SUDDIKSHANA KANNADA NEWS/ DAVANAGERE/DATE:04_08_2025
ದಾವಣಗೆರೆ: ಕನ್ನಂಬಾಡಿ ಕಟ್ಟೆಗೆ ಮೊದಲು ಅಡಿಪಾಯ ಹಾಕಿದ್ದು ಟಿಪ್ಪು ಎಂಬ ಹೇಳಿಕೆ ನೀಡಿರುವ ಸಚಿವ ಹೆಚ್. ಸಿ. ಮಹಾದೇವಪ್ಪರಿಗೆ ನಾಚಿಕೆಯಾಗಬೇಕು ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
READ ALSO THIS STORY: ಧರ್ಮಸ್ಥಳದಲ್ಲಿ ನೂರಾರು ಶವಗಳ ಸಂಸ್ಕಾರ ಕೇಸ್ ಗೆ ರೋಚಕ ಟ್ವಿಸ್ಟ್: ಆರ್‌ಟಿಐನಲ್ಲಿ ಆಘಾತಕಾರಿ ಸಾಕ್ಷ್ಯ ಬಹಿರಂಗ!
ಹೊನ್ನಾಳಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಒಬ್ಬ ಮತಾಂಧ. ಹಿಂದೂಗಳ ಭಾವನೆಗೆ ಧಕ್ಕೆ ತರುವ, ಮತಾಂತರ ಮಾಡಿದ್ದಾನೆ. ಮಹಾದೇವಪ್ಪನವರಿಗೆ ಮೈಸೂರು ಮಹಾರಾಜರ ಇತಿಹಾಸ ಗೊತ್ತೇ ನಿಮಗೆ ಎಂದು ಪ್ರಶ್ನಿಸಿದ್ದಾರೆ.
ಸಿಎಂ ಸಿದ್ದರಾಮಯ್ಯರು, ಡಿ. ಕೆ. ಶಿವಕುಮಾರ್ ನಡುವೆ ಖುರ್ಚಿ ಕದನ ಆಗುತ್ತಿದೆ. ಖುರ್ಚಿ ಉಳಿಸಿಕೊಳ್ಳುವ ಸಲುವಾಗಿ ಹಿಂಬಾಲಕ ಮಹಾದೇವಪ್ಪರಿಂದ ಕೀಳು ಮಟ್ಟದ ಹೇಳಿಕೆ ನೀಡಿಸುತ್ತಿದ್ದಾರೆ. ಮಹಾರಾಜರು, ಮನೆತನಕ್ಕೆ ಅಪಮಾನ ಮಾಡಿಲ್ಲ, ಆರು ಕೋಟಿ ಕನ್ನಡಿಗರ ವಿರುದ್ಧವಾಗಿ ಮಾತನಾಡಿದ್ದಾರೆ. ನಾಡಿನ ಪ್ರಜ್ಞಾವಂತ ನಾಗರಿಕರ ಕ್ಷಮೆ ಕೇಳಬೇಕು. ಕೆ ಆರ್ ಎಸ್ ಕಟ್ಟಿದ್ದು ಯಾರೆಂಬುದು ಇತಿಹಾಸ ಇದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕಟ್ಟಿದ್ದು. ಅಲ್ಪಸಂಖ್ಯಾತರ ಓಲೈಕೆಗಾಗಿ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು.
ಟಿಪ್ಪು ಜಯಂತಿ ಈ ಹಿಂದೆ ಮಾಡಿದ್ದೀರಿ. ಹಿಂದೂಗಳ ಕಗ್ಗೊಲೆ ಆಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಆಗಿಲ್ಲ, ಗುಂಡಿ ಮುಚ್ಚಲು ಆಗಿಲ್ಲ. ವಿಷಯಾಂತರ ಮಾಡಲು ಮತ್ತು ಅಲ್ಪಸಂಖ್ಯಾತರನ್ನು ಓಲೈಸುವ ಮೂಲಕ ಅಪಮಾನ ಮಾಡುತ್ತಿದ್ದಾರೆ. ಸಂವಿಧಾನ ಅತಿ ಹೆಚ್ಚು ಬಾರಿ ತಿದ್ದುಪಡಿದ್ದು ನೀವು. ಅಭಿವೃದ್ಧಿ ಕುರಿತಂತೆ ಶ್ವೇತಪತ್ರ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದರು.