ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ದಾವಣಗೆರೆ ಪಾಲಿಕೆಗೆ ಮಿನಿಷ್ಟ್ರಿಯಲ್ ಅವಾರ್ಡ್ ಬಂದದ್ದು ಹೆಮ್ಮೆ ವಿಚಾರ: ಗಜೇಂದ್ರ ಜಗನ್ನಾಥ

On: July 17, 2025 6:00 PM
Follow Us:
ದಾವಣಗೆರೆ
---Advertisement---

SUDDIKSHANA KANNADA NEWS/ DAVANAGERE/ DATE:17_07_2025

ದಾವಣಗೆರೆ: ಸ್ವಚ್ಛತೆ ಮತ್ತು ಘನತ್ಯಾಜ್ಯ ನಿರ್ವಹಣೆಯಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯು ಸ್ವಚ್ಛ ಸರ್ವೇಕ್ಷಣೆ -2025ರ ಸಮೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ ಸಚಿವಾಲಯ ಪ್ರಶಸ್ತಿ ಲಭಿಸಿರುವುದು ಸಂತಸದ ಸಂಗತಿ. ಇದಕ್ಕೆ ಕಾರಣೀಕರ್ತರಾದವರೆಲ್ಲರಿಗೂ ಅಭಿನಂದನೆ ಎಂದು ದಾವಣಗೆರೆ ಉತ್ತರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ 28ಮತ್ತು 29ನೇ ವಾರ್ಡ್ ನ ಪ್ರಬಲ ಆಕಾಂಕ್ಷಿಯಾಗಿರುವ ಗಜೇಂದ್ರ ಜಗನ್ನಾಥ ಹೇಳಿದ್ದಾರೆ.

ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಮಾರ್ಗದರ್ಶನದಲ್ಲಿ ಸ್ವಚ್ಛತಾ ಹಾಗೂ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಕಾರ್ಯಗಳನ್ನು ಯಶಸ್ವಿಯಾಗಿ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಅನುಷ್ಠಾನಗೊಳಿಸಿದ್ದಾರೆ. ಈ ಕಾರಣದಿಂದ ಈ ಪ್ರಶಸ್ತಿ ಬಂದಿದ್ದು, ಇದು ದಾವಣಗೆರೆ ಜನರಿಗೆ ಖುಷಿಯ ಮತ್ತು ಹೆಮ್ಮೆಯ ವಿಚಾರ ಎಂದು ತಿಳಿಸಿದ್ದಾರೆ.

READ ALSO THIS STORY: ನಮಾಜ್ ಮಾಡು, ಇಸ್ಲಾಂ ಧರ್ಮಕ್ಕೆ ಮತಾಂತರವಾಗದಿದ್ದರೆ ರೇಪ್ ಕೇಸ್: ಮುಸ್ಲಿಂ ಯುವತಿ ಮದುವೆಯಾಗಿದ್ದ ಹಿಂದೂ ಯುವಕನ ಸ್ಫೋಟಕ ಆರೋಪ!

ಡಿಸಿ ಗಂಗಾಧರ ಸ್ವಾಮಿ, ಪಾಲಿಕೆ ಆಯುಕ್ತೆ ರೇಣುಕಾ, ಪೌರಕಾರ್ಮಿಕರು, ವಾಹನ ಚಾಲಕರು, ಕ್ಲೀನರ್ಸ್‌, ಲೋಡರ್ಸ್, ಹೆಲ್ತ್ ಇನ್ ಸ್ಪೆಕ್ಟರ್ಸ್, ನೈರ್ಮಲ್ಯ ಮೇಲ್ವಿಚಾರಕರು ಹಾಗೂ ಸ್ವಚ್ಛತಾ ಸಿಬ್ಬಂದಿ, ಮಹಾನಗರ ಪಾಲಿಕೆ ಅಧಿಕಾರಿಗಳು ಅಭಿನಂದನೆ ಹಾಗೂ ಧನ್ಯವಾದ ಎಲ್ಲರೂ ಸಲ್ಲಿಸಬೇಕು. ರಾಷ್ಟ್ರಮಟ್ಟದಲ್ಲಿಯೂ ಪಾಲಿಕೆಯು ಗುರುತಿಸಿಕೊಂಡಿರುವುದು ಜಿಲ್ಲೆಗೆ ಮಾತ್ರವಲ್ಲ, ರಾಜ್ಯಕ್ಕೆ ಗೌರವ ತರುವಂಥದ್ದಾಗಿದೆ ಎಂದು ಗಜೇಂದ್ರ ಜಗನ್ನಾಥ ತಿಳಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment