ಬೆಂಗಳೂರು: ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಯು ಏರಿಕೆಯ ಹಾದಿಯನ್ನು ಮುಂದುವರಿಸಿದ್ದು, ನವೆಂಬರ್ 16ರಂದು ಪ್ರಮುಖ ಮಹಾನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ದರವು ಪ್ರತಿ 10 ಗ್ರಾಂಗೆ ಸರಿಸುಮಾರು 1.37 ಲಕ್ಷ ರೂ. ಆಸುಪಾಸಿನಲ್ಲಿದೆ.
ಚೆನ್ನೈ ಮತ್ತು ದೆಹಲಿ ಸೇರಿದಂತೆ ವಿವಿಧ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸ್ಥಿರವಾಗಿದ್ದು, ಬೆಳ್ಳಿ ಬೆಲೆಯು ಪ್ರತಿ ಕೆಜಿಗೆ 1.76 ಲಕ್ಷ ರೂ. ಗಡಿ ದಾಟಿದೆ ಎಂದು ಮಾರುಕಟ್ಟೆ ವರದಿಗಳು ತಿಳಿಸಿವೆ.
ಅಖಿಲ ಭಾರತ ಬುಲಿಯನ್ ಮಾರುಕಟ್ಟೆಯ ದರಗಳ ಪ್ರಕಾರ, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 1,37,330 ರೂ. ಇದ್ದರೆ, 925 ಸ್ಟರ್ಲಿಂಗ್ ಬೆಳ್ಳಿಯ ದರವು ಪ್ರತಿ ಕೆಜಿಗೆ 1,77,290 ರೂ. ಇದೆ. ಪ್ರಮುಖ ನಗರಗಳಲ್ಲಿನ ಚಿನ್ನದ ದರ ವಿವರ ಗಮನಿಸುವುದಾದರೆ; ಚೆನ್ನೈನಲ್ಲಿ ಪ್ರತಿ 10 ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ 1,37,480 ರೂ. ಹಾಗೂ ಬೆಂಗಳೂರಿನಲ್ಲಿ 1,37,190 ರೂ. ಇದೆ. ಅದೇ ರೀತಿ ಮುಂಬೈನಲ್ಲಿ 1,37,080 ರೂ., ದೆಹಲಿಯಲ್ಲಿ 1,36,840 ರೂ., ಕೋಲ್ಕತ್ತಾದಲ್ಲಿ 1,36,900 ರೂ. ಮತ್ತು ಹೈದರಾಬಾದ್‌ನಲ್ಲಿ 1,37,300 ರೂ. ದಾಖಲಾಗಿದೆ.
ನಗರವಾರು ಬೆಳ್ಳಿ ದರಗಳು: ಪ್ರತಿ ಕೆಜಿ ಸಿಲ್ವರ್ 999 ಫೈನ್ ಬೆಲೆಯು ಚೆನ್ನೈನಲ್ಲಿ 1,77,480 ರೂ., ಬೆಂಗಳೂರಿನಲ್ಲಿ 1,77,110 ರೂ., ಮುಂಬೈನಲ್ಲಿ 1,76,970 ರೂ. ಹಾಗೂ ದೆಹಲಿಯಲ್ಲಿ 1,76,660 ರೂ. ಇದೆ.
ಎಂಸಿಎಕ್ಸ್ (MCX) ಫ್ಯೂಚರ್ಸ್ ದರ: ಡಿಸೆಂಬರ್ 2026ರ ಚಿನ್ನ ಮತ್ತು ಬೆಳ್ಳಿ ಫ್ಯೂಚರ್ಸ್ ಕ್ರಮವಾಗಿ ಪ್ರತಿ 10 ಗ್ರಾಂಗೆ 1,36,750 ರೂ. ಮತ್ತು ಪ್ರತಿ ಕೆಜಿಗೆ 1,76,543 ರೂ. ಬಳಿಕ ವಹಿವಾಟು ಮುಕ್ತಾಯಗೊಳಿಸಿವೆ.
ಜಾಗತಿಕ ಮಾರುಕಟ್ಟೆ ವಹಿವಾಟು: ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ಗೆ 3,883.95 ಡಾಲರ್ ಇದ್ದರೆ, ಸ್ಪಾಟ್ ಸಿಲ್ವರ್ ಶೇ 2.28ರಷ್ಟು ಇಳಿಕೆಯಾಗಿ ಪ್ರತಿ ಔನ್ಸ್‌ಗೆ 47.61 ಡಾಲರ್‌ಗೆ ತಲುಪಿದೆ.





Leave a comment