Home ದಾವಣಗೆರೆ “ಎಪ್‌ಸ್ಟೀನ್ ಫೈಲ್ಸ್ ನೋಡಿ, ಅಮೆರಿಕದಲ್ಲೇ ಇಂತಹ ಘಟನೆಗಳು ನಡೆದಿವೆ”, ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಇಂದಿಗೂ ಇದೆ: ನಟಿ ರಮ್ಯಾ ಕೃಷ್ಣನ್!
ದಾವಣಗೆರೆನವದೆಹಲಿಬೆಂಗಳೂರುಸಿನಿಮಾ

“ಎಪ್‌ಸ್ಟೀನ್ ಫೈಲ್ಸ್ ನೋಡಿ, ಅಮೆರಿಕದಲ್ಲೇ ಇಂತಹ ಘಟನೆಗಳು ನಡೆದಿವೆ”, ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಇಂದಿಗೂ ಇದೆ: ನಟಿ ರಮ್ಯಾ ಕೃಷ್ಣನ್!

Share
ರಮ್ಯಾ ಕೃಷ್ಣನ್
Share

ಹೈದರಾಬಾದ್: ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಹಾಗೂ ಶೋಷಣೆ ಇಂದಿಗೂ ಅಸ್ತಿತ್ವದಲ್ಲಿದೆ ಮತ್ತು ಇದು ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ, ಲಿಂಗ ಭೇದವಿಲ್ಲದೆ ಎಲ್ಲರಿಗೂ ಎದುರಾಗುತ್ತಿದೆ ಎಂದು ಬಹುಭಾಷಾ ನಟಿ ರಮ್ಯಾ ಕೃಷ್ಣನ್ (Ramya Krishnan) ಮುಕ್ತವಾಗಿ ಅಭಿಪ್ರಾಯಪಟ್ಟಿದ್ದಾರೆ. ‘ರಾ ಟಾಕ್ಸ್ ವಿತ್ ವಿಕೆ’ ಸಂದರ್ಶನದಲ್ಲಿ ಮಾತನಾಡಿದ ‘ಬಾಹುಬಲಿ’ ಖ್ಯಾತಿಯ ನಟಿ, ಗ್ಲಾಮರ್ ಕ್ಷೇತ್ರವಾಗಿರುವುದರಿಂದ ಸಿನಿಮಾ ರಂಗದ ವಿಚಾರಗಳು ಹೆಚ್ಚು ಚರ್ಚೆಯಾಗುತ್ತವೆ ಎಂದು ಹೇಳಿದ್ದಾರೆ.

ಅಮೆರಿಕದಂತಹ ಮುಂದುವರಿದ ದೇಶಗಳಲ್ಲೇ ಎಪ್‌ಸ್ಟೀನ್ ಫೈಲ್ಸ್‌ನಂತಹ ಪ್ರಕರಣಗಳು ನಡೆದಿರುವಾಗ, ಇಲ್ಲಿ ನಡೆಯುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಒತ್ತಾಯದಿಂದಲೋ, ಆಯ್ಕೆಯಿಂದಲೋ ಅಥವಾ ಸಹಜವಾಗಿಯೋ ಇಂತಹ ಘಟನೆಗಳು ಹಿಂದೆಯೂ ನಡೆದಿವೆ, ಈಗಲೂ ನಡೆಯುತ್ತಿವೆ ಮತ್ತು ಮುಂದೆಯೂ ನಡೆಯುತ್ತವೆ ಎಂದು ರಮ್ಯಾ ಕೃಷ್ಣನ್ ನೇರವಾಗಿ ಹೇಳಿದ್ದಾರೆ. ಆದರೆ, ಕಾಲ ಬದಲಾದಂತೆ ಅದಕ್ಕೆ ‘ಹೌದು’ ಅಥವಾ ‘ಇಲ್ಲ’ ಎಂದು ಹೇಳುವ ಆಯ್ಕೆ ಕಲಾವಿದರ ಕೈಯಲ್ಲಿದೆ ಎಂದಿದ್ದಾರೆ.

ಹಿಂದಿನ ಕಷ್ಟದ ದಿನಗಳ ನೆನಪು: ತಾವು ಚಿತ್ರರಂಗಕ್ಕೆ ಬಂದ ಆರಂಭಿಕ ದಿನಗಳಲ್ಲಿ ಶೂಟಿಂಗ್ ಸೆಟ್‌ಗಳಲ್ಲಿ ಕ್ಯಾರವಾನ್, ಶೌಚಾಲಯ ಅಥವಾ ಬಟ್ಟೆ ಬದಲಿಸಲು ಖಾಸಗಿ ಸ್ಥಳಗಳೇ ಇರುತ್ತಿರಲಿಲ್ಲ ಎಂದು ರಮ್ಯಾ ನೆನಪಿಸಿಕೊಂಡಿದ್ದಾರೆ.

ಅಂಬಾಸಿಡರ್ ಕಾರಿನಲ್ಲೇ ಪರದಾಟ: ಶೌಚಾಲಯದ ವ್ಯವಸ್ಥೆ ಇಲ್ಲದ ಕಾರಣ ನಟಿಯರು ಅಂಬಾಸಿಡರ್ ಕಾರಿನ ಒಳಗೆ ಕುಳಿತು ಬಾಟಲಿಗಳನ್ನೇ ಬಳಸಬೇಕಾದ ಅನಿವಾರ್ಯತೆ ಇತ್ತು. ಸಮಯ ಉಳಿಸಲು ನಾವೇ ಮೇಕಪ್ ಮಾಡಿಕೊಳ್ಳುತ್ತಿದ್ದೆವು ಎಂದು ಹೇಳಿದ್ದಾರೆ.

ಇಂದಿನ ಕಲಾವಿದರು ಅದೃಷ್ಟವಂತರು: ಹಿಂದಿನ ತಲೆಮಾರಿನ ನಟಿಯರು ಅನುಭವಿಸಿದ ಕಷ್ಟದ ಕಾಲು ಭಾಗವನ್ನೂ ಇಂದಿನ ಕಲಾವಿದರು ಅನುಭವಿಸಿಲ್ಲ, ಅವರು ನಿಜಕ್ಕೂ ಅದೃಷ್ಟವಂತರು ಎಂದು ರಮ್ಯಾ ತಿಳಿಸಿದ್ದಾರೆ.

ಇತ್ತೀಚೆಗೆ ರಜನಿಕಾಂತ್ ಅವರ ‘ಜೈಲರ್ 2’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ರಮ್ಯಾ ಕೃಷ್ಣನ್, ಸದ್ಯ ‘ರಾಕ’, ‘ಶ್ರೀ ಶ್ರೀ’, ‘ಪಾಕೆಟ್ ನಾವೆಲ್’ ಹಾಗೂ ‘ತೇರಾ ಯಾರ್ ಹೂಂ ಮೈನ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles