Home ದಾವಣಗೆರೆ ಬಸವಣ್ಣನವರ ಘನತೆಯ ರಕ್ಷಣೆಗೆ ಸಚಿವ ಸಂಪುಟದ ಒಕ್ಕೊರಲಿನ ಧ್ವನಿ, ಕನ್ನಡ ನಾಡಿಗೆ ಸಂತಸದ ಬೆಳವಣಿಗೆ: ಎಂ. ಬಿ. ಪಾಟೀಲ್
ದಾವಣಗೆರೆನವದೆಹಲಿಬೆಂಗಳೂರು

ಬಸವಣ್ಣನವರ ಘನತೆಯ ರಕ್ಷಣೆಗೆ ಸಚಿವ ಸಂಪುಟದ ಒಕ್ಕೊರಲಿನ ಧ್ವನಿ, ಕನ್ನಡ ನಾಡಿಗೆ ಸಂತಸದ ಬೆಳವಣಿಗೆ: ಎಂ. ಬಿ. ಪಾಟೀಲ್

Share
ಬಸವಣ್ಣ
Share
ಬೆಂಗಳೂರು: ಬಸವಣ್ಣನವರು, ಬಸವಾದಿ ಶಿವಶರಣರು, ವಚನ ಸಾಹಿತ್ಯ ಹಾಗೂ ಕನ್ನಡ ನಾಡಿನ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಘನತೆಗೆ ಧಕ್ಕೆ ತರುವ ಪ್ರಯತ್ನಗಳ ಕುರಿತು ನಮ್ಮ ಸರ್ಕಾರ ತ್ವರಿತವಾಗಿ ಸ್ಪಂದಿಸಿದೆ. ಇಂದು ನಡೆದ ಸಚಿವ ಸಂಪುಟ ಸಭೆಯ ಆರಂಭದಲ್ಲೇ ಈ ಗಂಭೀರ ವಿಚಾರವನ್ನು ಪ್ರಸ್ತಾಪಿಸಿದೆ. ಬಸವಣ್ಣನವರ ವ್ಯಕ್ತಿತ್ವ ಹಾಗೂ ವಚನ ಪರಂಪರೆಯ ಘನತೆಗೆ ಧಕ್ಕೆ ತರುತ್ತಿರುವ ಕೃತ್ಯಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವನ್ನು ಒತ್ತಾಯಿಸಿದೆ ಎಂದು ಸಚಿವ ಎಂ ಬಿ. ಪಾಟೀಲ್ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಸಚಿವರಾದ ಕೆ.ಎಚ್. ಮುನಿಯಪ್ಪ, ಬಸವರಾಜ ರಾಯರೆಡ್ಡಿ, ಡಾ. ಶರಣಪ್ರಕಾಶ ಪಾಟೀಲ, ವಿಜಯಾನಂದ ಕಾಶಪ್ಪನವರ, ಎಸ್.ಎಸ್. ಮಲ್ಲಿಕಾರ್ಜುನ, ಈಶ್ವರ ಖಂಡ್ರೆ ಸೇರಿದಂತೆ ಸಂಪುಟದ ಸಚಿವರು ಒಕ್ಕೊರಲಿನ ಬೆಂಬಲ ವ್ಯಕ್ತಪಡಿಸಿದರು.
ವಿವಾದಿತ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತ ವಿಶ್ವೇಶ್ವರ ಭಟ್ ಅವರ ವಿರುದ್ಧವೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಎಲ್ಲ ಸಚಿವರ ಒಗ್ಗಟ್ಟಿನ ನಿಲುವಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ.
ಸಚಿವ ಸಂಪುಟದ ಈ ಒಗ್ಗಟ್ಟಿನ ನಿಲುವು ಕನ್ನಡ ನಾಡಿನ ಸಾಂಸ್ಕೃತಿಕ ಅಸ್ಮಿತೆ ಹಾಗೂ ಬಸವಣ್ಣನವರ ವಿಚಾರಧಾರೆಯಲ್ಲಿ ನಂಬಿಕೆಯಿಟ್ಟಿರುವ ಕೋಟ್ಯಂತರ ಜನರಲ್ಲಿ ಸಂತಸ ಮತ್ತು ಹೊಸ ಭರವಸೆ ಮೂಡಿಸಿದೆ. ಬಸವಣ್ಣನವರು ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ; ಅವರು ಇಡೀ ಮಾನವಕುಲದ ಬೆಳಕು. ಅವರ ಘನತೆ, ಶರಣ ಪರಂಪರೆಯ ಮೌಲ್ಯಗಳು ಹಾಗೂ ವಚನ ಸಾಹಿತ್ಯದ ಗೌರವವನ್ನು ಕಾಪಾಡುವುದು ಕನ್ನಡಿಗರೆಲ್ಲರ ಸ್ವಾಭಿಮಾನದ ಪ್ರಶ್ನೆ. ಇಂದಿನ ಸಚಿವ ಸಂಪುಟದ ಒಗ್ಗಟ್ಟಿನ ಧ್ವನಿ ಬಸವಣ್ಣನವರ ಅನುಯಾಯಿಗಳಿಗೆ ಮಾತ್ರವಲ್ಲ, ಬಸವತತ್ವದಲ್ಲಿ ನಂಬಿಕೆಯಿಟ್ಟಿರುವ ಸಮಸ್ತ ಕನ್ನಡಿಗರಿಗೆ ಭರವಸೆಯ ಸಂದೇಶವಾಗಿದೆ ಎಂದು ಎಂ. ಬಿ. ಪಾಟೀಲ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Share

Recent Posts

Recent Comments

No comments to show.
Related Articles