Home ಕ್ರೈಂ ನ್ಯೂಸ್ ಪನ್ನು ಹತ್ಯೆ ಸಂಚು ಪ್ರಕರಣದಲ್ಲಿ ಆರೋಪ ಸಾಬೀತು: ನನ್ನ ತಪ್ಪುಗಳ ತಿದ್ದಿಕೊಳ್ಳಲು ಬಯಸುತ್ತೇನೆಂದು ಅಮೆರಿಕ ನ್ಯಾಯಾಲಯದ ಮುಂದೆ ಕಣ್ಣೀರಿಟ್ಟ ಭಾರತೀಯ ಮೂಲದ ನಿಖಿಲ್ ಗುಪ್ತಾ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಪನ್ನು ಹತ್ಯೆ ಸಂಚು ಪ್ರಕರಣದಲ್ಲಿ ಆರೋಪ ಸಾಬೀತು: ನನ್ನ ತಪ್ಪುಗಳ ತಿದ್ದಿಕೊಳ್ಳಲು ಬಯಸುತ್ತೇನೆಂದು ಅಮೆರಿಕ ನ್ಯಾಯಾಲಯದ ಮುಂದೆ ಕಣ್ಣೀರಿಟ್ಟ ಭಾರತೀಯ ಮೂಲದ ನಿಖಿಲ್ ಗುಪ್ತಾ!

Share
ನಿಖಿಲ್ ಗುಪ್ತಾ
Share

ನ್ಯೂಯಾರ್ಕ್ (ಅಮೆರಿಕ): ಅಮೆರಿಕ ನೆಲದಲ್ಲಿ ಖಲಿಸ್ತಾನಿ ಪ್ರತ್ಯೇಕತಾದಾರ ಗುರುಪಂತ್ ಸಿಂಗ್ ಪನ್ನು ಹತ್ಯೆಗೆ ಸಂಚು ಹೂಡಿದ ಆರೋಪದಲ್ಲಿ ತಪ್ಪೊಪ್ಪಿಕೊಂಡಿರುವ ಭಾರತೀಯ ಪ್ರಜೆ ನಿಖಿಲ್ ಗುಪ್ತಾ ಅವರಿಗೆ ನ್ಯೂಯಾರ್ಕ್‌ನ ಒಕ್ಕೂಟ ನ್ಯಾಯಾಲಯವು ಶುಕ್ರವಾರ (ನವೆಂಬರ್ 20) ಶಿಕ್ಷೆ ಪ್ರಕಟಿಸಲಿದೆ.

ನ್ಯೂಯಾರ್ಕ್‌ನ ದಕ್ಷಿಣ ಜಿಲ್ಲೆಯ ಯುಎಸ್ ಜಿಲ್ಲಾ ನ್ಯಾಯಾಧೀಶ ವಿಕ್ಟರ್ ಮರೆರೊ ಅವರು ಸ್ಥಳೀಯ ಕಾಲಮಾನ ಬೆಳಿಗ್ಗೆ 10 ಗಂಟೆಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದ್ದಾರೆ ಎಂದು ತಿಳಿದುಬಂದಿದೆ.

ಪನ್ನು ಹತ್ಯೆ ಪ್ರಕರಣದಲ್ಲಿ 55 ವರ್ಷದ ನಿಖಿಲ್ ಗುಪ್ತಾ ಅವರು ಈ ಹಿಂದೆ ಮೂರು ಪ್ರಮುಖ ಆರೋಪಗಳಾದ – ಬಾಡಿಗೆ ಕೊಲೆ, ಬಾಡಿಗೆ ಕೊಲೆಗೆ ಸಂಚು ಮತ್ತು ಅಕ್ರಮ ಹಣ ವರ್ಗಾವಣೆ ಸಂಚು ನಡೆಸಿದ್ದನ್ನು ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದರು. ಭಾರತದಲ್ಲಿರುವ ವ್ಯಕ್ತಿಗಳ ಸಂಪರ್ಕದೊಂದಿಗೆ ಅಮೆರಿಕದಲ್ಲಿರುವ ಯುಎಸ್ ಪ್ರಜೆಯನ್ನು ಗುರಿಯಾಗಿಸಿ ಈ ಹತ್ಯೆ ಸಂಚು ರೂಪಿಸಲಾಗಿದೆ ಎಂದು ಅಭಿಯೋಜಕರು ವಾದಿಸಿದ್ದಾರೆ.

ಅಭಿಯೋಜಕರ ವಾದ ಮತ್ತು 24 ವರ್ಷಗಳ ಶಿಕ್ಷೆಗೆ ಬೇಡಿಕೆ: ಆರೋಪಿ ನಿಖಿಲ್ ಗುಪ್ತಾ ವಿದೇಶಿ ಸಂಚಿನ ಪ್ರಮುಖ ಪಾತ್ರಧಾರಿಯಾಗಿದ್ದು, ಅಮೆರಿಕ ನೆಲದಲ್ಲಿ ಯುಎಸ್ ಪ್ರಜೆಯನ್ನು ಹತ್ಯೆ ಮಾಡಲು ಯತ್ನಿಸಿರುವುದು ಗಂಭೀರ ಅಪರಾಧವಾಗಿದೆ. ಈ ಅಪರಾಧದ ಗಂಭೀರತೆಯನ್ನು ಪರಿಗಣಿಸಿ ನ್ಯಾಯಾಲಯವು 293 ತಿಂಗಳು ಅಂದರೆ ಸರಿಸುಮಾರು 24 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಬೇಕು ಎಂದು ಪ್ರಾಸಿಕ್ಯೂಷನ್ ಪರ ವಕೀಲರು ಒತ್ತಾಯಿಸಿದ್ದಾರೆ.

ಪ್ರತಿವಾದ ಹಾಗೂ 12 ವರ್ಷಗಳ ಶಿಕ್ಷೆಗೆ ಮನವಿ: ನಿಖಿಲ್ ಗುಪ್ತಾ ಪರ ವಕೀಲರು ಮತ್ತು ಪ್ರೊಬೇಷನ್ ಇಲಾಖೆಯು 144 ತಿಂಗಳುಗಳು ಅಂದರೆ 12 ವರ್ಷಗಳ ಜೈಲು ಶಿಕ್ಷೆ ವಿಧಿಸುವಂತೆ ಕೋರಿದ್ದಾರೆ. ಗುಪ್ತಾಗೆ ಯಾವುದೇ ಹಿಂದಿನ ಅಪರಾಧ ಹಿನ್ನೆಲೆ ಇಲ್ಲದಿರುವುದು, ಆ ಕಾಲಘಟ್ಟದಲ್ಲಿ ಅವರು ತೀವ್ರ ಮದ್ಯಪಾನದ ಚಟಕ್ಕೆ ಬಲಿಯಾಗಿದ್ದು ಹಾಗೂ ತಪ್ಪೊಪ್ಪಿಕೊಂಡು ಪಶ್ಚಾತಾಪ ವ್ಯಕ್ತಪಡಿಸಿರುವುದನ್ನು ಪರಿಗಣಿಸುವಂತೆ ಮನವಿ ಮಾಡಲಾಗಿದೆ.

ನಿಖಿಲ್ ಗುಪ್ತಾ ಪಶ್ಚಾತಾಪ: ನ್ಯಾಯಾಲಯಕ್ಕೆ ಸಲ್ಲಿಸಿರುವ ವೈಯಕ್ತಿಕ ಪತ್ರದಲ್ಲಿ ನಿಖಿಲ್ ಗುಪ್ತಾ, “ನಾನು 2023ರ ಹಿಂದಿನ ಕಾಲಕ್ಕೆ ಹೋಗಿ ನನ್ನ ತಪ್ಪುಗಳನ್ನು ತಿದ್ದಿಕೊಳ್ಳಲು ಬಯಸುತ್ತೇನೆ” ಎಂದು ಬೇಸರ ವ್ಯಕ್ತಪಡಿಸಿದ್ದು, ಯಾವುದೇ ಜೀವ ಹಾನಿಯಾಗದಿರುವುದಕ್ಕೆ ತಾವು ಕೃತಜ್ಞರಾಗಿರುವುದಾಗಿ ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ: 2023ರಲ್ಲಿ ವಿಕಾಸ್ ಯಾದವ್ ಮತ್ತಿತರರ ಜೊತೆಗೂಡಿ ಪನ್ನು ಹತ್ಯೆಗಾಗಿ ಅಮೆರಿಕದ ಡ್ರಗ್ ಎಫೋರ್ಸ್‌ಮೆಂಟ್ ಅಡ್ಮಿನಿಸ್ಟ್ರೇಷನ್ (DEA) ರಹಸ್ಯ ಅಧಿಕಾರಿಯ ಮೂಲಕ ಬಾಡಿಗೆ ಹಂತಕನನ್ನು ನೇಮಿಸಲು ಯತ್ನಿಸಿದಾಗ ಈ ಒಳಸಂಚು ಬೆಳಕಿಗೆ ಬಂದಿತ್ತು. ಅಡ್ವಾನ್ಸ್ ಹಣವಾಗಿ 15,000 ಡಾಲರ್ ತಲುಪಿಸಿದ್ದ ವೇಳೆ ಈ ಜಾಲ ಪತ್ತೆಯಾಗಿತ್ತು.

Share

Recent Posts

Recent Comments

No comments to show.
Related Articles