
ದಾವಣಗೆರೆ: ಜಿಲ್ಲೆಯಲ್ಲಿ ಮಳೆಯ ಅಭಾವದಿಂದಾಗಿ ರೈತರು ತಮ್ಮ ಜಮೀನುಗಳಲ್ಲಿ ಕೊಳವೆ ಬಾವಿ (ಬೋರ್ವೆಲ್) ಕೊರೆಯಿಸಲು ಮುಂದಾಗುತ್ತಿದ್ದು, ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ರಿಗ್ ಮಾಲೀಕರು ರೈತರಿಂದ ನಿಗದಿತ ದರಕ್ಕಿಂತ ಹೆಚ್ಚುವರಿಯಾಗಿ ಹಣ ವಸೂಲಿ ಮಾಡಿದರೆ ಅಂತಹವರ ವಿರುದ್ಧ ಕಾನೂನು ರೀತ್ಯ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವರಾದ ಕೆ.ಎಸ್. ಬಸಂತಪ್ಪ ಅವರು ಎಚ್ಚರಿಕೆ ನೀಡಿದ್ದಾರೆ.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬರ ನಿರ್ವಹಣೆ ಹಾಗೂ ಕುಡಿಯುವ ನೀರಿನ ಪರಿಶೀಲನಾ ಸಭೆ ಹಾಗೂ ರಿಗ್ ಮಾಲೀಕರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆಯಿಂದಾಗಿ ರೈತರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಬೆಳೆಗಳನ್ನು ಉಳಿಸಿಕೊಳ್ಳಲು ಅನಿವಾರ್ಯವಾಗಿ ಕೊಳವೆ ಬಾವಿ ಕೊರೆಯಿಸುತ್ತಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ರಿಗ್ ಮಾಲೀಕರು ಕೃತಕ ಅಭಾವ ಸೃಷ್ಟಿಸಿ ಅಥವಾ ಮನಬಂದಂತೆ ದರ ನಿಗದಿಪಡಿಸಿ ರೈತರನ್ನು ಶೋಷಿಸುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ನಿಯಮ ಉಲ್ಲಂಘಿಸುವ ರಿಗ್ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಸಚಿವರು ತಿಳಿಸಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಹೊಸದಾಗಿ ಕೊಳವೆ ಬಾವಿ ಕೊರಿಸುವ ಕಾರ್ಯವನ್ನು ತುರ್ತಾಗಿ ಮಾಡಬೇಕು ಮತ್ತು ಅಗತ್ಯವಿರುವ ಕಡೆ ಖಾಸಗಿ ಕೊಳವೆ ಬಾವಿ ಮಾಲೀಕರಿಂದ ನೀರನ್ನು ಪಡೆದು ಸಾರ್ವಜನಿಕರಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಅಥವಾ ತೊಂದರೆಯಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ರೈತರಿಗೆ ಉಚಿತ ವೈಜ್ಞಾನಿಕ ಅಂತರ್ಜಲ ಪರೀಕ್ಷೆ ಸೌಲಭ್ಯ: ರೈತರ ಹಿತದೃಷ್ಟಿಯಿಂದ ಜಮೀನುಗಳ ವೈಜ್ಞಾನಿಕ ಪರೀಕ್ಷೆಯನ್ನು ಸಂಪೂರ್ಣ ಉಚಿತವಾಗಿ ಮಾಡಿಕೊಡಲಿದೆ. ರೈತರು ತಮ್ಮ ಜಮೀನನಲ್ಲಿ ಕೊಳವೆಬಾವಿ ಅಂತರ್ಜಲ ಪರೀಕ್ಷೆಯನ್ನು ಇನ್ನು ಮುಂದೆ ಯಾವುದೇ ಶುಲ್ಕವಿಲ್ಲದೆ ಮಾಡಿಸಿಕೊಳ್ಳಬಹುದಾಗಿದೆ. ಈ ಹಿಂದೆ ಸರ್ಕಾರದ ಅನುದಾನ ಲಭ್ಯವಿಲ್ಲದ ಕಾರಣ ಪರೀಕ್ಷೆಗಳಿಗೆ ಶುಲ್ಕ ವಿಧಿಸಲಾಗುತ್ತಿತ್ತು. ಆದರೆ ಇನ್ನು ಮುಂದೆ ರೈತರಿಗೆ ಆರ್ಥಿಕ ಹೊರೆ ತಪ್ಪಿಸುವ ಉದ್ದೇಶದಿಂದ, ವೈಜ್ಞಾನಿಕವಾಗಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳಲು ಸಂಪೂರ್ಣ ಸಹಾಯ ಮಾಡಲಿದೆ ರೈತರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು ಹಾಗೂ ಹೆಚ್ಚಿನ ಮಾಹಿತಿಗಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ನಾಗೇಂದ್ರಪ್ಪ ಅವರನ್ನು ಸಂಪರ್ಕಿಸುವಂತೆ ತಿಳಿಸಿದರು.
ಕೊಳವೆಬಾವಿ ಕೊರೆಯುವ ವಿಚಾರದಲ್ಲಿ ರೈತರಿಗೆ ಆರ್ಥಿಕವಾಗಿ ಅಥವಾ ತಾಂತ್ರಿಕವಾಗಿ ಯಾವುದೇ ರೀತಿಯ ವಂಚನೆ ಎಸಗುವುದು ಕಂಡುಬಂದಲ್ಲಿ ಅಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ನಿಯಮಬಾಹಿರವಾಗಿ ಕಾರ್ಯನಿರ್ವಹಿಸುವ ಹಾಗೂ ರೈತರಿಗೆ ಮೋಸ ಮಾಡುವ ರಿಗ್ ಮಾಲೀಕರು ಮತ್ತು ಅವರಿಗೆ ಸಹಕರಿಸುವ ಮಧ್ಯವರ್ತಿಗಳ ವಿರುದ್ಧ ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ) ಅಧಿನಿಯಮದಡಿ ಕಾನೂನು ರೀತ್ಯಾ ಕಠಿಣ ಕ್ರಮ ಜರುಗಿಸಲಾಗುವುದು. ಅಲ್ಲದೆ, ಅಂತಹವರ ರಿಗ್ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದರ ಜೊತೆಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಅವರು ಮಾತನಾಡಿ, ಜಿಲ್ಲೆಯ ವಿವಿಧ ಭಾಗಗಳಲ್ಲಿ ಅತಿ ಹೆಚ್ಚು ವಿಫಲ ಬೋರ್ವೆಲ್ಗಳು ಇರುವ ಪ್ರದೇಶಗಳನ್ನು ಗುರುತಿಸಿ, ಅಲ್ಲಿಯ ನೀರಿನ ಸ್ಥಿತಿಗತಿಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲು ‘ಐಸೊಟ್ರೋಪಿಕ್ ಸರ್ವೇ’ (Isotopic Survey) ನಡೆಸಲಾಗುವುದು. ಸೆಂಟ್ರಲ್ ವಾಟರ್ ಬೋರ್ಡ್ (CPWD) ಸಹಯೋಗದೊಂದಿಗೆ ಈ ಸರ್ವೇ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರೈತರು ಸರ್ಕಾರದಿಂದ ಅಧಿಕೃತವಾಗಿ ನೋಂದಾಯಿತ ಹಾಗೂ ಮಾನ್ಯತೆ ಪಡೆದ ರಿಗ್ (ಕೊಳವೆಬಾವಿ ಕೊರೆಯುವ ಯಂತ್ರ) ಮಾಲೀಕರಿಂದ ಮಾತ್ರವೇ ಕೊಳವೆಬಾವಿಗಳನ್ನು ಕೊರೆಸಿಕೊಳ್ಳಬೇಕು; ಯಾವುದೇ ಕಾರಣಕ್ಕೂ ಅನಧಿಕೃತ ಏಜೆಂಟರು ಅಥವಾ ಮಧ್ಯವರ್ತಿಗಳನ್ನು ಸಂಪರ್ಕಿಸಿ ಮೋಸ ಹೋಗಬಾರದು. ಒಂದೊಮ್ಮೆ ಕೊಳವೆಬಾವಿ ಕೊರೆಯುವ ವಿಚಾರದಲ್ಲಿ, ದರ ನಿಗದಿಯಲ್ಲಿ ಅಥವಾ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸುವ ಮೂಲಕ ರೈತರಿಗೆ ವಂಚನೆ ಎಸಗಿರುವುದು ಕಂಡುಬಂದಲ್ಲಿ, ಸಂಬಂಧಪಟ್ಟ ಅನಧಿಕೃತ ರಿಗ್ ಮಾಲೀಕರು ಹಾಗೂ ಮಧ್ಯವರ್ತಿಗಳ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಜರುಗಿಸಲಾಗುವುದು ಮತ್ತು ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಿಗ್ ಮಾಲೀಕರ ಹೆಸರು ಮತ್ತು ವಿಳಾಸ: 1. ಬಾಲಾಜಿ ಬೋರ್ವೆಲ್ಸ್ ಪ್ರೋ. ಎಸ್.ಮಂಜುನಾಥ್, ಹೊರಕೆರೆ, ಜಗಳೂರು ತಾಲ್ಲೂಕು ದಾವಣಗೆರೆ ಜಿಲ್ಲೆ. ರಿಗ್ ವಾಹನ ಸಂಖ್ಯೆ: KA-01-MJ-5171 ದೂರವಾಣಿ ಸಂಖ್ಯೆ: 9845280298 2.ಶ್ರೀ.ಮಂಜುನಾಥ ಯರಲಕಟ್ಟೆ, ಸೊಕ್ಕೆ ಪೋಸ್ಟ್, ಜಗಳೂರು ತಾಲ್ಲೂಕು, ದಾವಣಗೆರೆ ಜಿಲ್ಲೆ ರಿಗ್ ವಾಹನ ಸಂಖ್ಯೆ: ΚΑ-01-MA-4735 ದೂರವಾಣಿ ಸಂಖ್ಯೆ: 9945073238 ಶ್ರೀ ನಂದಿ ಬೋರ್ವೆಲ್ಸ್, ಪ್ರೋ: ಶ್ರೀ.ಮತಿ ಜಯಮ್ಮ, ಕಾಡಜ್ಜಿ, ದಾವಣಗೆರೆ ತಾಲ್ಲೂಕು ಮತ್ತು ಜಿಲ್ಲೆ ರಿಗ್ ವಾಹನ ಸಂಖ್ಯೆ: KA017 MC 8435 & KA017 MC 8311 ದೂರವಾಣಿ ಸಂಖ್ಯೆ: 8095932998, 4. ಶ್ರೀ ನಂದಿ ಬೋರ್ವೆಲ್ಸ್, ಪ್ರೋ: ಶ್ರೀ.ಪ್ರಕಾಶ್ಗೌಡ, ಕಾಡಜ್ಜಿ, ದಾವಣಗೆರೆ ತಾಲ್ಲೂಕು ಮತ್ತು ಜಿಲ್ಲೆ ರಿಗ್ ವಾಹನ ಸಂಖ್ಯೆ:, KA017 MC 2616 & KA017 MC 2617 ದೂರವಾಣಿ ಸಂಖ್ಯೆ: 8880813691 5. ಮೆ: ಮಹಾಂತೇಶ ಬೋರ್ವೆಲ್ಸ್, ಪ್ರೋ. ಹೆಚ್ ಮಹಾಂತೇಶ್, ಕಡರನಾಯ್ಕನಹಳ್ಳಿ, ಹರಿಹರ ತಾಲ್ಲೂಕು ರಿಗ್ ವಾಹನ ಸಂಖ್ಯೆ: KA01 MF 4129 & ΚΑ 07 Β 3324 ದೂರವಾಣಿ ಸಂಖ್ಯೆ: 9980448516 6. ಮೆ. ರಾಜಸ್ವ ಬೋರ್ವೆಲ್ಸ್ ಪ್ರೋ.ಲಕ್ಷ್ಮೀಕಾಂತ್, ಕುಂದವಾಡ ರಸ್ತೆ, ದಾವಣಗೆರೆ ಜಿಲ್ಲೆ. ರಿಗ್ ವಾಹನ ಸಂಖ್ಯೆ: KA-01-MU-1129 & KA-01-MU-1127 ದೂರವಾಣಿ ಸಂಖ್ಯೆ: 8747900715 7. ಲಕ್ಷ್ಮೀ ಬೋರ್ವೆಲ್ಸ್ ಪ್ರೋ. ಎಂ.ಆರ್ ಸುಹಾಸ್, ಮಿಟ್ಲಕಟ್ಟೆ, ಹರಿಹರ ತಾಲ್ಲೂಕು, ದಾವಣಗೆರೆ ಜಿಲ್ಲೆ ರಿಗ್ ವಾಹನ ಸಂಖ್ಯೆ: KA-01-ND-6406 & KA-01-ND-6407 ದೂರವಾಣಿ ಸಂಖ್ಯೆ: 8088274931.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಾಹಿತ್ಯ ಎಂ ಆಲದಕಟ್ಟಿ ಕೃಷಿ ಜಂಟಿ ನಿರ್ದೇಶಕ ಜಿಯಾವುಲ್ಲಾ, ತೋಟಗಾರಿಕೆ ಉಪ ನಿರ್ದೇಶಕ ರಾಘವೇಂದ್ರ, ಹಿರಿಯ ಭೂವಿಜ್ಞಾನಿ ಬಸವರಾಜು, ಮಹಾನಗರ ಪಾಲಿಕೆ ಕಾರ್ಯಪಾಲಕ ಅಭಿಯಂತರ ಉದಯ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ರಿಗ್ ಮಾಲೀಕರುಗಳು ಉಪಸ್ಥಿತರಿದ್ದರು.
- borewell rig owners warning
- Davangere District Administration
- Davangere News
- drought management Karnataka
- free groundwater testing
- Minister KS Basantappa
- ಉಚಿತ ಅಂತರ್ಜಲ ಪರೀಕ್ಷೆ
- ಕುಡಿಯುವ ನೀರಿನ ಸಮಸ್ಯೆ ಬರ ನಿರ್ವಹಣೆ
- ಕೊಳವೆ ಬಾವಿ ದರ ನಿಯಂತ್ರಣ
- ದಾವಣಗೆರೆ ಜಿಲ್ಲಾ ಸುದ್ದಿ
- ದಾವಣಗೆರೆ ಜಿಲ್ಲಾಧಿಕಾರಿ.
- ರಿಗ್ ಮಾಲೀಕರ ಸಭೆ
- ಸಚಿವ ಕೆ.ಎಸ್. ಬಸಂತಪ್ಪ




