Home ಕ್ರೈಂ ನ್ಯೂಸ್ “ನನಗೇಕೆ ನೋಟಿಸ್? ಡಿಸಿ ಪಿಎ ಮೊಬೈಲ್ ವಶಕ್ಕೆ ಪಡೆಯಿರಿ”: ಹೆಚ್. ಡಿ. ಕುಮಾರಸ್ವಾಮಿ ಕೆಂಡಾಮಂಡಲ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

“ನನಗೇಕೆ ನೋಟಿಸ್? ಡಿಸಿ ಪಿಎ ಮೊಬೈಲ್ ವಶಕ್ಕೆ ಪಡೆಯಿರಿ”: ಹೆಚ್. ಡಿ. ಕುಮಾರಸ್ವಾಮಿ ಕೆಂಡಾಮಂಡಲ!

Share
ಕುಮಾರಸ್ವಾಮಿ
Share

ಬೆಂಗಳೂರು: ಹಾಸನ ಜಿಲ್ಲೆಯಲ್ಲಿ ನಡೆದಿದೆ ಎನ್ನಲಾದ ಲಂಚದ ಜಾಲ ಹಾಗೂ ವರ್ಗಾವಣೆ ಹಗರಣದ ಕುರಿತು ಆರೋಪ ಮಾಡಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸೈಬರ್ ಕ್ರೈಮ್ ಪೊಲೀಸರು ನೋಟಿಸ್ ನೀಡಿದ್ದಾರೆ. ಇದಕ್ಕೆ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

“ಮುಖ್ಯಮಂತ್ರಿಯವರೇ ಈಗಾಗಲೇ ಕ್ಲೀನ್ ಚಿಟ್ ನೀಡಿದ ಮೇಲೆ ನನ್ನೇಕೆ ನೋಟಿಸ್ ನೀಡಿ ವಿಚಾರಣೆಗೆ ಕರೆಯುತ್ತಿದ್ದೀರಿ?” ಎಂದು ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪೊಲೀಸರ ಮಾಹಿತಿಯ ಪ್ರಕಾರ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಮತ್ತು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ವಿರುದ್ಧ ಕುಮಾರಸ್ವಾಮಿ ಅವರು ಲಂಚದ ಆರೋಪ ಮಾಡಿ, ಕೆಲ ವಾಟ್ಸಾಪ್ ಚಾಟ್‌ಗಳನ್ನು ಬಹಿರಂಗಪಡಿಸಿದ್ದರು. ಈ ಸಂಬಂಧ ಸೈಬರ್ ಕ್ರೈಮ್ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದು, ಕುಮಾರಸ್ವಾಮಿ ಅವರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಕುಮಾರಸ್ವಾಮಿ ಪ್ರಶ್ನೆ: ತಮಗೆ ಬಂದಿದ್ದ ದಾಖಲೆಗಳು ಹಾಗೂ ವಾಟ್ಸಾಪ್ ಚಾಟ್‌ಗಳನ್ನು ಪರಿಶೀಲಿಸುವಂತೆ ಮಾತ್ರ ನಾನು ಕೋರಿದ್ದೆ ಹೊರತು ನೇರ ಆರೋಪ ಮಾಡಿಲ್ಲ. ಮುಖ್ಯಮಂತ್ರಿಯೇ ಕ್ಲೀನ್ ಚಿಟ್ ಕೊಟ್ಟಮೇಲೆ ನನ್ನಿಂದ ಯಾವ ಮಾಹಿತಿ ಪಡೆಯಲು ಬಯಸುತ್ತೀರಿ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಮೊಬೈಲ್ ಜಪ್ತಿಗೆ ಒತ್ತಾಯ: ತನಿಖೆ ಮಾಡುವುದೇ ಆದರೆ, ಆರೋಪಿತರ ಮತ್ತು ವಿಶೇಷವಾಗಿ ಡಿಸಿ ಅವರ ಆಪ್ತ ಸಹಾಯಕರ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡು ಪರಿಶೀಲಿಸಿದರೆ ಅಸಲಿ ಸತ್ಯ ಹೊರಬರುತ್ತದೆ ಎಂದು ಅವರು ಒತ್ತಾಯಿಸಿದ್ದಾರೆ.

ಆರೋಪಗಳ ಹಿನ್ನೆಲೆ: ಡಿಸಿ ಲತಾಕುಮಾರಿ ತಮ್ಮ ಹುದ್ದೆ ಉಳಿಸಿಕೊಳ್ಳಲು 70 ಲಕ್ಷ ರೂ. ನೀಡಿದ್ದಾರೆ ಮತ್ತು ಕಡತಗಳನ್ನು ವಿಲೇವಾರಿ ಮಾಡಲು ಲಕ್ಷಾಂತರ ರೂಪಾಯಿ ಲಂಚ ಪಡೆಯಲಾಗುತ್ತಿದೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದರು. ಇದಕ್ಕೆ ಡಿಸಿ ಹಾಗೂ ಸಚಿವ ಶಿವಲಿಂಗೇಗೌಡರು ಆಪಾದನೆಗಳನ್ನು ತಳ್ಳಿಹಾಕಿದ್ದರು.

Share