ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

BIG BREAKING: ರೇಣುಕಾಸ್ವಾಮಿ ಹತ್ಯೆ ಪ್ರಕರಣ: A1 ಪವಿತ್ರಾ ಗೌಡ, ಪ್ರದೋಶ್ 2ನೇ ಬಾರಿಗೆ ಜೈಲಿಗೆ!

On: August 14, 2025 2:01 PM
Follow Us:
ಪ್ರಕರಣ
---Advertisement---

SUDDIKSHANA KANNADA NEWS/ DAVANAGERE/DATE:14_08_2025

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ 14ನೇ ಆರೋಪಿ ಪ್ರದೋಷ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

READ ALSO THIS STORY: “ದರ್ಶನ್ ತೂಗುದೀಪ್, ಪವಿತ್ರಾ ಗೌಡ ಸೇರಿ ಆರೋಪಿಗಳು ಶರಣಾಗದಿದ್ದರೆ ಕೂಡಲೇ ವಶಕ್ಕೆ ಪಡೆಯಿರಿ”: ಸುಪ್ರೀಂಕೋರ್ಟ್ ಖಡಕ್ ಸೂಚನೆ

ಸುಪ್ರೀಂಕೋರ್ಟ್ ನಲ್ಲಿ ಜಾಮೀನು ನಿರಾಕರಿಸಿದ ಹಿನ್ನೆಲೆಯಲ್ಲಿ ಪವಿತ್ರಾ ಗೌಡರನ್ನು ಬೆಂಗಳೂರು ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಿದ್ದಾರೆ. ಗೋವಿಂದರಾಜ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಸುಬ್ರಹ್ಮಣ್ಯ ನೇತೃತ್ವದಲ್ಲಿ ಬಂಧಿಸಲಾಯಿತು.

ಬೆಂಗಳೂರಿನ ರಾಜರಾಜೇಶ್ವರಿ ಮನೆಯಲ್ಲಿದ್ದ ಪವಿತ್ರಾ ಗೌಡರನ್ನು ಬಂಧಿಸಿ ಕರೆದೊಯ್ಯುತ್ತಿದ್ದಾರೆ. ದರ್ಶನ್ ತೂಗುದೀಪ್ ಅವರ ಗೆಳತಿಯಾಗಿದ್ದ ಪವಿತ್ರಾ ಗೌಡ ಮನೆಯಲ್ಲಿ ಬಂಧನದ ವೇಳೆ ಮೌನವಾಗಿದ್ದರು.

ಪೊಲೀಸರು ಮನೆಯೊಳಗೆ ಹೋದಾಗ ಪವಿತ್ರಾ ಗೌಡ ಸ್ವಲ್ಪ ಟೈಂ ಕೊಡಿ, ಬರುತ್ತೇನೆ ಎಂದು ಹೇಳಿದ್ದಾರೆ. ಮಹಿಳಾ ಪೊಲೀಸ್ ಅಧಿಕಾರಿಗಳು ಸುಪ್ರೀಂಕೋರ್ಟ್ ನಲ್ಲಿ ಜಾಮೀನು ರದ್ದಾಗಿದ್ದು, ನೀವು ಬರಬೇಕು ಎಂದು ಹೇಳಿದರು. ಆಗ ನಾನು ಬರುತ್ತೇನೆ, ಕಾನೂನಿಗೆ ಗೌರವ ಕೊಡುತ್ತೇನೆ. ಆದ್ರೆ, ಸ್ವಲ್ಪ ಸಮಯ ಕೊಡಿ, ಸುಧಾರಿಸಿಕೊಳ್ಳುತ್ತೇನೆ ಎಂದು ಪವಿತ್ರಾ ಗೌಡ ಹೇಳಿದ್ದಾರೆ ಎನ್ನಲಾಗಿದೆ. ಆದೇಶ ಪ್ರತಿ ಹಿಡಿದುಕೊಂಡು ಪೊಲೀಸರು ಹೋಗಿದ್ದು, ವಶಕ್ಕೆ ಪಡೆದರು.

ರೇಣುಕಾಸ್ವಾಮಿ ಹತ್ಯೆ ಸಂಬಂಧ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಪಡಿಸಿತ್ತು. ದರ್ಶನ್ ತೂಗುದೀಪ್ ಸೇರಿದಂತೆ ಏಳು ಆರೋಪಿಗಳ ಜಾಮೀನು ನಿರಾಕರಿಸಿತ್ತು. ಮಾತ್ರವಲ್ಲ,
ಕೂಡಲೇ ವಶಕ್ಕೆ ಪಡೆಯುವಂತೆಯೂ ಸೂಚಿಸಿತ್ತು.

ಈಗಿನಿಂದಲೇ ದರ್ಶನ್ ತೂಗುದೀಪ ಅವರನ್ನು ಬಂಧಿಸುವ ಅವಕಾಶ ಇದೆ. ಪೊಲೀಸರು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದಾರೆ. ಸುಪ್ರೀಂಕೋರ್ಟ್ ಸೂಚನೆ ಕೊಟ್ಟಿದ್ದರಿಂದ ಪವಿತ್ರಾ ಗೌಡ ಬಂಧಿಸಲಾಗಿದೆ. “ಜಾಮೀನು ನೀಡಲು ಯಾವುದೇ ಕಾನೂನು ಕಾರಣವಿಲ್ಲ” ಎಂದು ಪೀಠವು ಖಡಾಖಂಡಿತವಾಗಿ ಹೇಳಿತ್ತು. “ಯಾವುದೇ ವ್ಯಕ್ತಿ ಕಾನೂನಿಗಿಂತ ಮೇಲಲ್ಲ” ಮತ್ತು “ಕಾನೂನಿಗೆ ವಿಧೇಯತೆ ಒಂದು ನಿಯಮ, ಪರವಾಗಿಲ್ಲ” ಎಂದು ನ್ಯಾಯಮೂರ್ತಿ ಪರ್ದಿವಾಲಾ ಒತ್ತಿ ಹೇಳಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment