SUDDIKSHANA KANNADA NEWS/ DAVANAGERE/ DATE:04-10-2023
ಭಾರತೀಯ ಷೇರುಪೇಟೆ (Stock market)ಯಲ್ಲಿ ಕುಸಿತ ಇಂದೂ ಸಹಾ ಮುಂದುವರೆದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಋಣಾತ್ಮಕ ವಹಿವಾಟಿನ ಸೂಚನೆಗಳು, ಡಾಲರ್ ಸೂಚ್ಯಂಕವು 106.70 ಅನ್ನು ದಾಟಿರುವುದು ಮತ್ತು US 10-ವರ್ಷದ ಬಾಂಡ್ ಇಳುವರಿಯು ಶೇಕಡಾ 4.83 ರಷ್ಟು ತಲುಪಿರುವುದು ಮತ್ತು ಎಫ್‌ಐಐಗಳು ಸತತವಾಗಿ ಮಾರಾಟ ಮಾಡುತ್ತಿರುವುದರಿಂದ ದೇಶೀಯ ಮಾರುಕಟ್ಟಯಲ್ಲಿ ಸೂಚ್ಯಂಕಗಳು ಕುಸಿತ ಕಂಡಿದೆ. ಇದರಿಂದಾಗಿ ಸತತ ನಾಲ್ಕನೇ ದಿನ ದಾಖಲಿಸಿದೆ.
Read Also This Story:
Cricket World Cup: ವಿಶ್ವಕಪ್ ಕ್ರಿಕೆಟ್ ಪ್ರಾರಂಭದ ಕಾರಣಕ್ಕೆ ಹಾಸ್ಟೆಲ್ ಗಳ ಮೇಲೆ ಪೊಲೀಸರು ನಿಗಾ ವಹಿಸುವಂತೆ ಮನವಿ ಮಾಡಿರುವುದೇಕೆ…?
ದಿನದ ಅಂತ್ಯಕ್ಕೆ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ -92.66 (-0.47%) ಅಂಕ ಇಳಿಕೆ ಕಂಡು 19,436.10 ರಲ್ಲಿ ಮತ್ತು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ -286.06 (-0.43%) ಅಂಕ ಇಳಿಕೆ ಕಂಡು 65,226.04 ರಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದವು.
ಏರಿಕೆ ಕಂಡ ಷೇರುಗಳು:
ಇಂದು ನಿಫ್ಟಿಯಲ್ಲಿ ADANIENT, NESTLEIND, EICHERMOT, HINDUNILVR, HDFCBANK ಷೇರುಗಳು ಜಿಗಿತ ಕಂಡವು.
ಇಳಿಕೆ ಕಂಡ ಷೇರುಗಳು:
ನಿಫ್ಟಿಯಲ್ಲಿ AXISBANK, SBIN, NTPC, INDUSINDBK, BAJAJ-AUTO ಷೇರುಗಳು ನಕಾರಾತ್ಮಕ ವಹಿವಾಟು ನಡೆಸಿದವು.
ಕರೆನ್ಸಿ ವಹಿವಾಟು:
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 83.25 ಕ್ಕೆ ತನ್ನ ವಹಿವಾಟು ಕೊನೆಗೊಳಿಸಿದೆ.
FII ಮತ್ತು DII ನಗದು ವಹಿವಾಟು ವಿವರ:
ಇಂದಿನ ಮಾರುಕಟ್ಟೆಯ ಅಂತ್ಯದಲ್ಲಿ ‘ವಿದೇಶಿ ಸಾಂಸ್ಥಿಕ ಹೂಡಿಕೆದಾರರು” (FII) : ರೂ. -4,424.02 ಕೋಟಿ ನಿವ್ವಳ ಮಾರಾಟ ಮಾಡಿದರೆ , ‘ದೇಶೀಯ ಸಾಂಸ್ಥಿಕ ಹೂಡಿಕೆದಾರರು’ (DII) ರೂ.1,769.49 ಕೋಟಿ ನಿವ್ವಳ ಖರೀದಿ ಮಾಡಿದ್ದಾರೆ.
ಗಿರೀಶ್ ಕೆ ಎಂ