Home ಕ್ರೈಂ ನ್ಯೂಸ್ ಜೆನ್ಸನ್ ಹುವಾಂಗ್ “ಅಪರೂಪದ ಮೇಧಾವಿ”, ಚೀನಾದಿಂದ ಬರುವ ಸುಂದರ ಮಹಿಳೆಯರನ್ನೆಲ್ಲಾ ಗೂಢಚಾರರೆಂದು ಪರಿಗಣಿಸಲಾಗದು: ಡೊನಾಲ್ಡ್ ಟ್ರಂಪ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಜೆನ್ಸನ್ ಹುವಾಂಗ್ “ಅಪರೂಪದ ಮೇಧಾವಿ”, ಚೀನಾದಿಂದ ಬರುವ ಸುಂದರ ಮಹಿಳೆಯರನ್ನೆಲ್ಲಾ ಗೂಢಚಾರರೆಂದು ಪರಿಗಣಿಸಲಾಗದು: ಡೊನಾಲ್ಡ್ ಟ್ರಂಪ್!

Share
ಡೊನಾಲ್ಡ್ ಟ್ರಂಪ್
Share

ವಾಷಿಂಗ್ಟನ್: ಎನ್‌ವಿಡಿಯಾ ಕಂಪನಿಯ ಮಾಜಿ ಸಿಇಒ ಜೆನ್ಸನ್ ಹುವಾಂಗ್ ಅವರು ಚೀನಾದ ಕಥಿತ ಗೂಢಚಾರಿ ಯುವತಿಯೊಂದಿಗಿನ ವಿವಾಹಬಾಹಿರ ಸಂಬಂಧದ ವಿವಾದದ ಹಿನ್ನೆಲೆಯಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದು ಭಾರಿ ಸಂಚಲನ ಮೂಡಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹುವಾಂಗ್ ಅವರನ್ನು “ಅಪರೂಪದ ಮೇಧಾವಿ” ಎಂದು ಬಣ್ಣಿಸಿದ್ದು, ಚೀನಾದಿಂದ ಬರುವ ಪ್ರತಿಯೊಬ್ಬ ಸುಂದರ ಮಹಿಳೆಯರನ್ನೂ ಗೂಢಚಾರರೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಚೀನಾ ಅಧ್ಯಕ್ಷೆ ಜಿನ್ಪಿಂಗ್ ಅವರೊಂದಿಗೆ ಭೇಟಿಯ ನಂತರ ಫಾಕ್ಸ್ ನ್ಯೂಸ್ ಜತೆಗೆ ಮಾತನಾಡಿದ ಟ್ರಂಪ್, ಹುವಾಂಗ್ ಅವರ ರಾಜೀನಾಮೆ ದೊಡ್ಡ ದುರಂತ ಎಂದು ಬಣ್ಣಿಸಿದರು. ಅಮೆರಿಕಕ್ಕೆ ಅಂತಹ ಪ್ರತಿಭಾವಂತರ ಅಗತ್ಯವಿದೆ ಎಂದು ಹೇಳಿದ ಅವರು, ಆಲಿಸ್ ಹುವಾಂಗ್ ಗೂಢಚಾರಿಯೇ ಎಂಬ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದರು. ಆಲಿಸ್ ಹುವಾಂಗ್ ಅವರು ಎನ್‌ವಿಡಿಯಾ ಚಿಪ್‌ಗಳನ್ನು ಖರೀದಿಸಿದ ಒಬ್ಬ ಉದ್ಯಮಿ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.

ಜೆನ್ಸನ್ ಹುವಾಂಗ್ ರಾಜೀನಾಮೆ: ಚೀನಾದ ಸುಧಾರಿತ AI ಚಿಪ್‌ಗಳನ್ನು ಕಳ್ಳಮಾರ್ಗದ ಮೂಲಕ ಚೀನಾಕ್ಕೆ ತಲುಪಿಸಲು ನೆರವಾದ ಆರೋಪ ಎದುರಿಸುತ್ತಿರುವ ಸಿಂಗಾಪುರ್ ಮೂಲದ ಮೆಗಾಸ್ಪೀಡ್  ಕಂಪನಿಯ ನಂಟಿನ ಕಾರಣದಿಂದ ಜೆನ್ಸನ್ ಹುವಾಂಗ್ ತಮ್ಮ ಸಿಇಒ ಸ್ಥಾನ ತ್ಯಜಿಸಬೇಕಾಯಿತು.

ಟ್ರಂಪ್ ಸಮರ್ಥನೆ: “ಚೀನಾದಿಂದ ಬರುವ ಯಾವುದೇ ಸುಂದರ ಮಹಿಳೆಯನ್ನು ಜನರು ತಕ್ಷಣವೇ ಗೂಢಚಾರಿ ಎಂದು ಪರಿಗಣಿಸುತ್ತಾರೆ” ಎಂದು ಹೇಳಿರುವ ಟ್ರಂಪ್, ಹುವಾಂಗ್ ಜಾಗತಿಕ ತಂತ್ರಜ್ಞಾನ ರಂಗದ ಅತಿ ಬುದ್ಧಿವಂತ ವ್ಯಕ್ತಿ ಎಂದು ಪ್ರಶಂಸಿಸಿದರು.

ಮೆಗಾಸ್ಪೀಡ್ ಕಂಪನಿ ತನಿಖೆ: ಆಲಿಸ್ ಹುವಾಂಗ್ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದ್ದ ಮೆಗಾಸ್ಪೀಡ್ ಸಂಸ್ಥೆಯು ಅಮೆರಿಕದ ರಫ್ತು ನಿರ್ಬಂಧಗಳನ್ನು ಉಲ್ಲಂಘಿಸಿ ಚೀನಾಕ್ಕೆ ಎನ್‌ವಿಡಿಯಾ ಚಿಪ್‌ಗಳನ್ನು ಪೂರೈಸಿದ ಆರೋಪದ ಮೇಲೆ ಸಿಂಗಾಪುರ್ ಪೊಲೀಸರು ಮತ್ತು ಅಮೆರಿಕದ ತನಿಖಾ ಸಂಸ್ಥೆಗಳ ಕಣ್ಗಾವಲಿನಲ್ಲಿದೆ.

Share

Recent Comments

No comments to show.
Related Articles