
ದಾವಣಗೆರೆ: 9ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆಯನ್ನು ದಾವಣಗೆರೆಯ ವಿದ್ಯಾನಗರದಲ್ಲಿರುವ ತುಳಸಿ ರಾಮರಾಜು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ವತಿಯಿಂದ ಆಚರಿಸಲಾಯಿತು.
ದಾವಣಗೆರೆಯ ಮೊದಲ ಪ್ರಕೃತಿ ಚಿಕಿತ್ಸಾ ಕ್ಲಿನಿಕ್‌ನ ಸ್ಪೂರ್ತಿಶಕ್ತಿಯಾದ ತುಳಸಿ ರಾಮರಾಜುರವರು ಸಾಮಾನ್ಯ ಜನರಿಗೂ ಕೈಗೆಟುಕುವ ದರದಲ್ಲಿ ನೈಸರ್ಗಿಕ ಆರೋಗ್ಯ ಸೇವೆಗಳು ದೊರೆಯಬೇಕು ಮತ್ತು ಜನರಲ್ಲಿ ಆರೋಗ್ಯ ಜಾಗೃತಿ ಮೂಡಬೇಕು ಎಂಬ ಸಂಕಲ್ಪದಿಂದ ದಾವಣಗೆರೆಯಲ್ಲಿ ಪ್ರಕೃತಿ ಚಿಕಿತ್ಸಾ ಕೇಂದ್ರ ಆರಂಭಿಸಲು ಪ್ರೇರಣೆಯಾದ ತಮ್ಮ ಆಶಯವನ್ನು ಹಂಚಿಕೊಂಡರು.
ಅಂದು ಬಿತ್ತಿದ ಕನಸು ಇಂದು ಅನೇಕ ಜನರಿಗೆ ಆರೋಗ್ಯದ ದಾರಿ ತೋರಿಸುತ್ತಿರುವುದು ಸಂತಸದ ಸಂಗತಿ ಎಂದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಜನಾರ್ದನ ಬಾಲ ನರಸಿಂಹರಾವ್, ಟಿ.ಟಿ.ಡಿ ತಿರುಮಲ ಅವರು ಹೃದಯ ಕಾಯಿಲೆಗಳ ಹೆಚ್ಚಳಕ್ಕೆ ಅನಾರೋಗ್ಯಕರ ಜೀವನಶೈಲಿಯೂ ಪ್ರಮುಖ ಕಾರಣವಾಗಿದ್ದು, ಆರೋಗ್ಯಕರ ಆಹಾರ, ನಡಿಗೆ ಮತ್ತು ಯೊಗಕ್ಕೆ ಆದ್ಯತೆಯನ್ನು ನೀಡಬೇಕೆಂದು ತಿಳಿಸಿದರು.
ತಾವು ಈ ಕ್ಲಿನಿಕ್‌ನಲ್ಲಿಯೇ ಚಿಕಿತ್ಸೆಯನ್ನು ಪಡೆಯಬೇಕೆಂದು ಆಂಧ್ರಪ್ರದೇಶದ ತಿರುಪತಿಯಿಂದ ಬಂದಿರುವುದಾಗಿ ತಿಳಿಸಿದರು.
ಇಲ್ಲಿಗೆ ಬಂದ ವಿವರಗಳನ್ನು ಹಾಗೂ ಈ ಪ್ರಕೃತಿ ಚಿಕಿತ್ಸೆಯ ಮಹತ್ವವನ್ನು ಪ್ರಕೃತಿ ಚಿಕಿತ್ಸೆಯೇ ಭವಿಷ್ಯದ ಆರೋಗ್ಯಕ್ರಾಂತಿಗೆ ದಾರಿಯಾಗುತ್ತದೆ ಎಂದು ಖ್ಯಾತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ತಜ್ಞ ಡಾ. ಗಂಗಾಧರ ವರ್ಮ ಹೇಳಿದರು.
ಇಂದಿನ ಬದಲಾಗುತ್ತಿರುವ ಆಹಾರ ಪದ್ದತಿ, ವ್ಯಾಯಾಮದ ಕೊರತೆ, ನಿದ್ರಾಹೀನತೆ ಹಾಗೂ ಮಾನಸಿಕ ಒತ್ತಡಗಳು ಜೀವನಶೈಲಿ ಕಾಯಿಲೆಗಳಿಗೆ ಪ್ರಮುಖ ಕಾರಣಗಳಾಗುತ್ತಿವೆ ಎಂದು ತಿಳಿಸಿದರು.
ಕಾಯಿಲೆ ಬಂದ ನಂತರ ಚಿಕಿತ್ಸೆಯನ್ನು ಪಡೆಯುವುದಕ್ಕಿಂತ, ಕಾಯಿಲೆ ಬರುವ ಮೊದಲೇ ಆರೋಗ್ಯವನ್ನು ಕಾಪಾಡಿಕೊಳ್ಳುವ ಜೀವನಶೈಲಿಯನ್ನು ರೂಡಿಸಿಕೊಳ್ಳಬೇಕು. ಆಹಾರ, ಯೋಗ, ವಿಶ್ರಾಂತಿ, ನೈಸರ್ಗಿಕ ಮನೆಮದ್ದುಗಳು ಹಾಗೂ ಚಿಕಿತ್ಸೆಗಳ ಮೂಲಕ ಆರೋಗ್ಯಕರ ಭಾರತವನ್ನು ನಿರ್ಮಿಸಲು ಸಾಧ್ಯ ಎಂದು ಹೇಳಿದರು.
ಪ್ರಕೃತಿ ಚಿಕಿತ್ಸೆಯನ್ನು ವೈಜ್ಞಾನಿಕ ಸಂಶೋಧನೆ ಮತ್ತು ಸೂಕ್ತ ವೈದ್ಯಕೀಯ ಮಾರ್ಗದರ್ಶನದೊಂದಿಗೆ ಜನಸಾಮಾನ್ಯರಿಗೆ ತಲುಪಿಸುವ ಅಗತ್ಯವನ್ನು ಒತ್ತಿ ಹೇಳಿದರು.
ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಆದ ಡಾ. ವಿಂಧ್ಯ ವರ್ಮ ಅವರು ಮಾತನಾಡಿ ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜುತನ, ಸಯಾಟಿಕ, ಕೀಲುನೋವುಗಳು, ಬೆನ್ನುಮೂಳೆಯ ಸಮಸ್ಯೆಗಳು, ಜೀರ್ಣಾಂಗವ್ಯೂಹದ ಸಮಸ್ಯೆಗಳು, ಪಾರ್ಶ್ರಾವಾಯುಮತ್ತು ಎಲ್ಲ ದೀರ್ಘಕಾಲಿಕ ರೋಗಗಳಿಗೆ ಪ್ರಕೃತಿ ಚಿಕಿತ್ಸಾ ಪದ್ದತಿಯ ಚಿಕಿತ್ಸೆಯೇ ರಾಮಬಾಣವೆಂದು ತಿಳಿಸಿದರು.
ಜಲಚಿಕಿತ್ಸೆ, ಮಣ್ಣಿನ ಚಿಕಿತ್ಸೆ, ಅಕ್ಯುಪಂಕ್ಚರ್, ಮಸಾಜ್ ಚಿಕಿತ್ಸೆ, ಆಹಾರ ಚಿಕಿತ್ಸೆ, ಫಿಸಿಯೋಥೆರಪಿ, ಯೋಗಾಸನ, ಪ್ರಾಣಾಯಾಮ ಮತ್ತು ಇತರ ಔಷಧ ರಹಿತ ಚಿಕಿತ್ಸೆಗಳ ಮಹತ್ವವನ್ನು ತಿಳಿಸಿದರು.
ಸಂತೋಷ್ ಮೋಹಿತೆರವರು ಯುವಜನತೆಯಲ್ಲಿ ಹೆಚ್ಚುತ್ತಿರುವ ಫಾಸ್ಟ್ ಫುಡ್ ಸೇವನೆ, ಮೊಬೈಲ್ ಬಳಕೆ, ತಡರಾತ್ರಿಯ ನಿದ್ರೆಯ ಅಭ್ಯಾಸಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ನೈಸರ್ಗಿಕ ಆಹಾರ, ಯೊಗ ಮತ್ತು ಶಿಸ್ತುಬದ್ದ ಜೀವನಶೈಲಿಯನ್ನು ರೂಡಿಸಿಕೊಳ್ಳುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಹಿರಿಯ ವೈದ್ಯೃರಾದ ಬಿ. ರಾಮರಾಜು ಅವರು ಮಾತನಾಡಿ ಪ್ರಕೃತಿಯೊಂದಿಗೆ ಬದುಕೋಣ ಆರೋಗ್ಯದಿಂದ ಬಾಳೋಣ. ರೋಗ ಬಂದಾಗ ಮಾತ್ರವಲ್ಲ, ರೋಗ ಬರುವ ಮೊದಲೇ ಆರೋಗ್ಯದ ಬಗ್ಗೆ ಕಾಳಜಿ ವಹಿಸೋಣವೆಂದು ತಿಳಿಸಿದರು.
ಈ ಕಾರ್ಯಕ್ರಮದ ನಿರೂಪಣೆಯನ್ನು ಪವಿತ್ರ ನಿರ್ವಹಿಸಿದರು. ಗಾಯತ್ರಿ ವಂದಿಸಿದರು. ಆಸ್ಪತ್ರೆಯ ಶ್ರೀನಿವಾಸ, ಖಾಸಿಂ ಸಾಬ್ (ಮುನ್ನಾ), ಮೇಘ, ನಾಗ ಲಲಿತ, ಪ್ರಕಾಶ್, ಆಸ್ಪತ್ರೆಯ ಸಾಧಕರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
- Dr Gangadhara Varma
- Dr Vindhya Varma
- holistic healing event Davangere
- National Naturopathy Day Davangere
- natural health lifestyle Karnataka
- Tulasi Ramraju Hospital
- ಡಾ. ಗಂಗಾಧರ ವರ್ಮ
- ಡಾ. ವಿಂಧ್ಯ ವರ್ಮ
- ತುಳಸಿ ರಾಮರಾಜು ಆಸ್ಪತ್ರೆ
- ದಾವಣಗೆರೆ ಪ್ರಕೃತಿ ಚಿಕಿತ್ಸೆ
- ಯೋಗ ಮತ್ತು ಪ್ರಕೃತಿ ಚಿಕಿತ್ಸೆ
- ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ
- ವಿದ್ಯಾನಗರ ದಾವಣಗೆರೆ




