Home ದಾವಣಗೆರೆ BIG BREAKING: ಭದ್ರಾ ನಾಲೆಗೆ ನೀರು ಹರಿಸಿದ ವಿಚಾರಕ್ಕೆ ಭುಗಿಲೆದ್ದ ಆಕ್ರೋಶ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ!
ದಾವಣಗೆರೆಬೆಂಗಳೂರು

BIG BREAKING: ಭದ್ರಾ ನಾಲೆಗೆ ನೀರು ಹರಿಸಿದ ವಿಚಾರಕ್ಕೆ ಭುಗಿಲೆದ್ದ ಆಕ್ರೋಶ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ!

Share
ಡಿ.ಜಿ. ಶಾಂತನಗೌಡ
Share

ದಾವಣಗೆರೆ: ಭದ್ರಾ ಜಲಾಶಯದಿಂದ ಏಕಪಕ್ಷೀಯವಾಗಿ ನಾಲೆಗೆ ನೀರು ಹರಿಸಿರುವ ಸರ್ಕಾರದ ನಿರ್ಧಾರವನ್ನು ಖಂಡಿಸಿ, ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ಜಿ. ಶಾಂತನಗೌಡ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.

ಈ ಕುರಿತು ಇಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬರೆದಿರುವ ಪತ್ರವನ್ನು ದಾವಣಗೆರೆ ವರದಿಗಾರರ ಕೂಟದಲ್ಲಿ ಕರೆದಿದ್ದ ಪತ್ರಿಕಾಗೋಷ್ಛಿಯಲ್ಲಿ ತೋರಿಸಿದ ಅವರು, ಇಂದು ಸಂಜೆ ಖುದ್ದಾಗಿ ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಿ ತಮ್ಮ ಅಳಲನ್ನು ತೋಡಿಕೊಳ್ಳುವುದಾಗಿ ಸ್ಪಷ್ಟಪಡಿಸಿದರು. 

ಐ.ಸಿ.ಸಿ  ಸಭೆಯನ್ನು ಕರೆಯದೆಯೇ ಸರ್ಕಾರವು 16-11-2026 ರ ಮಧ್ಯರಾತ್ರಿ 1 ಟಿ.ಎಂ.ಸಿ ನೀರನ್ನು 10 ದಿನಗಳ ಕಾಲ ನಾಲೆಯಲ್ಲಿ ಹರಿಸಲು ಆದೇಶ ಮಾಡಿರುವುದು ಅವೈಜ್ಞಾನಿಕ ತೀರ್ಮಾನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 
10 ದಿನಗಳ ಕಾಲ ಪ್ರತಿದಿನ 1,000 ಕ್ಯೂಸೆಕ್ಸ್ ನಂತೆ ನೀರು ಹರಿಸುವುದರಿಂದ ಅಣೆಕಟ್ಟೆಯಿಂದ ಕೇವಲ 15 ಕಿ.ಮೀ ಒಳಗಿನ ರೈತರಿಗೆ ಮಾತ್ರ ನೀರು ತಲುಪಲಿದ್ದು, ಅಚ್ಚುಕಟ್ಟು ಪ್ರದೇಶದ ಶೇ. 5 ರಷ್ಟು ಜಮೀನುಗಳಿಗೂ ನೀರು ಸಿಗುವುದಿಲ್ಲ ಎಂದು ಅವರು ವಿವರಿಸಿದರು. 

ನೀರು ನಿಲ್ಲಿಸಲು ಆಗ್ರಹ: ತಕ್ಷಣವೇ ಭದ್ರಾ ಅಣೆಕಟ್ಟಿನಿಂದ ಹರಿಸುತ್ತಿರುವ ನೀರನ್ನು ನಿಲ್ಲಿಸಿ, ಕೂಡಲೇ ಐ.ಸಿ.ಸಿ ಸಭೆ ಕರೆದು ವೈಜ್ಞಾನಿಕವಾಗಿ ತೀರ್ಮಾನ ಕೈಗೊಳ್ಳಬೇಕು ಎಂದು ಶಾಂತನಗೌಡ ಒತ್ತಾಯಿಸಿದರು.

ಅಹೋರಾತ್ರಿ ಧರಣಿ ಎಚ್ಚರಿಕೆ: ಸರ್ಕಾರ ತನ್ನ ನಿರ್ಧಾರ ಹಿಂಪಡೆಯದಿದ್ದಲ್ಲಿ, ನಮ್ಮ ಭಾಗದ ಶಾಸಕರು ರೈತರ ಹಿತದೃಷ್ಟಿಯಿಂದ ರಾಜೀನಾಮೆ ನೀಡಿ ಭದ್ರಾ ಅಣೆಕಟ್ಟು ಮುಂಭಾಗ ಅಹೋರಾತ್ರಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಸಂಜೆ ರಾಜೀನಾಮೆ ಸಲ್ಲಿಕೆ: ರೈತರು ಹಾಗೂ ಕ್ಷೇತ್ರದ ಅನ್ನದಾತರ ಹಿತದೃಷ್ಟಿಯಿಂದ ಈಗಾಗಲೇ ರಾಜೀನಾಮೆ ನೀಡಲು ತೀರ್ಮಾನಿಸಿದ್ದು, ಇಂದು ಸಂಜೆ ಮುಖ್ಯಮಂತ್ರಿಗಳಿಗೆ ಪತ್ರ ಹಸ್ತಾಂತರಿಸುವುದಾಗಿ ತಿಳಿಸಿದರು. 

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles