Home ಕ್ರೈಂ ನ್ಯೂಸ್ ಜ್ಯೋತಿಷಿಗಳ ಸಲಹೆ ಮೇರೆಗೆ ಠಾಣೆಯಲ್ಲೇ ಗಣಪತಿ ಹೋಮ ನಡೆಸಿದ ಇನ್‌ಸ್ಪೆಕ್ಟರ್: ಭುಗಿಲೆದ್ದ ತೀವ್ರ ರಾಜಕೀಯ ವಿವಾದ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಜ್ಯೋತಿಷಿಗಳ ಸಲಹೆ ಮೇರೆಗೆ ಠಾಣೆಯಲ್ಲೇ ಗಣಪತಿ ಹೋಮ ನಡೆಸಿದ ಇನ್‌ಸ್ಪೆಕ್ಟರ್: ಭುಗಿಲೆದ್ದ ತೀವ್ರ ರಾಜಕೀಯ ವಿವಾದ!

Share
ಗಣಪತಿ
Share

ವಿಲ್ಲುಪುರಂ: ವಿಲ್ಲುಪುರಂ ಜಿಲ್ಲೆಯ ಸತ್ಯಮಂಗಲಂ ಪೊಲೀಸ್ ಠಾಣೆಯೊಳಗೆ ಇನ್‌ಸ್ಪೆಕ್ಟರ್ ಹಾಗೂ ಅವರ ಕುಟುಂಬಸ್ಥರು ಧಾರ್ಮಿಕ ವಿಧಿವಿಧಾನಗಳೊಂದಿಗೆ ‘ಗಣಪತಿ ಹೋಮ’ ನಡೆಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ತಮಿಳುನಾಡಿನಲ್ಲಿ ದೊಡ್ಡ ರಾಜಕೀಯ ವಿವಾದವನ್ನು ಸೃಷ್ಟಿಸಿದೆ.

ಠಾಣೆಯ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸರಣಿ ಅಹಿತಕರ ಘಟನೆಗಳು ನಡೆದ ಹಿನ್ನೆಲೆಯಲ್ಲಿ ಹಾಗೂ ಸಬ್-ಇನ್‌ಸ್ಪೆಕ್ಟರ್ ಅಪಘಾತಕ್ಕೀಡಾದ ಕಾರಣ, ಯಾರೋ ನೀಡಿದ ಸಲಹೆಯ ಮೇರೆಗೆ ಇನ್‌ಸ್ಪೆಕ್ಟರ್ ಸುರೇಶ್ ಬಾಬು ಅವರು ಠಾಣೆಯ ಒಳಗಡೆ ಈ ವಿಶೇಷ ಪೂಜೆ ನೆರವೇರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಪೊಲೀಸ್ ಠಾಣೆಯಂತಹ ಸರ್ಕಾರಿ ಕಚೇರಿಗಳಲ್ಲಿ ಯಾವುದೇ ಧಾರ್ಮಿಕ ಆಚರಣೆಗಳಿಗೆ ಅವಕಾಶವಿಲ್ಲLದ್ದರಿಂದ, ಘಟನೆಯ ಕುರಿತು ಇಲಾಖಾ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.

ಘಟನೆಗೆ ಕಾರಣ: ಸತ್ಯಮಂಗಲಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ಸಬ್-ಇನ್‌ಸ್ಪೆಕ್ಟರ್ ಅಪಘಾತಕ್ಕೀಡಾಗಿರುವುದು ಸೇರಿದಂತೆ ಕೆಲವು ಅನಿರೀಕ್ಷಿತ ಘಟನೆಗಳು ವರದಿಯಾಗಿದ್ದವು.

ನಾಪತ್ತೆ ಪ್ರಕರಣದ ನಂಟು?: ವಿಲ್ಲುಪುರಂ ಜಿಲ್ಲೆಯ ನಾಡುಪಟ್ಟು ಗ್ರಾಮದ 2ನೇ ತರಗತಿ ಬಾಲಕಿಯೊಬ್ಬಳು ತಿಂಗಳ ಹಿಂದೆ ನಾಪತ್ತೆಯಾಗಿದ್ದು, ಸತ್ಯಮಂಗಲಂ ಪೊಲೀಸರು ಪತ್ತೆ ಹಚ್ಚುವಲ್ಲಿ ವಿಫಲರಾದ ಕಾರಣ ಪ್ರಕರಣವನ್ನು ಸಿಬಿ-ಸಿಐಡಿಗೆ  ವರ್ಗಾಯಿಸಲಾಗಿತ್ತು. ಹೋಮಕ್ಕೂ ಈ ಪ್ರಕರಣಕ್ಕೂ ಸಂಬಂಧವಿದೆ ಎಂದು ಹೇಳಲಾಗುತ್ತಿದ್ದರೂ, ಪೊಲೀಸರು ಇದನ್ನು ತಳ್ಳಿಹಾಕಿದ್ದಾರೆ.

ಡಿಎಂಕೆ ಆಕ್ಷೇಪ: ಸಂವಿಧಾನದ ವಿಧಿ 51A (Article 51A) ಅನ್ನು ಉಲ್ಲೇಖಿಸಿರುವ ಡಿಎಂಕೆ ಯುವ ಘಟಕ ಹಾಗೂ ನಾಯಕ ಸೆಂತಿಲ್ ಕುಮಾರ್, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕಾದ ಪೊಲೀಸರು ಜ್ಯೋತಿಷಿಗಳ ಸಲಹೆಯಂತೆ ನಡೆದುಕೊಳ್ಳುತ್ತಿರುವುದನ್ನು ತೀವ್ರವಾಗಿ ಖಂಡಿಸಿದ್ದಾರೆ.

ಠಾಣೆಯೊಳಗೆ ಹೋಮ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಡಳಿತ ವ್ಯವಸ್ಥೆ ಮತ್ತು ಧಾರ್ಮಿಕ ಆಚರಣೆಗಳ ಗಡಿಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Share

Recent Posts

Recent Comments

No comments to show.
Related Articles