
ಪ್ರತಾಪಗಢ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಮಥುರಾ ವಿವಾದಿತ ಸ್ಥಳದ ಕುರಿತು ರಾಜ್ಯದ ಸಚಿವ ಮಯಂಕೇಶ್ವರ ಶರಣ್ ಸಿಂಗ್ ನೀಡಿರುವ ಹೇಳಿಕೆಯು ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ಪ್ರತಾಪಗಢ ಜಿಲ್ಲೆಯ ಬೆಂತಿ ಗ್ರಾಮದಲ್ಲಿ ನಡೆದ ರಾಮಕಥಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಥುರಾದಲ್ಲಿ ಭವ್ಯ ದೇವಸ್ಥಾನ ನಿರ್ಮಾಣವಾಗುವುದು ನೂರಕ್ಕೆ ನೂರಲ್ಲ, ‘ಕೋಟಿ ಪ್ರತಿಶತ’ ಖಚಿತ ಹಾಗೂ ವಿವಾದಿತ ಗುಮ್ಮಟವನ್ನು ಶೀಘ್ರದಲ್ಲೇ ಕೆಡವಲಾಗುವುದು ಎಂದು ವಿವಾದಾತ್ಮಕ ಘೋಷಣೆ ಮಾಡಿಸಿದ್ದಾರೆ.
ಸಾಗರೋತ್ಸವದ ಸಂದರ್ಭದಲ್ಲಿ ಮಥುರೆಗೆ ಭೇಟಿ ನೀಡಿದ್ದಾಗ ಗುಮ್ಮಟವನ್ನು ತಾವೇ ಕತ್ತಿಯಿಂದ ಅಥವಾ ಹಾರೆ ತೆಗೆದುಕೊಂಡು ಧ್ವಂಸಗೊಳಿಸಬೇಕು ಎಂದು ಅನಿಸಿತ್ತು ಆದರೆ ಸಾಂವಿಧಾನಿಕ ಹುದ್ದೆಯಲ್ಲಿರುವುದರಿಂದ ಸುಮ್ಮನಿದ್ದೆ ಎಂದು ಸಚಿವರು ಬಹಿರಂಗವಾಗಿ ಹೇಳಿದ್ದಾರೆ. ಅಲ್ಲದೆ, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಕಳೆದ 75 ವರ್ಷಗಳಿಂದ ಸನಾತನ ಧರ್ಮದ ವಿರೋಧ ರಾಜಕಾರಣ ಮಾಡುತ್ತಾ ಬಂದಿವೆ ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದರು.
ದೇವಸ್ಥಾನ ನಿರ್ಮಾಣ ಖಚಿತ: ಮಥುರಾದಲ್ಲಿ ಭವ್ಯ ದೇವಸ್ಥಾನ ನಿರ್ಮಾಣವಾಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ ಸಚಿವರು, ಶೀಘ್ರದಲ್ಲೇ ಗುಮ್ಮಟವನ್ನು ಕೆಡವಿ ಅಲ್ಲಿ ದೇವಸ್ಥಾನ ತಲೆಎತ್ತಲಿದೆ ಎಂದರು.
ರಾಜಕೀಯ ನಾಯಕರ ಟೀಕೆ: ಸನಾತನ ಧರ್ಮವನ್ನು ವಿರೋಧಿಸುವುದೇ ವಿಪಕ್ಷಗಳ ಏಕೈಕ ಕೆಲಸವಾಗಿದೆ ಎಂದು ಆರೋಪಿಸಿದ ಮಯಂಕೇಶ್ವರ ಶರಣ್ ಸಿಂಗ್, ಕಾಂಗ್ರೆಸ್ ಹಾಗೂ ಎಸ್‌ಪಿ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ರಾಜಕೀಯ ವಲಯದಲ್ಲಿ ಸದ್ದು: ಸಚಿವರ ಈ ಬಹಿರಂಗ ಹೇಳಿಕೆಯು ಉತ್ತರ ಪ್ರದೇಶದ ರಾಜಕಾರಣದಲ್ಲಿ ಮತ್ತೊಮ್ಮೆ ಧಾರ್ಮಿಕ ಮತ್ತು ರಾಜಕೀಯ ಚರ್ಚೆಗೆ ಗ್ರಾಸವಾಗಿದ್ದು, ವಿಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗುವ ಸಾಧ್ಯತೆಯಿದೆ.




