SUDDIKSHANA KANNADA NEWS/ DAVANAGERE/DATE:03_08_2025
ಬೆಂಗಳೂರು: ತೋಟಗಾರಿಕೆ ಇಲಾಖೆ ವತಿಯಿಂದ 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮರುವಿನ್ಯಾಸಗೊಳಿಸಿದ ಹವಾಮಾನಾಧಾರಿತ ಬೆಳೆ ವಿಮೆ ಯೋಜನೆಯಡಿ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.
READ ALSO THIS STORY: ರೂ. 2.5 ಲಕ್ಷಕ್ಕಿಂತ ಹೆಚ್ಚಿನ ಆದಾಯವಿದ್ದರೆ ಐಟಿಆರ್ ಕಡ್ಡಾಯ: 2025ರಲ್ಲಿ ಐಟಿಆರ್ ಸಲ್ಲಿಸುವಾಗ ಈ ಹತ್ತು ತಪ್ಪು ಮಾಡಬೇಡಿ!
ರೈತರು ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಪ್ರಕೃತಿ ವಿಕೋಪಗಳು/ಹವಾಮಾನ ವೈಪರೀತ್ಯಗಳಾದ ಅತಿವೃಷ್ಟಿ, ಅನಾವೃಷ್ಟಿ, ಬಿರುಗಾಳಿ, ಆಲಿಕಲ್ಲು ಮಳೆ, ಪ್ರವಾಹ, ಸಿಡಿಲಿನಿಂದ ಉಂಟಾಗುವ ಬೆಂಕಿ ಅವಘಡ ಇತ್ಯಾದಿ ಕಾರಣಗಳಿಂದ ಸಂಭವಿಸಬಹುದಾದ ಬೆಳೆಹಾನಿಯ ನಷ್ಟದ ಪರಿಹಾರವನ್ನು ಬೆಳೆ ವಿಮೆ ಘಟಕವಾರು ನಿರ್ಧರಿಸಿ ಬೆಳೆ ನಷ್ಟದ ಪರಿಹಾರ ನೀಡುವುದರ ಮೂಲಕ ರೈತರಿಗೆ ನೆರವಾಗುತ್ತದೆ.
ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಲು ಆಗಸ್ಟ್ 11 ಕೊನೆಯ ದಿನ.
ಹಸಿಮೆಣಸಿನಕಾಯಿ:
ವಿಮಾ ಮೊತ್ತ-ರೂ.71,000(ಪ್ರತಿ ಹೆಕ್ಟೇರ್‌ಗೆ), ರೈತರು ಪಾವತಿಸಬೇಕಾದ ಪ್ರೀಮಿಯಂ ಮೊತ್ತ(ಪ್ರತಿ ಹೆಕ್ಟೇರ್‌ಗೆ)-ರೂ.3,550.
ದಾಳಿಂಬೆ:
ವಿಮಾ ಮೊತ್ತ-ರೂ.1,27,000(ಪ್ರತಿ ಹೆಕ್ಟೇರ್‌ಗೆ), ರೈತರು ಪಾವತಿಸಬೇಕಾದ ಪ್ರೀಮಿಯಂ ಮೊತ್ತ(ಪ್ರತಿ ಹೆಕ್ಟೇರ್‌ಗೆ)- ರೂ.6,350 ಪಾವತಿಸಬೇಕು.
ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ವಿಮಾ ಮೊತ್ತವು ಹಾಗೂ ಪಾವತಿಸಬೇಕಾದ ವಿಮಾ ಕಂತಿನ ಮೊತ್ತವು ಒಂದೇ ಆಗಿರುತ್ತದೆ. ನೋಂದಣಿ ಮಾಡಲು ಉದ್ದೇಶಿಸಿರುವ ಬೆಳೆಯು ಹಿಂದಿನ ವರ್ಷಗಳ, ಋತುಗಳ (ಮುಂಗಾರಿನ) ಬೆಳೆ ಸಮೀಕ್ಷೆಯಲ್ಲಿ ಕಂಡುಬರದಿದ್ದರೆ ನೋಂದಣಿಗೆ ಅನುಮತಿ ಇರುವುದಿಲ್ಲ.
ಯಾವೆಲ್ಲಾ ದಾಖಲೆಗಳು ಬೇಕು?
- ರೈತರು ಪ್ರಸಕ್ತ ಸಾಲಿನ ಪಹಣಿ
- ಎಫ್‌ಐಡಿ ಸಂಖ್ಯೆ
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಪುಸಕ್ತದ ಪ್ರತಿಯೊಂದಿಗೆ ಹತ್ತಿರದ ಗ್ರಾಮ ಒನ್ ಕೇಂದ್ರ ಅಥವಾ ಬ್ಯಾಂಕ್ ಗಳಲ್ಲಿ ಅಥವಾ ಸಿ.ಎಸ್.ಸಿ ಕೇಂದ್ರಗಳಲ್ಲಿ ವಿಮಾ ಯೋಜನೆಗೆ ನೋಂದಾಯಿಸಿಕೊಳ್ಳಬೇಕು.
ಹವಾಮಾನ ಅಂಶಗಳಾದ ಮಳೆ ಪ್ರಮಾಣ, ಗಾಳಿಯ ವೇಗ, ಆರ್ದ್ರತೆ ಇತ್ಯಾದಿ ಮಾಹಿತಿಗಳನ್ನು ಸ್ಥಳೀಯವಾಗಿ ಲಭ್ಯವಿರುವ ಟೆಲಿ ಮೆಟ್ರಿಕ್ ಮಳೆಮಾಪನ ಕೇಂದ್ರಗಳಲ್ಲಿ ದಾಖಲಿಸುವ ಅಂಶಗಳ ಆಧಾರದ ಮೇಲೆ ಬೆಳೆ ವಿಮೆ ನಷ್ಟ ತೀರ್ಮಾನಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆ ಕಚೇರಿ, ರೈತ ಸಂಪರ್ಕ ಕೇಂದ್ರದ ಅಧಿಕಾರಿ, ಸಿಬ್ಬಂದಿ ಹಾಗೂ ಹತ್ತಿರದ ಬ್ಯಾಂಕ್ ಶಾಖೆಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.