ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮುಂದೆ ಕಷ್ಟ, ಸಮಸ್ಯೆಗಳ ಹೇಳಿಕೊಂಡ ಪೌರ ಕಾರ್ಮಿಕರು!

On: July 10, 2025 6:27 PM
Follow Us:
ದಾವಣಗೆರೆ
---Advertisement---

SUDDIKSHANA KANNADA NEWS/ DAVANAGERE/ DATE_10-07_2025

ದಾವಣಗೆರೆ: ಪೌರಕಾರ್ಮಿಕರು ನಮ್ಮ ಸಮಾಜದ ನಿಜವಾದ ಆರೋಗ್ಯ ಸೇನಾನಿಗಳು. ಅವರ ಪರಿಶ್ರಮದಿಂದ ನಮ್ಮ ನಗರ ಸ್ವಚ್ಛವಾಗಿದೆ‌ ಹಾಗೂ ಆರೋಗ್ಯಯುತ ಸಮಾಜ ರೂಪುಗೊಳ್ಳುತ್ತದೆ. ಆದ್ದರಿಂದ ನಾವೆಲ್ಲರೂ ಪೌರ ಕಾರ್ಮಿಕರ ಕೆಲಸಗಳಿಗೆ ಸಹಕಾರ ನೀಡುವುದು ಮುಖ್ಯ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ (Prabha Mallikarjun) ಹೇಳಿದರು.

ದಾವಣಗೆರೆಯ ತಮ್ಮ ಗೃಹಕಚೇರಿಯಲ್ಲಿ ಪೌರಕಾರ್ಮಿಕರೊಂದಿಗೆ ಸಂವಾದ ನಡೆಸಿದ ಸಂಸದರು ಅವರ ಎಲ್ಲಾ ಕಷ್ಟಸುಖಗಳನ್ನು ಆಲಿಸಿದರು. ನಂತರ ಮಾತುಕತೆ ನಡೆಸಿ ಅವರ ದೈನಂದಿನ ಕೆಲಸದ ಬಗ್ಗೆ ಮಾಹಿತಿ ಪಡೆದರು. ಅವರ ತ್ಯಾಗಮಯ ಸೇವೆ ಶ್ಲಾಘನೀಯ. ಮಳೆ,ಬಿಸಿಲು ಎನ್ನದೇ ನಿಸ್ವಾರ್ಥವಾಗಿ ಶ್ರಮಿಸುವ ಈ ಕಾಯಕಯೋಗಿಗಳ ಸೇವೆಗೆ ನಾವೆಲ್ಲರೂ ನಮನ ಸಲ್ಲಿಸೋಣ ಎಂದು ಜನತೆಗೆ ಕರೆ ನೀಡಿದರು.

ಈ ಸುದ್ದಿಯನ್ನೂ ಓದಿ: ಪ್ರತಾಪ್ ಸಿಂಹಗೆ ದಾವಣಗೆರೆ ಸಂಸದರ ಬಗ್ಗೆ ಮಾತನಾಡುವ ಯೋಗ್ಯತೆ, ನೈತಿಕತೆ ಇಲ್ಲ: ಮೊಹಮ್ಮದ್ ಜಿಕ್ರಿಯಾ ಆಕ್ರೋಶ

ನಗರದ ಶುದ್ಧತೆ ಮತ್ತು ನೈರ್ಮಲ್ಯಕ್ಕೆ ದಿನನಿತ್ಯ ಶ್ರಮಿಸುತ್ತಿರುವ ಪೌರ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದನೆ ನೀಡುವ ಉದ್ದೇಶದಿಂದ ಸಂಸದರು ಪೌರ ಸೇವಕರೊಂದಿಗೆ ವಿಶೇಷ ಸಂವಾದ ಕಾರ್ಯಕ್ರಮ ನಡೆಸಿದರು.

ಪೌರಸೇವಕರ ಪ್ರತಿನಿಧಿಗಳು ತಮ್ಮ ಪ್ರಮುಖ ಬೇಡಿಕೆಗಳನ್ನು ಈ ಸಂದರ್ಭದಲ್ಲಿ ಸಂಸದರ ಮುಂದೆ ವಾಖ್ಯಾನಿಸಿದರು. ವಿಶೇಷವಾಗಿ ಗುತ್ತಿಗೆ ಆಧಾರಿತ ಉದ್ಯೋಗಗಳನ್ನು ಖಾಯಂಗೊಳಿಸುವುದು. ಆರೋಗ್ಯ ವಿಮೆ, ಸುರಕ್ಷತಾ ಸಾಧನಗಳ ಹಂಚಿಕೆ ಹಾಗೂ ಮಕ್ಕಳಿಗೆ ಉಚಿತ ಶಿಕ್ಷಣ ಎಂಬ ಬೇಡಿಕೆಗಳು ಈ ವೇಳೆ ಹೊರಹೊಮ್ಮಿದವು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದರು ನಿಮ್ಮ ಸೇವೆ ನಮಗೆ ಅತ್ಯಂತ ಅಮೂಲ್ಯ. ನಿಮ್ಮ ಬೇಡಿಕೆಗಳು ನ್ಯಾಯಸಮ್ಮತವಾಗಿದ್ದು, ಸರ್ಕಾರದ ಮಟ್ಟದಲ್ಲಿ ಅವುಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು.

ಪೌರ ಕಾರ್ಮಿಕರ ಸಾಮಾಜಿಕ ಭದ್ರತೆ, ಪಿಂಚಣಿ, ವಸತಿ ಮತ್ತು ಆರೋಗ್ಯ ಕಾಳಜಿ ಕುರಿತಂತೆ ನವೀನ ಯೋಜನೆಗಳ ರೂಪುರೇಷೆಗಳನ್ನೂ ಶೀಘ್ರದಲ್ಲಿ ಬಿಡುಗಡೆ ಮಾಡುವ ನಿರ್ಧಾರ ಸರ್ಕಾರದ ಮುಂದಿದೆ ಎಂಬ ಮಾಹಿತಿಯನ್ನೂ ಅವರು ನೀಡಿದರು.

ಈ ಸುದ್ದಿಯನ್ನೂ ಓದಿ: ದಾವಣಗೆರೆ ಪ್ರಥಮ ಸಂಸದೆ ಬಗ್ಗೆ ಪ್ರತಾಪ್ ಸಿಂಹ ಟೀಕೆ ಸಹಿಸಲ್ಲ: ಸೈಯದ್ ಖಾಲಿದ್ ಅಹ್ಮದ್

ಈ ವೇಳೆ ಮಾತನಾಡಿದ ಮಹಿಳಾ ಪೌರ ಕಾರ್ಮಿಕರಾದ ಹನುಮಕ್ಕ,ಕಾಟಮ್ಮ,ಮಮತಾ ಹಾಗೂ ಪುಷ್ಪಾ ಅವರು ನಾವು ಕಷ್ಟಪಟ್ಟು ನಿಯತ್ತಿನಿಂದ ನಮ್ಮ ಕೆಲಸ ಮಾಡುತ್ತೇವೆ ಅದನ್ನು ಜನರೂ‌ ಕೂಡ ಅರ್ಥಮಾಡಿಕೊಳ್ಳಬೇಕು.ಕಸ  ಸಮರ್ಪಕವಾಗಿ ವಿಲೇವಾರಿ ಮಾಡಲು ಜನರು ಕೂಡ ಸಹಕಾರ ನೀಡಬೇಕು.ಕಸವನ್ನು ರಾತ್ರಿವೇಳೆ ಎಲ್ಲೆಂದರಲ್ಲಿ ಬಿಸಾಕಿ ಹೋಗುತ್ತಾರೆ.ಇಲ್ಲವಾದಲ್ಲಿ ಕಸ ರಸ್ತೆ ಬದಿಗೆ ಸುರಿದು ಹೋಗುತ್ತಾರೆ.ಕಸದ ಗಾಡಿಗೆ ಕಸ ಹಾಕದೆ ರಸ್ತೆಗೆ ಸುರಿಯುವುದರಿಂದ ನಾವು ಸ್ವಚ್ಚಗೊಳಿಸಿದ್ದು ಪ್ರಯೋಜನವಾಗುವುದಿಲ್ಲ. ಕೆಲವರಂತು ಹಸಿಕಸ ಹಾಗೂ ಒಣಕಸ ವಿಂಗಡಿಸುವುದೇ ಇಲ್ಲ.ಇದಲ್ಲದೇ ರಾತ್ರಿ ವೇಳೆ ಖಾಲಿ ಸೈಟ್ ಗಳಲ್ಲಿ ಕಸ ಹಾಕಿ ಹೊಗುತ್ತಾರೆ.ಪಾಲಿಕೆಯಿಂದ ದಂಡ ವಿಧಿಸಿದರೂ‌ ಪ್ರಯೋಜನವಾಗದ ಸ್ಥಿತಿಯಿದೆ ಇದು‌ ಬೇಸರದ ಸಂಗತಿ ಎಂದು‌ ಸಂಸದರ ಮುಂದೆ ತಮ್ಮ ಅಸಮಾಧಾನ ಹೊರಹಾಕಿದರು.

ನಂತರ ಮಾತನಾಡಿದ ಶ್ರೀರಾಮ್ ಹಾಗೂ ನಾಗರಾಜ್ ಅವರು ನಾವು 800 ರೂಪಾಯಿ ವೇತನದಿಂದ ಕೆಲಸ ಮಾಡಿದ್ದೇವೆ. ಯಾವುದೇ ಸೌಲಭ್ಯಗಳಿಲ್ಲದ ಸಮಯದಲ್ಲಿ ನಾವು ಕಷ್ಟದಲ್ಲಿ‌ ಕೆಲಸ ಮಾಡಿದ್ದೇವೆ. ನಾವೆಲ್ಲಾ ರಸ್ತೆ ಬದಿಯ ಕಸ ಸ್ವಚ್ಚಮಾಡುತ್ತೇವೆ.ಗಣಪತಿ ಹಬ್ಬ,ದೀಪಾವಳಿ, ದಸರಾ ಸಮಯದಲ್ಲಿ ಹಾಗೂ ದೊಡ್ಡ ದೊಡ್ಡ ಕಾರ್ಯಕ್ರಮ ‌ನಡೆದಾಗ ಕೆಲಸ ನಿರ್ವಹಣೆ ಅಚ್ಚುಕಟ್ಟಾಗಿ ಮಾಡುತ್ತೇವೆ. ಇದೀಗ ಪಾಲಿಕೆ ಆಯುಕ್ತರಾದ ರೇಣುಕಾ‌ ಅವರು‌ ನಮಗೆ ಹ್ಯಾಂಡ್ ಗ್ಲೌಸ್, ಯೂನಿಫಾರಂ,ಶೂ‌,ಮಾಸ್ಕ್ ಸೇರಿದಂತೆ ಎಲ್ಲಾ ಸ್ವಚ್ಚತಾ ಪರಿಕರಗಳನ್ನು ನೀಡಿದ್ದಾರೆಂದರು.

ಕಸದ ಗಾಡಿಯ ಡ್ರೈವರ್‌ ಹಾಗೂ ಹೆಲ್ಪರ್ ಗಳು ಮಾತನಾಡಿ ಕೆಲವೊಮ್ಮೆ ಗಾಜಿನ ಚೂರುಗಳು,ಇಂಜೆಕ್ಷನ್ ನ‌ ಸೂಚಿಗಳನ್ನು ಜನರು‌ ಪ್ರತ್ಯೇಕಿಸುವುದಿಲ್ಲ ಇದರಿಂದ ಅನೇಕ‌ಬಾರಿ ನಮಗೆ ಗಾಯಗಳಾಗಿವೆ.ಜನರು ಈ ಬಗ್ಗೆ ಗಮನ ಹರಿಸಿದರೆ ನಮಗೂ ಒಳ್ಳೆಯದು ಎಂದು ತಮ್ಮ ಅನುಭವ ತಿಳಿಸಿದರು.

ಸಂವಾದದಲ್ಲಿ ಪಾಲಿಕೆ ಆಯುಕ್ತರಾದ ರೇಣುಕಾ ಹಾಗೂ ಪಾಲಿಕೆ ಪೌರ ಕಾರ್ಮಿಕರು ‌ಉಪಸ್ಥಿತರಿದ್ದರು.

ಮೊದಲೆಲ್ಲಾ ಡ್ರೈನೇಜ್ ಕ್ಲೀನ್ ಮಾಡುವಾಗ ಏಣಿ ಹಾಕಿ ಈಚಲು ಪುಟ್ಟಿಗಳಲ್ಲಿ ಹಾಗೂ ಬಕೇಟ್ ಗಳಲ್ಲಿ ಮಲಿನವನ್ನು ತೆಗೆಯುತ್ತಿದ್ದೆವು ಆದರೆ ಈಗ ಯಂತ್ರಗಳು ಬಂದ ಮೇಲೆ ಬದಲಾಗಿದೆ.

– ಶ್ರೀರಾಮ್ ಹಿರಿಯ ಪೌರಕಾರ್ಮಿಕರು.

