Home ಕ್ರೈಂ ನ್ಯೂಸ್ ಆಸ್ತಿ ಹಾಗೂ ಕೋಟ್ಯಂತರ ರೂ. ವಿಮಾ ಹಣದ ಆಸೆ: ಪತಿ, ಮಗ ಮತ್ತು ಸೋದರಳಿಯನಿಗೆ ವಿಷಪ್ರಾಶನ ಮಾಡಿದ್ದ ಮಹಿಳೆ ಬಂಧನ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಆಸ್ತಿ ಹಾಗೂ ಕೋಟ್ಯಂತರ ರೂ. ವಿಮಾ ಹಣದ ಆಸೆ: ಪತಿ, ಮಗ ಮತ್ತು ಸೋದರಳಿಯನಿಗೆ ವಿಷಪ್ರಾಶನ ಮಾಡಿದ್ದ ಮಹಿಳೆ ಬಂಧನ!

Share
ಆಸ್ತಿ
Share

ಘಾಜಿಯಾಬಾದ್: ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ಆಸ್ತಿ ಹಾಗೂ ಕೋಟ್ಯಂತರ ರೂ. ವಿಮಾ ಹಣವನ್ನು ದೋಚುವ ದುರುದ್ದೇಶದಿಂದ ತನ್ನ ಸ್ವಂತ ಪತಿ, ಮಗ ಮತ್ತು ಸೋದರಳಿಯನಿಗೆ ಸೀಸದ ವಿಷ ನೀಡಿ ಹತ್ಯೆ ಮಾಡಲು ಯತ್ನಿಸಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ರೇಣು ಭಟ್ನಗರ ಬಂಧಿತ ಆರೋಪಿಯಾಗಿದ್ದು, ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತಿ ಸುಶೀಲ್ ಭಟ್ನಗರ ಅವರಿಗೆ ಸೇರಿದ ರೂ. 5 ರಿಂದ 6 ಕೋಟಿ ಮೌಲ್ಯದ ಟ್ರಾವೆಲ್ಸ್ ಬ್ಯುಸಿನೆಸ್ ಮತ್ತು ರೂ. 2 ಕೋಟಿ ಮೌಲ್ಯದ ಜೀವ ವಿಮಾ ಪಾಲಿಸಿಯಲ್ಲಿ ತಾನೇ ನಾಮಿನಿಯಾಗಿದ್ದು, ಪತಿಯ ಮರಣದ ಬಳಿಕ ಎಲ್ಲ ಆಸ್ತಿಯನ್ನು ತನ್ನದಾಗಿಸಿಕೊಳ್ಳಲು ಈ ಕೃತ್ಯ ಎಸಗಿರುವುದಾಗಿ ಪೋಲಿಸರು ತಿಳಿಸಿದ್ದಾರೆ.

ಕಳೆದ ಸೆಪ್ಟೆಂಬರ್ 24 ರಂದು ಸುಶೀಲ್ ಭಟ್ನಗರ ಅವರು ನೀಡಿದ ದೂರಿನ ಮೇರೆಗೆ ಈ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.

ತಮ್ಮ ಆರೋಗ್ಯ ನಿರಂತರವಾಗಿ ಹದಗೆಡುತ್ತಿದ್ದರಿಂದ ಆಸ್ಪತ್ರೆಗೆ ದಾಖಲಾಗಿ ವೈದ್ಯಕೀಯ ತಪಾಸಣೆ ನಡೆಸಿದಾಗ ದೇಹದಲ್ಲಿ ಮಾರಕ ಸೀಸದ ವಿಷವಿರುವುದು ಪತ್ತೆಯಾಗಿದೆ. ತಮಗೆ ಹಾಗೂ ಮಗ ಮತ್ತು ಸೋದರಳಿಯನಿಗೆ ಪತ್ನಿ ರೇಣು ಭಟ್ನಗರ ಮತ್ತು ಆಕೆಯ ಕುಟುಂಬಸ್ಥರು ವ್ಯವಸ್ಥಿತವಾಗಿ ವಿಷ ಕುಡಿಸುತ್ತಿದ್ದಾರೆ ಎಂದು ಸುಶೀಲ್ ದೂರಿನಲ್ಲಿ ಆರೋಪಿಸಿದ್ದರು.

ತನಿಖೆ ನಡೆಸಿದ ಪೊಲೀಸರು ನವೆಂಬರ್ 23 ರಂದು ರೇಣು ಭಟ್ನಗರ ಅವರನ್ನು ಬಂಧಿಸಿದ್ದು, ಇತರ ಆರೋಪಿಗಳ ಪಾತ್ರದ ಕುರಿತು ತನಿಖೆ ಮುಂದುವರಿಸಿದ್ದಾರೆ.

ಘಟನೆಯ ಹಿನ್ನೆಲೆ: ಪತಿ ಸುಶೀಲ್ ಭಟ್ನಗರ ಅವರ ರೂ. 6 ಕೋಟಿ ಆಸ್ತಿ ಮತ್ತು ರೂ. 2 ಕೋಟಿ ವಿಮಾ ಹಣವನ್ನು ಪಡೆದುಕೊಳ್ಳುವ ಉದ್ದೇಶದಿಂದ ರೇಣು ಭಟ್ನಗರ ಈ ಕೃತ್ಯ ಎಸಗಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ವಿಷ ಪ್ರಯೋಗ: ಪತಿ ಮಾತ್ರವಲ್ಲದೆ ತನ್ನ ಸ್ವಂತ ಮಗ ಹಾಗೂ ಸೋದರಳಿಯನಿಗೂ ಕೂಡ ನಿಧಾನವಾಗಿ ಸೀಸದ ವಿಷ (Lead) ನೀಡಿ ಕೊಲ್ಲಲು ಸಂಚು ಹೂಡಲಾಗಿತ್ತು.

ದೂರು ದಾಖಲು: ಆರೋಗ್ಯದಲ್ಲಿ ತೀವ್ರ ವ್ಯತ್ಯಯ ಕಂಡುಬಂದ ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಿದಾಗ ದೇಹದಲ್ಲಿ ವಿಷವಿರುವುದು ಪತ್ತೆಯಾಗಿದ್ದು, ಪತಿ ಇಂದಿರಾನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Share