾಮ ಎಂದು ನುಡಿದೀತ್ತಲೆ ನರಲೋಕದ ಜನಕೆ ಆನೆ ಚರಗ ಹೊಡೆದಿತ್ತಲೆ…. ರಾಮ ಬಾಣ ಹೂಡ್ಯಾನಲೇ ಮಹಾತಾಯಿ ಬಲೆ ಬೀಸ್ಯಾಳಲೇ ಎಚ್ಚರ. ಇದು ದಾವಣಗೆರೆ ತಾಲೂಕಿನ ಆನೆಕೊಂಡದ ಐತಿಹಾಸಿಕ ಬಸವೇಶ್ವರ ಸ್ವಾಮಿ ಕ್ಷೇತ್ರದ ಈ ವರ್ಷದ ಕಾರ್ಣಿಕ.

READ ALSO THIS STORY: ಧರ್ಮಸ್ಥಳ ಕೇಸ್ ಗೆ ಟ್ವಿಸ್ಟ್, ಮೂವರ ಗುಂಪು ನನಗೆ ಬುರುಡೆ ಕೊಟ್ಟು ಪೊಲೀಸರಿಗೆ ಶರಣಾಗುವಂತೆ ಹೇಳಿತ್ತು: ಎಸ್ಐಟಿ ಮುಂದೆ ಮುಸುಕುಧಾರಿ ಸ್ಫೋಟಕ ಮಾಹಿತಿ!

ಈ ಕ್ಷೇತ್ರದ ಕಾರ್ಣಿಕವು ಅತ್ಯಂತ ಪ್ರಸಿದ್ಧಿಯಾಗಿದೆ. ಈ ಬಾರಿಯ ಕಾರ್ಣಿಕ ಎಚ್ಚರಿಕೆಯನ್ನೂ ನೀಡಿದೆ. ಮಹಾತಾಯಿ ಬಲೆ ಬೀಸ್ಯಾಳಲೇ ಎಚ್ಚರ ಎಂದು ನೀಡಿದೆ. ಅಂದರೆ ಭೂ ತಾಯಿಯು ಈ ಬಾರಿ ಭಾರೀ ಮಳೆಯಾಗಲಿದ್ದು, ಅನಾಹುತ ಉಂಟಾಗಲಿವೆ ಎಂಬ ಎಚ್ಚರಿಕೆ ಎಂದು ಹೇಳಲಾಗುತ್ತಿದೆ.

ಆನೆಕೊಂಡ ಕ್ಷೇತ್ರದ ಬಸವೇಶ್ವರ ಸ್ವಾಮಿಯ ಕಾರ್ಣಿಕ ಕೇಳಲು ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಮಂದಿ ಆಗಮಿಸಿದ್ದರು. ನಿಟುವಳ್ಳಿಯ ದುರ್ಗಾಂಬಿಕಾ ದೇವಿ, ನೀಲಾನಹಳ್ಳಿ ಆಂಜನೇಯ ಸ್ವಾಮಿ ಹಾಗೂ ಆನೆಕೊಂಡದ ಬಸವೇಶ್ವರ ಸ್ವಾಮಿ ಸೇರಿದಂತೆ ಬೇರೆ ಬೇರೆ ದೇವರ ಉತ್ಸವ ಮೂರ್ತಿಗಳು ಮಟ್ಟಿಕಲ್ ಮರಡಿ ಬಸವೇಶ್ವರ ದೇವಸ್ಥಾನಕ್ಕೆ ಆಗಮಿಸುತ್ತಿದ್ದಂತೆ ಭಕ್ತರು ಪುಳಕಿತಗೊಂಡರು. ಉತ್ಸವ ಮೂರ್ತಿಗಳನ್ನು ಕಣ್ತುಂಬಿಕೊಂಡರು.

ಉತ್ಸವ ಮೂರ್ತಿಗಳನ್ನು ತರೇಹವಾರಿ ಹಣ್ಣು, ಫಲ, ಹೂವು, ವಿವಿಧ ನಮೂನೆಯ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಇದನ್ನು ನೋಡುವುದೇ ಹಬ್ಬವಾಗಿತ್ತು. ಉತ್ಸವ ಮೂರ್ತಿಗಳೊಂದಿಗೆ ಸಾವಿರಾರು ಮಂದಿ ಹೆಜ್ಜೆ ಹಾಕುತ್ತಾ ದೇವಸ್ಥಾನದ ಆವರಣಕ್ಕೆ ಬಂದರು. ಕಾರ್ಣಿಕ ಕಂಬಕ್ಕೆ ಪ್ರದಕ್ಷಿಣೆ ಹಾಕಿದ ದಾಸಪ್ಪ ಅವರು, ರಾಮ ರಾಮ ಎಂದು ನುಡಿದೀತ್ತಲೆ ನರಲೋಕದ ಜನಕೆ ಆನೆ ಚರಗ ಹೊಡೆದಿತ್ತಲೆ…. ರಾಮ ಬಾಣ ಉಡ್ಯಾನಲೇ ಮಹಾತಾಯಿ ಬಲೆ ಬೀಸ್ಯಾಳಲೇ ಎಚ್ಚರ ಎಂಬ ಕಾರ್ಣಿಕ ನುಡಿದರು. ಈ ನುಡಿ ಹೊರ ಬೀಳುತ್ತಿದ್ದಂತೆ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ರಾಮ ಬಾಣ ಹೂಡ್ಯಾನಲೇ… ಮಹಾತಾಯಿ ಬಲೆ ಬೀಸ್ಯಾಳಲೇ ಎಚ್ಚರ ಎಂದು ಭಕ್ತರು ಗುನುಗುತ್ತಿದ್ದ ದೃಶ್ಯ ಕಂಡು ಬಂತು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment