SUDDIKSHANA KANNADA NEWS/ DAVANAGERE/ DATE:26_07_2025
ದಾವಣಗೆರೆ: ದಾವಣಗೆರೆ ದಕ್ಷಿಣ ಬಿಜೆಪಿ ವಿಧಾನಸಭಾ ಕ್ಷೇತ್ರದ ವತಿಯಿಂದ ನಗರದ ಕಾಯಿ ಪೇಟೆ ಬಸವೇಶ್ವರ ದೇವಸ್ಥಾನದ ಹತ್ತಿರ ಕಾರ್ಗಿಲ್ ವಿಜಯ ದಿವಸ ಹಾಗೂ ಮಾಜಿ ಸೈನಿಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮಾಜಿ ಸೈನಿಕರಾದ ಮೇಜರ್ ಸುಬೇದಾರ ಚಂದ್ರಪ್ಪ, ಕೆ ಬಿ.ಬಸವರಾಜ್, ಸುರೇಶ್ ರಾವ್, ರವಿಚಂದ್ರ, ವೀರಪ್ಪ ಕೆ. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ ಅಟಲ್ ಬಿಹಾರಿ ವಾಜಪೇಯಿ ದೇಶದ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಕಾರ್ಗಿಲ್ ಯುದ್ಧ ನಡೆದಿತ್ತು ಪಾಕಿಸ್ತಾನವು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದೆ ಎಂದು ಅಮೆರಿಕದ ಅಧ್ಯಕ್ಷ ತಡರಾತ್ರಿ ಅಟಲ್ ಜೀ ಅವರಿಗೆ ಕರೆ ಮಾಡಿ ಪಾಕ ಮೇಲೆ ಯುದ್ಧ ನಿಲ್ಲಿಸದಿದ್ದರೆ ಪರಮಾಣು ದಾಳಿ ಮಾಡುವುದಾಗಿ ಹೇಳುತ್ತಿದೆ ಎಂಗದು ತಿಳಿಸಿತ್ತು. ಅಟಲ್ ಜೀ ಅವರು ಕಾಶ್ಮೀರದ ಒಂದು ಭಾಗ ನಾಶವಾಯಿತು ಎಂದು ತಿಳಿದುಕೊಳ್ಳುವೆ. ಆದರೆ ಬೆಳಗಾಗುವುದರೊಳಗೆ ವಿಶ್ವ ಭೂಪಟದಲ್ಲಿ ಪಾಕಿಸ್ತಾನ ಇರುವುದಿಲ್ಲ ಎಂಬ ದಿಟ್ಟತನ ಪ್ರದರ್ಶಿಸಿದ್ದರು ಎಂದು ತಿಳಿಸಿದರು.
Read Also This Story: SPECIAL STORY: ಚಾಣಾಕ್ಷ ನಾಯಕ ಕಾಂಗ್ರೆಸ್ ಕಟ್ಟಾಳು “ಗಜೇಂದ್ರ” ಜಗನ್ನಾಥ
ಮಾಜಿ ಸೈನಿಕರಾದ ಚಂದ್ರಪ್ಪ ಸುಬೇದಾರ್ ಮಾತನಾಡಿ ಸೇವೆಯಲ್ಲಿ ಇದ್ದ ಸಂದರ್ಭದಲ್ಲಿ ಅನೇಕ ಅನುಭವಗಳನ್ನು ಹಚ್ಚಿಕೊಂಡು ಸೈನಿಕರ ಈ ತ್ಯಾಗಕ್ಕೆ ಬೆಲೆ ಕೊಟ್ಟು ಪ್ರಧಾನಿ ಮೋದಿ ಅವರು ಪ್ರತಿ ವರ್ಷ ಸೈನಿಕರ ಜೊತೆ ಪ್ರತಿ ಹಬ್ಬವನ್ನು ಆಚರಿಸುವ ಸಂಪ್ರದಾಯ ರೂಢಿಸಿಕೊಂಡಿದ್ದಾರೆ. ಸೈನಿಕರ ಆತ್ಮಸ್ವಸ್ಥೈರ್ಯವನ್ನು ತುಂಬುವಂಥ ಕೆಲಸವನ್ನು ನರೇಂದ್ರ ಮೋದಿ ಅವರು ಮಾಡುತ್ತಿದ್ದಾರೆ ಇಂಥ ಪ್ರಧಾನಿ ಜೊತೆ ದೇಶದ ಜನತೆ ಸದಾ ಬೆಂಬಲವಾಗಿ ನಿಲ್ಲಬೇಕೆಂದು ಅಭಿಪ್ರಾಯಪಟ್ಟರು.
ಮಾಜಿ ಸೈನಿಕರಾದ ಚಂದ್ರಪ್ಪ ಸುಬೇದಾರ್ ಮಾತನಾಡಿ ಸೇವೆಯಲ್ಲಿ ಇದ್ದ ಸಂದರ್ಭದಲ್ಲಿ ಅನೇಕ ಅನುಭವಗಳನ್ನು ಹಚ್ಚಿಕೊಂಡರು. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ರಮೇಶ್ ನಾಯಕ್, ಲೀಗಲ್ ಸೆಲ್
ಸಂಚಾಲಕ ಎಸಿ ರಾಘವೇಂದ್ರ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ. ಪಾಟೀಲ್, ಸ್ಮಾರ್ಟ್ ಸಿಟಿ ಮಾಜಿ ನಿರ್ದೇಶಕ ಎಸ್ ಬಾಬು, ರೈಲ್ವೆ ಸಲಹಾ ಸಮಿತಿ ಸದಸ್ಯ ಎಸ್ ಬಾಲಚಂದ್ರ ಶೆಟ್ಟಿ, ಶಿವಾನಂದ್, ಮಾಜಿ ಆರೋಗ್ಯ ರಕ್ಷಾ
ಸಮಿತಿ ಸದಸ್ಯ ಟಿಂಕರ್ ಮಂಜಣ್ಣ, ಕಿಶೋರ್ ಕುಮಾರ್, ಆಶ್ರಯ ಸಮಿತಿ ಮಾಜಿ ಸದಸ್ಯರಾದ ಆನಂದ ಹಿರೇಮಠ, ದುರುಗೇಶ್, ಆನೆಕೊಂಡ ಪುಟ್ಟಣ್ಣ, ಗುರು ಸೋಗಿ, ಹರೀಶ್ ಹೊನ್ನೂರ್, ರವಿಕುಮಾರ್, ಕೆ. ಎಂ..ಬಸವರಾಜ, ಹನುಮಂತಪ್ಪ, ನಾಗರಾಜ್, ಗ್ಯಾಸ್ ಕುಮಾರಣ್ಣ, ಗಾಂಧಿನಗರದ ಹನುಮಂತಪ್ಪ, ಹನುಮಂತಪ್ಪ ಪೈ, ಮಹಿಳಾ ಮೊರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಭಾಗ್ಯ ಪಿಸಾಳೆ, ಚೇತನ ಕುಮಾರ್, ರೇಣುಕಾ ಕೃಷ್ಣ,ಲೀಲಮ್ಮ ,ಮಂಜುಳಾ ಇಟಿಗಿ, ಸೇರಿದಂತೆ ಪಕ್ಷದ ಕಾರ್ಯಕರ್ತರು ಮುಖಂಡರು ಸುತ್ತಮುತ್ತಲಿನ ವರ್ತಕರು ಭಾಗಿಯಾಗಿದ್ದರು.