
ದಾವಣಗೆರೆ: ಭಾರತ ಅಂಚೆ ಇಲಾಖೆಯ ವತಿಯಿಂದ ದೇಶಾದ್ಯಂತ ಸ್ವಾತಂತ್ರ್ಯ ನಂತರ ಬಿಡುಗಡೆಯಾದ ಸ್ಮರಣಾರ್ಥ ಅಂಚೆ ಚೀಟಿಗಳ ಕುರಿತು ‘ಪ್ಯಾನ್ ಇಂಡಿಯಾ ಫಿಲಾಟೆಲಿ’ ರಾಷ್ಟ್ರಮಟ್ಟದ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಸ್ವಾತಂತ್ರ್ಯ ನಂತರ ಭಾರತ ಅಂಚೆ ಇಲಾಖೆಯಿಂದ ಬಿಡುಗಡೆಗೊಂಡ ವಿವಿಧ ಸ್ಮರಣಾರ್ಥ ಅಂಚೆ ಚೀಟಿಗಳು, ಅವುಗಳ ಐತಿಹಾಸಿಕ ಮಹತ್ವ, ದೇಶದ ಸಂಸ್ಕೃತಿ, ಪರಂಪರೆ ಹಾಗೂ ಮಹನೀಯರ ಕೊಡುಗೆಗಳ ಕುರಿತು ಸ್ಪರ್ಧಾರ್ಥಿಗಳ ಜ್ಞಾನವನ್ನು ಪರೀಕ್ಷಿಸುವುದು ಹಾಗೂ ವಿದ್ಯಾರ್ಥಿಗಳು ಮತ್ತು ಯುವಜನರಲ್ಲಿ ಅಂಚೆ ಚೀಟಿಗಳ ಸಂಗ್ರಹಣೆಯ ಹವ್ಯಾಸವನ್ನು ಬೆಳೆಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಇದರ ಅಂಗವಾಗಿ, ದಕ್ಷಿಣ ಕರ್ನಾಟಕ ಅಂಚೆ ಪ್ರಾದೇಶಿಕ ಕಚೇರಿ ವತಿಯಿಂದ ನವೆಂಬರ್ 23 ರಂದು ಮೈಸೂರಿನಲ್ಲಿ ಪ್ರಾದೇಶಿಕ ಮಟ್ಟದ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ 18 ರಿಂದ 25 ವರ್ಷ ವಯೋಮಾನದ ಯುವಜನರು ದಾವಣಗೆರೆ ವಿಭಾಗೀಯ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9449849281ಗೆ ಸಂಪರ್ಕಿಸಬಹುದು ಎಂದು ದಾವಣಗೆರೆ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.




