Home ಕ್ರೈಂ ನ್ಯೂಸ್ ರೋಗಿಯ ಜೀವದೊಂದಿಗೆ ಚೆಲ್ಲಾಟ: ಸೈರನ್ ಮೊಳಗುತ್ತಿದ್ದರೂ ದಾರಿ ಬಿಡದ ಥಾರ್ ವಾಹನ ಸವಾರರಿಂದ ಡ್ಯಾನ್ಸ್ ಮಾಡಿ ಹುಚ್ಚಾಟ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ರೋಗಿಯ ಜೀವದೊಂದಿಗೆ ಚೆಲ್ಲಾಟ: ಸೈರನ್ ಮೊಳಗುತ್ತಿದ್ದರೂ ದಾರಿ ಬಿಡದ ಥಾರ್ ವಾಹನ ಸವಾರರಿಂದ ಡ್ಯಾನ್ಸ್ ಮಾಡಿ ಹುಚ್ಚಾಟ!

Share
ಥಾರ್
Share

ಉತ್ತರ ಪ್ರದೇಶ: ಉತ್ತರ ಪ್ರದೇಶದ ಹಪುರ್ ಜಿಲ್ಲೆಯ ಬಾಬೂಗಢ ಪ್ರದೇಶದ ಬಚ್‌ಹ್ರೌಟಾ ಗ್ರಾಮದಲ್ಲಿ ಸಂಭವಿಸಿದ ಅಘಾತಕಾರಿ ಘಟನೆಯೊಂದರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹೀಂದ್ರಾ ಥಾರ್  ಎಸ್‌ಯುವಿ ವಾಹನದ ಮೇಲ್ಛಾವಣಿಯ ಮೇಲೆ ಹತ್ತಿ ಯುವಕರು ನೃತ್ಯ ಮಾಡುತ್ತಾ, ಹಿಂದೆ ಸೈರನ್ ಮೊಳಗಿಸುತ್ತಾ ಬಂದ ಎರಡು ಆಂಬುಲೆನ್ಸ್‌ಗಳಿಗೆ ದಾರಿ ಮಾಡಿಕೊಡದೆ ಅಡ್ಡಿಪಡಿಸಿರುವ ನಾಚಿಕೆಗೇಡಿನ ಘಟನೆ ಬೆಳಕಿಗೆ ಬಂದಿದೆ.

ಆಂಬುಲೆನ್ಸ್ ಗೆ ದಾರಿ ಮಾಡಿಕೊಡದೇ ಯುವಕರ ಹುಚ್ಚಾಟದ ಡ್ಯಾನ್ಸ್ ವಿಡಿಯೋ: 

ದಟ್ಟಣೆಯಿರುವ ರಸ್ತೆಯ ಮಧ್ಯೆ ಥಾರ್ ವಾಹನವನ್ನು ನಿಲ್ಲಿಸಿ ಯುವಕರು ಹುಚ್ಚಾಟ ಮೆರೆದಿದ್ದಾರೆ. ಅದರಲ್ಲೂ ಆಂಬುಲೆನ್ಸ್‌ನಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ರೋಗಿಯೊಬ್ಬರಿದ್ದರೂ, ಈ ಯುವಕರು ಸೈರನ್ ಶಬ್ದವನ್ನು ಲೆಕ್ಕಿಸದೆ ತಮ್ಮ ನೃತ್ಯವನ್ನು ಮುಂದುವರಿಸಿದ್ದಾರೆ. ರೋಗಿಯ ಜೀವದೊಂದಿಗೆ ಚೆಲ್ಲಾಟವಾಡಿದ ಈ ಯುವಕರ ಬೇಜವಾಬ್ದಾರಿ ಹಾಗೂ ಅಮಾನವೀಯ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ನೆಟಿಜನ್‌ಗಳು ಆಗ್ರಹಿಸಿದ್ದಾರೆ.

ಆಂಬುಲೆನ್ಸ್‌ಗೆ ತಡೆ: ತುರ್ತು ಚಿಕಿತ್ಸೆಗಾಗಿ ರೋಗಿಯನ್ನು ಹೊತ್ತೊಯ್ಯುತ್ತಿದ್ದ ಎರಡು ಆಂಬುಲೆನ್ಸ್‌ಗಳು ಸೈರನ್ ಹಾಕಿಕೊಂಡು ಬಂದರೂ, ಥಾರ್ ವಾಹನವನ್ನು ಅಡ್ಡನಿಲ್ಲಿಸಿ ಯುವಕರು ದಾರಿ ಬಿಡದೆ ದುವರ್ತನೆ ತೋರಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ: ರಸ್ತೆ ನಿಯಮಗಳನ್ನು ಉಲ್ಲಂಘಿಸಿ, ಸಾರ್ವಜನಿಕರಿಗೆ ಮತ್ತು ತುರ್ತು ಸೇವೆಗಳಿಗೆ ತೊಂದರೆ ನೀಡುತ್ತಿರುವ ಇಂತಹ ಸ್ಟಂಟ್ಸ್ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಲಾಗಿದೆ.

ಪೊಲೀಸ್ ತನಿಖೆ: ವೈರಲ್ ಆಗಿರುವ ವೀಡಿಯೊ ಆಧರಿಸಿ ಹಪುರ್ ಪೊಲೀಸರು ಥಾರ್ ವಾಹನದ ನೊಂದಣಿ ಸಂಖ್ಯೆ ಪತ್ತೆ ಹಚ್ಚಿ, ಯುವಕರ ವಿರುದ್ಧ ತನಿಖೆ ಕೈಗೊಂಡು ಕ್ರಮ ಜರುಗಿಸಲು ಮುಂದಾಗಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles