SUDDIKSHANA KANNADA NEWS/ DAVANAGERE/ DATE:01_08_2025
ದಾವಣಗೆರೆ: ಯೂರಿಯಾ ರಸಗೊಬ್ಬರ ಸಗಟು ಮಾರಾಟಗಾರರಿಗೆ ಹಂಚಿಕೆಯಾದ ರಸಗೊಬ್ಬರವನ್ನು ಜಿಲ್ಲೆಯಲ್ಲಿನ ಚಿಲ್ಲರೆ ಮಾರಾಟಗಾರರಿಗೆ ಪೂರೈಕೆ ಮಾಡದೆ ಬೇರೆ ಜಿಲ್ಲೆಗಳಿಗೆ ಮಾರಾಟ ಮಾಡಿದ್ದರಿಂದ ಇವರ ಲೈಸೆನ್ಸ್ ಗಳನ್ನುರದ್ದುಪಡಿಸಲಾಗಿದೆ.
READ ALSO THIS STORY: BIG EXCLUSIVE: ಮಾಜಿ ಪ್ರಧಾನಿ ಮೊಮ್ಮಗ ಪ್ರಜ್ವಲ್ ರೇವಣ್ಣ ಅತ್ಯಾಚಾರ ಕೇಸ್ ನಲ್ಲಿ ದೋಷಿ: ಮಾಜಿ ಸಂಸದನಿಗೆ ಶಾಕ್!
ರದ್ದುಪಡಿಸಲಾದ ಲೈಸೆನ್ಸ್ ದಾರರಲ್ಲಿ ದಾವಣಗೆರೆಯ ಆಶಾಪೂರಿ ಫರ್ಟಿಲೇಸರ್ಸ್, ರಾಥೋಡ್ ಫರ್ಟಿಲೇಸರ್ಸ್, ಶ್ರೀ ಮಲ್ಲಿಕಾರ್ಜುನ ಫರ್ಟಿಲೇಸರ್ಸ್, ದಿಬ್ಬದಹಳ್ಳಿ ಆಗ್ರೋ ಸರ್ವೀಸ್, ಶ್ರೀಶ್ರೀನಿವಾಸ ಆಗ್ರೋ ಟ್ರೇಡರ್ಸ್, ಕಿಶೋರ್ ಫರ್ಟಿಲೇಸರ್ಸ್, ಚನ್ನಗಿರಿ ತಾಲ್ಲೂಕಿನ ನಲ್ಲೂರು ವೀರಭದ್ರೇಶ್ವರ ಫರ್ಟಿಲೇಸರ್ಸ್, ಗೋಪನಹಳ್ಳಿ ವೀರಭದ್ರೇಶ್ವರ ಟ್ರೇಡರ್ಸ್.
ಚಿಲ್ಲರೆ ಮಾರಾಟಗಾರರ ಲೈಸೆನ್ಸ್ ಅಮಾನತು: ರಸಗೊಬ್ಬರ ಚಿಲ್ಲರೆ ಮಾರಾಟಗಾರರು ರಸಗೊಬ್ಬರವನ್ನು ಎಂ.ಆರ್.ಪಿ. ಅಂದರೆ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರವನ್ನು ಮಾರಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿ ಪರವಾನಗಿಯನ್ನು ಅಮಾನತಿನಲ್ಲಿಡಲಾಗಿದೆ.
ದಾವಣಗೆರೆಯ ಭೂಮಿಕ ಆಗ್ರೋ ಫರ್ಟಿಲೇಸರ್ಸ್, ವಿನಿತ ಆಗ್ರೋ ಏಜೆನ್ಸೀಸ್, ಕುಮಾರ್ ಆಗ್ರೋ ಏಜೆನ್ಸೀಸ್, ಆನಗೋಡು ಜೆನುಕಲ್ಲು ಸಿದ್ದೇಶ್ವರ ಟ್ರೇಡರ್ಸ್ ಮತ್ತು ಸೂರ್ಯ ಆಗ್ರೋ ಎಂಟರ್ ಪ್ರೈಸಸ್ ಈ ಅಂಗಡಿಗಳ
ಲೈಸೆನ್ಸ್ ಅಮಾನತಿಲ್ಲಿಡಲಾಗಿದೆ.