ಕೆಲವೊಮ್ಮೆ ಜನರು ಕಸಕ್ಲೀನ್ ಮಾಡುವ ಸ್ಥಳಗಳಲ್ಲಿ ಮೂತ್ರವಿಸರ್ಜನೆ ಮಾಡುತ್ತಾರೆ.ಇದು ನಮಗೆ ಬೇಸರವುಂಟು ಮಾಡಿದೆ.ನಮಗೆ ಅಂತಹ ಸ್ಥಳದಲ್ಲಿ ಸ್ವಚ್ಚಗೊಳಿಸಲು ಸಾಧ್ಯವಾಗುತ್ತಿಲ್ಲ.ಎಷ್ಟು ಹೇಳಿದರು ಜನರು ಅರ್ಥ ಮಾಡಿಕೊಳ್ಳುವುದಿಲ್ಲ.ಅಂತಹ ಸ್ಥಳದಲ್ಲಿ ವಾಸನೆಯಿಂದ ಕಸ ಸ್ವಚ್ಚಗೊಳಿಸಿದ ಸಂದರ್ಭದಲ್ಲಿ ‌ನಮಗೆ ಊಟವೇ ಸೇರುವುದಿಲ್ಲ.ನಾವು ಮನುಷ್ಯರು ನಮ್ಮನ್ನು ಅರ್ಥ‌ಮಾಡಿಕೊಳ್ಳಬೇಕು.

– ಹನುಮಕ್ಕ ಹಾಗೂ ಕಾಟಮ್ಮ, ಪೌರ ಕಾರ್ಮಿಕರು.

ಪೌರ ಕಾರ್ಮಿಕರಿಗೆ ರೆಸ್ಟ್ ರೂಮ್…

ಪ್ರತಿಯೊಬ್ಬರಿಗೂ ಅವರ ಕೆಲಸದ ಬಗ್ಗೆ ಗೌರವವಿರುತ್ತದೆ.ಪೌರ‌ಕಾರ್ಮಿಕರು ಬೆಳಗ್ಗೆ 4.30 ಕ್ಕೆ ತಮ್ಮ ಕಾಯಕದಲ್ಲಿ ನಿರತರಾಗಿರುತ್ತಾರೆ.ಅವರು ದುಡಿಯುವುದು ತಮ್ಮ ಮನೆ‌ನಡೆಸಲು ಹಾಗೂ ಸ್ವಾಭಿಮಾನದಿಂದ ಬದುಕು ಸಾಗಿಸಲು. ನಾವೆಲ್ಲರೂ ಪೌರ ಕಾರ್ಮಿಕರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳಬೇಕು.ಪೌರ ಕಾರ್ಮಿಕ ವೃತ್ತಿ ನಿರ್ವಹಿಸುವವರ ಪುತ್ರಿಯೊಬ್ಬರು ನನ್ನನ್ನು ಭೇಟಿಯಾಗಿ ತಮ್ಮ ತಂದೆಯ ಕಷ್ಟ ಹೇಳಿಕೊಂಡು ಅಳಲು ತೋಡಿಕೊಂಡಿದ್ದ ಘಟನೆ ಈಗಲು ಕಣ್ಣಮುಂದಿದೆ.ಆ ವಿದ್ಯಾರ್ಥಿನಿ ತಾನು‌ ಚೆನ್ನಾಗಿ ವಿದ್ಯಾಭ್ಯಾಸ ‌ಮಾಡಿ ತಂದೆಗೆ ನೆರವಾಗುವುದಾಗಿ ಆತ್ಮವಿಶ್ವಾಸದಿಂದ ಹೇಳಿದ್ದು ಮಾದರಿಯಾಗಿದೆ.ಮುಂದಿನ ದಿನಗಳಲ್ಲಿ ಪೌರ ಕಾರ್ಮಿಕರಿಗೆ ಆಯಾ ವಾರ್ಡ್ ಗಳಲ್ಲಿ ರೆಸ್ಟ್ ರೂಮ್,ಶೌಚಾಲಯ ವ್ಯವಸ್ಥೆಗೆ ಕ್ರಮ ವಹಿಸಲಾಗುವುದು.

– ಡಾ.ಪ್ರಭಾ ಮಲ್ಲಿಕಾರ್ಜುನ್

ಸಂಸದರು. ದಾವಣಗೆರೆ ಲೋಕಸಭಾ ಕ್ಷೇತ್ರ

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment