Home ಕ್ರೈಂ ನ್ಯೂಸ್ ಎಐ ನಕಲಿ ಫೋಟೋದಿಂದ ಸಂಸಾರದಲ್ಲಿ ಬಿರುಗಾಳಿ: ಬೇರೆ ಮಹಿಳೆ ಜತೆಗಿನ ಚಿತ್ರ ನೋಡಿ ಕೆಲಸ ಮಾಡುತ್ತಿದ್ದ ಸ್ಛಳಕ್ಕೆ ಹೋಗಿ ಪತಿಗೆ ಥಳಿಸಿದ ಸರ್ಕಾರಿ ಶಾಲಾ ಶಿಕ್ಷಕಿ ಪತ್ನಿ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಎಐ ನಕಲಿ ಫೋಟೋದಿಂದ ಸಂಸಾರದಲ್ಲಿ ಬಿರುಗಾಳಿ: ಬೇರೆ ಮಹಿಳೆ ಜತೆಗಿನ ಚಿತ್ರ ನೋಡಿ ಕೆಲಸ ಮಾಡುತ್ತಿದ್ದ ಸ್ಛಳಕ್ಕೆ ಹೋಗಿ ಪತಿಗೆ ಥಳಿಸಿದ ಸರ್ಕಾರಿ ಶಾಲಾ ಶಿಕ್ಷಕಿ ಪತ್ನಿ!

Share
ಪತ್ನಿ
Share

ಇಟಾವಾ (ಉತ್ತರ ಪ್ರದೇಶ): ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಸೃಷ್ಟಿಸಲಾದ ನಕಲಿ ಫೋಟೋವೊಂದು ಉತ್ತರ ಪ್ರದೇಶದ ಇಟಾವಾದಲ್ಲಿ ಕೌಟುಂಬಿಕ ಕಲಹಕ್ಕೆ ಕಾರಣವಾಗಿದೆ. ಬೇರೆ ಮಹಿಳೆಯ ಜತೆಗೆ ಪತಿ ಇರುವಂತಹ ನಕಲಿ ಚಿತ್ರವನ್ನು ನೋಡಿ ಆಕ್ರೋಶಗೊಂಡ ಸರ್ಕಾರಿ ಶಾಲಾ ಶಿಕ್ಷಕಿಯಾದ ಪತ್ನಿ, ನೇರವಾಗಿ ಪತಿಯ ಕಾರ್ಯಸ್ಥಳಕ್ಕೇ ನುಗ್ಗಿ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.

ಆರು ವರ್ಷಗಳ ಹಿಂದೆ ವಿವಾಹವಾಗಿರುವ ಅಂಕಿತ್ ದಿವಾಕರ್ ಎಂಬಾತ ಪ್ರೈವೇಟ್ ಆಸ್ಪತ್ರೆಯ ಅಲ್ಟ್ರಾಸೌಂಡ್ ವಿಭಾಗದಲ್ಲಿ ಡಾಕ್ಟರ್ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣ ಅಥವಾ ಇನ್ಯಾವುದೋ ಮೂಲದಿಂದ ದೊರೆತ AI ಸೃಷ್ಟಿತ ಫೋಟೋದಲ್ಲಿ ಪತಿ ಬೇರೆ ಮಹಿಳೆಯೊಂದಿಗೆ ಇರುವುದನ್ನು ಕಂಡ ಪತ್ನಿ ಕೋಪಗೊಂಡು, ಆಸ್ಪತ್ರೆಗೆ ಬಂದು ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಗಾಯಗೊಂಡಿರುವ ಅಂಕಿತ್ ದಿವಾಕರ್ ಚಿಕಿತ್ಸೆಗಾಗಿ ಇಟಾವಾದ ಸರ್ಕಾರಿ ಆಸ್ಪತ್ರೆಯ ತುರ್ತು ವಿಭಾಗಕ್ಕೆ ತೆರಳಿದ್ದಾರೆ.

ಎಐ ನಕಲಿ ಫೋಟೋ ಕಥೆ: ತನ್ನೊಂದಿಗೆ ಬೇರೆ ಮಹಿಳೆ ಇರುವಂತೆ ಕೃತಕ ಬುದ್ಧಿಮತ್ತೆಯಿಂದ ಯಾರೋ ಕಿಡಿಗೇಡಿಗಳು ನಕಲಿ ಫೋಟೋ ಸೃಷ್ಟಿಸಿದ್ದು, ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಪತಿ ಅಂಕಿತ್ ಸ್ಪಷ್ಟನೆ ನೀಡಿದ್ದಾರೆ.

ಕಾರ್ಯಸ್ಥಳದಲ್ಲಿ ಗಲಾಜೆ: ಪತ್ನಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ಆಫೀಸ್‌ಗೆ ನುಗ್ಗಿ ಹಲ್ಲೆ ನಡೆಸಿದ್ದರಿಂದ ತಮ್ಮ ಮೈಮೇಲೆ ಗಾಯದ ಗುರುತುಗಳಾಗಿವೆ ಎಂದು ಅಂಕಿತ್ ಆಸ್ಪತ್ರೆಯಲ್ಲಿ ವೈದ್ಯರಿಗೆ ತಿಳಿಸಿದ್ದಾರೆ.

ಪೊಲೀಸ್ ದೂರು: ಘಟನೆಯ ಬಳಿಕ ಪತಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಮುಂದಾಗಿದ್ದರೂ, ನಂತರ ಯಾವುದೇ ಔಪಚಾರಿಕ ದೂರು ದಾಖಲಿಸದೆ ವಾಪಸಾಗಿದ್ದಾರೆ. ಈ ಕುರಿತು ಪತ್ನಿಯ ಕಡೆಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಇನ್ನೂ ಲಭ್ಯವಾಗಿಲ್ಲ.

ಸದ್ಯ ಈ ವಿಚಿತ್ರ ಪ್ರಕರಣ ಸ್ಥಳೀಯವಾಗಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, AI ತಂತ್ರಜ್ಞಾನದ ದುರ್ಬಳಕೆ ಎಂಥೆಂತ್ಯಾ ಕೌಟುಂಬಿಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂಬುದಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ.

Share

Recent Posts

Recent Comments

No comments to show.
Related Articles