SUDDIKSHANA KANNADA NEWS/ DAVANAGERE/ DATE:28_07_2025
ನವದೆಹಲಿ: ಸಂಗೀತ ಮಾಂತ್ರಿಕ ಇಳಯರಾಜ ಯಾರಿಗೆ ಗೊತ್ತಿಲ್ಲ ಹೇಳಿ. ತಮಿಳು, ತೆಲುಗು, ಕನ್ನಡ, ಹಿಂದಿ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಸಂಗೀತ ಮಾಂತ್ರಿಕ.
READ ALSO THIS STORY: ಚನ್ನಗಿರಿಯಲ್ಲಿ ಗಂಡನಿಗೆ ಮಕ್ಕಳಾಗಲ್ಲವೆಂದು ಪ್ರಿಯಕರನ ಸಂಗ: ಪತಿ ಕೊಂದು ಆತ್ಮಹತ್ಯೆಯಂತೆ ಬಿಂಬಿಸಿದ್ದ ಪತ್ನಿ, ಪ್ರಿಯಕರ ಸೇರಿ ಮೂವರ ಬಂಧಿಸಿದ್ದೇ ರೋಚಕ!
ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ ಹಾಸನ್, ಕನ್ನಡದ ಡಾ. ರಾಜ್ ಕುಮಾರ್, ಶಂಕರ್ ನಾಗ್, ಚಿರಂಜೀವಿ, ನಾಗಾರ್ಜುನ, ಧನುಷ್ ಸೇರಿದಂತೆ ಖ್ಯಾತನಾಮ ನಟರಿಂದ ಹಿಡಿದು ಹೊಸಬರಿಗೂ ಸಂಗೀತ
ನೀಡಿರುವ ಹೆಗ್ಗಳಿಕೆ ಹೊಂದಿದ್ದಾರೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಸಿನಿಮಾಗಳಿಗೆ ಮ್ಯೂಸಿಕ್ ನೀಡುವ ಮೂಲಕ ಮನೆ ಮಾತಾಗಿದ್ದಾರೆ. ಇಳಯರಾಜ ಸಂಗೀತದಲ್ಲಿ ಎಸ್. ಪಿ. ಬಾಲಸುಬ್ರಹ್ಮಣ್ಯಂ, ಯೇಸುದಾಸ್ ಸೇರಿದಂತೆ ದೇಶದ ಖ್ಯಾತ ಗಾಯಕರು ಹಾಡಿದ್ದಾರೆ.
ಆದ್ರೆ, ಈಗ ಸಂಗೀತ ನಿರ್ದೇಶಕ ಇಳಯರಾಜ ಅವರಿಗೆ ಸುಪ್ರೀಂಕೋರ್ಟ್ ಶಾಕ್ ಕೊಟ್ಟಿದೆ. ಸಂಗೀತಗಾರ ಇಳಯರಾಜ ಅವರ ಕೃತಿಸ್ವಾಮ್ಯ ಪ್ರಕರಣವನ್ನು ಮದ್ರಾಸ್ ಹೈಕೋರ್ಟ್‌ಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿದೆ
ತಮ್ಮ 500 ಕ್ಕೂ ಹೆಚ್ಚು ಸಂಯೋಜನೆಗಳ ಕುರಿತ ಕೃತಿಸ್ವಾಮ್ಯ ಪ್ರಕರಣವನ್ನು ಬಾಂಬೆ ಹೈಕೋರ್ಟ್‌ನಿಂದ ಮದ್ರಾಸ್ ಹೈಕೋರ್ಟ್‌ಗೆ ವರ್ಗಾಯಿಸಲು ಸಂಗೀತಗಾರ ಇಳಯರಾಜ ಅವರ ಮನವಿಯನ್ನು ಸುಪ್ರೀಂ ಕೋರ್ಟ್
ಒಪ್ಪಿಲ್ಲ.
500 ಕ್ಕೂ ಹೆಚ್ಚು ಸಂಯೋಜನೆಗಳನ್ನು ಒಳಗೊಂಡ ಹಕ್ಕುಸ್ವಾಮ್ಯ ಪ್ರಕರಣದ ವರ್ಗಾವಣೆಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ ಎಂದು ಪಿಟಿಐ ವರದಿ ಮಾಡಿದೆ.