ಡಾಕಾ (ಬಾಂಗ್ಲಾದೇಶ): ಬಾಂಗ್ಲಾದೇಶದಲ್ಲಿ ರಾಜಕೀಯ ಸಂಘರ್ಷದ ಹಿನ್ನೆಲೆಯಲ್ಲಿ ಜೈಲು ಸೇರಿರುವ ಅವಾಮಿ ಲೀಗ್ ಮಹಿಳಾ ಘಟಕದ ನಾಯಕಿಯೊಬ್ಬರ 15 ವರ್ಷದ ವಿಶೇಷಚೇತನ ಮಗ ಅನಾರೋಗ್ಯ ಹಾಗೂ ತಾಯಿಯ ಅಗಲಿಕೆಯ ದುಃಖದಿಂದ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.

ಬಂಧನದಲ್ಲಿರುವ ತಾಯಿಗೆ ಮಗನ ಜೀವಂತ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಅನುಮತಿ ಸಿಗದ ಕಾರಣ, ಮಗನ ಮೃತದೇಹವನ್ನು ಜೈಲಿನ ಗೇಟಿಗೆ ತಂದಾಗ ಕೇವಲ ಕೆಲವೇ ನಿಮಿಷಗಳ ಕಾಲ ಅಂತಿಮ ದರ್ಶನ ಪಡೆಯಲು ಅವಕಾಶ ನೀಡಲಾಯಿತು.
ಬಾಂಗ್ಲಾದೇಶದ ನಿಷೇಧಿತ ಅವಾಮಿ ಲೀಗ್ ಪಕ್ಷದ ಮಹಿಳಾ wing ಆದ ‘ಜುಬೊ ಮಹಿಳಾ ಲೀಗ್’ನ ಕೇಂದ್ರ ನಾಯಕಿ ಸಾಹರ್ಮಿನ್ ಸುಲ್ತಾನಾ ಶೋರ್ಮಿ (44) ಅವರು ಕಳೆದ ಅಕ್ಟೋಬರ್ 3ರಂದು ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿ ಬಂಧನಕ್ಕೊಳಗಾಗಿ ಗಜಿಪುರದ ಕಾಶಿಪುರ ಮಹಿಳಾ ಕೇಂದ್ರ ಜೈಲಿನಲ್ಲಿದ್ದಾರೆ.
ಅವರ 15 ವರ್ಷದ ವಿಶೇಷಚೇತನ ಮಗ ನಿಹ್ಸರ್ಗ ಹೊಸೈನ್ ತುರಿ ಹುಟ್ಟಿನಿಂದಲೇ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, 10 ರಿಂದ 12 ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದನು. ಪ್ರತಿದಿನದ ಅಗತ್ಯಗಳಿಗಾಗಿ ಮತ್ತು ವೈದ್ಯಕೀಯ ಆರೈಕೆಗಾಗಿ ಆಕೆ ಸಂಪೂರ್ಣವಾಗಿ ತಾಯಿಯನ್ನು ಅವಲಂಬಿಸಿದ್ದನು.
ಮಗನ ಕೊನೆಯ ಆಸೆ ಈಡೇರಲಿಲ್ಲ: ತಾಯಿ ಜೈಲುಪಾಲಾದ ಬಳಿಕ ಮಗ ತೀವ್ರ ಮಾನಸಿಕ ನೊಂದಿದ್ದು, ತನ್ನ ಶಿಕ್ಷಣ ಮತ್ತು ವೈದ್ಯಕೀಯ ಚಿಕಿತ್ಸೆಯ ಬಗ್ಗೆ ವಿಡಿಯೋ ಸಂದೇಶವೊಂದರಲ್ಲಿ ಕಣ್ಣೀರಿಟ್ಟಿದ್ದನು. ತಾಯಿ ಬಿಡುಗಡೆಗಾಗಿ ಕುಟುಂಬಸ್ಥರು ಮಾಡಿದ ಮನವಿಗಳು ಫಲಕಾರಿಯಾಗಲಿಲ್ಲ.
ಮನೆಯಲ್ಲಿಯೇ ಕೊನೆಯುಸಿರು: ಶುಕ್ರವಾರ (ನವೆಂಬರ್ 27) ರಾತ್ರಿ ಶೌಚಲಯಕ್ಕೆ ತೆರಳಿದ್ದ ವಾಪಸ್ ಬಾರದಿರುವುದನ್ನು ಕಂಡು ಕುಟುಂಬದವರು ಬಾಗಿಲು ಒಡೆದು ನೋಡಿದಾಗ ಅರೆಪ್ರಜ್ಞಾ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬಳಿಕ ಮೃತಪಟ್ಟಿರುವುದು ದೃಢಪಟ್ಟಿದೆ.
ಜೈಲು ಗೇಟ್ ಬಳಿ ಕಣ್ಣೀರಿನ ವಿದಾಯ: ಮಗನ ಮರಣದ ನಂತರ ಶೀತಲೀಕೃತ ಆಂಬ್ಯುಲೆನ್ಸ್ನಲ್ಲಿ (Refrigerated ambulance) ಮೃತದೇಹವನ್ನು ಕಾಶಿಪುರ ಜೈಲಿನ ಗೇಟಿಗೆ ತರಲಾಯಿತು. ಉನ್ನತ ಅಧಿಕಾರಿಗಳ ಅನುಮತಿಯೊಂದಿಗೆ ಶೋರ್ಮಿ ಅವರಿಗೆ ಕೇವಲ 2 ರಿಂದ 5 ನಿಮಿಷಗಳ ಕಾಲ ಜೈಲಿನ ಗೇಟ್ ಬಳಿಯೇ ಮಗನ ಮುಖ ನೋಡಲು ಅವಕಾಶ ನೀಡಲಾಯಿತು.
ಈ ಘಟನೆಯು ಬಾಂಗ್ಲಾದೇಶದಲ್ಲಿ ಕೈದಿಗಳ ಮಾನವ ಹಕ್ಕುಗಳು, ತುರ್ತು ಪೆರೋಲ್ ವ್ಯವಸ್ಥೆಯ ವೈಫಲ್ಯ ಹಾಗೂ ವಿಶೇಷಚೇತನ ಮಕ್ಕಳ ರಕ್ಷಣೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪೆರೋಲ್ ಅರ್ಜಿ ಸಲ್ಲಿಕೆ ಕುರಿತು ಕುಟುಂಬ ಹಾಗೂ ಜೈಲು ಅಧಿಕಾರಿಗಳ ನಡುವೆ ಪರಸ್ಪರ ಭಿನ್ನ ಹೇಳಿಕೆಗಳು ಕೇಳಿಬಂದಿವೆ.




