SUDDIKSHANA KANNADA NEWS/ DAVANAGERE/ DATE_11-07_2025
ದಾವಣಗೆರೆ: ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದವ ಕಳ್ಳತನ ಮಾಡಿ ಸಿಕ್ಕಿ ಬಿದ್ದ ಘಟನೆ ಮಲೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಲೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಕ್ಕನೂರು ಗ್ರಾಮದಲ್ಲಿ 2024ರ ಸೆಪ್ಟಂಬರ್ 13ರಂದು ಆಶೋಕ ಎಂಬುವರ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕು ಕೊಣನೂರು ಗ್ರಾಮದ ವಾಸಿ ರಾಮಚಾರಿ ಎಂಬಾತನು ಕೆಎ-3/ಎನ್ಬಿ-5665 ನೊಂದಣಿ ಸಂಖ್ಯೆಯ ಒಮಿನಿ ವಾಹನವನ್ನು ಕಳುವು ಮಾಡಿಕೊಂಡು ಹೋಗಿದ್ದ.
2025ರ ಮೇ 25ರಂದು ಅಶೋಕ್ ಮಲೇಬೆನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತಂಡವು ತನಿಖೆ ಕೈಗೊಂಡು ಆರೋಪಿ ರಾಮಾಚಾರಿ (35) ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ. ಆರೋಪಿತನು ಕಳುವು ಮಾಡಿದ್ದ
1,25,000 ರೂಪಾಯಿ ಮೌಲ್ಯದ ಒಮಿನಿ ವಾಹನ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಕಳ್ಳತನ ಪ್ರಕರಣವನ್ನು ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ ಮತ್ತು ಮಲೇಬೆನ್ನೂರು ಪೊಲೀಸ್ ಠಾಣೆಯ ಪಿಎಸ್ಐ (ಕಾ. ಸು.) ಹಾರುನ್ ಅಖ್ತರ್, ಸಿಬ್ಬಂದಿಯವರಾದ ನಾಗೇಂದ್ರಪ್ಪ, ಮಲ್ಲಿಕಾರ್ಜುನ್, ಲಕ್ಷ್ಮಣ್, ಫೈರೋಜ್ಖಾನ್ ವೆಂಕಟರಮಣ, ಮಹೇಶ್ವರಪ್ಪ, ಶಿವಕುಮಾರ್, ವಿರೇಶಪ್ಪ, ಅನ್ಸರ್ ಅಲಿ, ಹಾಗೂ ಜೀಪ್ ಚಾಲಕ ರಾಜಪ್ಪ, ಮುರುಳೀಧರ ತಂಡವು ಭೇದಿಸುವಲ್ಲಿ ಯಶಸ್ವಿಯಾಗಿದೆ.
ಈ ಪತ್ತೆ ಕಾರ್ಯಕ್ಕೆ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅಭಿನಂದಿಸಿದ್ದಾರೆ.