ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ದಾವಣಗೆರೆ: ನ್ಯಾಯಬೆಲೆ ಅಂಗಡಿಗಳಲ್ಲಿ ಇಲ್ವಂತೆ ಸರ್ವರ್ ಸಮಸ್ಯೆ!

On: July 6, 2025 7:08 PM
Follow Us:
ದಾವಣಗೆರೆ
---Advertisement---

SUDDIKSHANA KANNADA NEWS/ DAVANAGERE/ DATE_06-07_2025

ದಾವಣಗೆರೆ: ನ್ಯಾಯಬೆಲೆ ಅಂಗಡಿಗಳಲ್ಲಿ ಯಾವುದೇ ಸರ್ವರ್ ಸಮಸ್ಯೆ ಇರುವುದಿಲ್ಲ ಎಂದು ಆಹಾರ ಇಲಾಖೆ ಜಂಟಿ ನಿರ್ದೇಶಕ ಮಧುಸೂದನ್ ಸ್ಪಷ್ಟಪಡಿಸಿದ್ದಾರೆ.

READ ALSO THIS STORY: ಕೃಷಿ ಸಾಲ ಪಡೆಯುವುದು ಹೇಗೆ? ಯಾವೆಲ್ಲಾ ದಾಖಲೆಗಳು ಬೇಕು? ಏನೆಲ್ಲಾ ಪ್ರಯೋಜನಗಳಿವೆ? ಸಂಪೂರ್ಣ ಮಾಹಿತಿ

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಿರ್ದಿಷ್ಟವಾದ ನ್ಯಾಯಬೆಲೆ ಅಂಗಡಿ ಹೆಸರನ್ನು ತಿಳಿಸಿದಲ್ಲಿ ಕ್ರಮಕೈಗೊಳ್ಳಲಾಗುತ್ತದೆ ಎಂದುಭರವಸೆ ನೀಡಿದರು. ಕೆಲವು ನ್ಯಾಯಬೆಲೆ ಅಂಗಡಿಗಳಿಗೆ ಆಹಾರಧಾನ್ಯ ತರಲು ವಯೋವೃದ್ದರು ಹೋಗುತ್ತಾರೆ, ಆದರೆ ಸರ್ವರ್ ಸಮಸ್ಯೆ ಇದೆ ಎಂದು ದಿನಗಟ್ಟಲೆ ಕಾಯಿಸುವುದನ್ನು ಕಾಣಲಾಗಿದೆ. ಮತ್ತು ಕೆಲವು ಅಂಗಡಿಯವರು ಕೆಲವೇ ದಿನಗಳು ಮಾತ್ರ ಸೀಮಿತ ಅವಧಿಗೆ ಅಂಗಡಿ ತೆರೆಯುವುದನ್ನು ಕಾಣಲಾಗಿದ್ದು ತಿಂಗಳ 30 ದಿನವೂ ಅಂಗಡಿಗಳು ತೆರೆದಿರುವಂತೆ ನೋಡಿಕೊಳ್ಳಬೇಕೆಂದು ಸದಸ್ಯರು ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ.

ಸಭೆಯಲ್ಲಿ ಸಮಿತಿ ಸದಸ್ಯರು ಪ್ರಸ್ತಾಪಿಸಿ ಶಾಲೆಗಳಿಗೆ ಮಾಧ್ಯಾಹ್ನದ ಬಿಸಿಯೂಟಕ್ಕೆ ಪೂರೈಕೆಯಾಗುವ ಆಹಾರ ಧಾನ್ಯದಲ್ಲಿ ಹುಳುಗಳಿರುವುದನ್ನು ಗಮನಿಸಲಾಗಿದೆ ಎಂದಾಗ ಈ ಬಗ್ಗೆ ಅಕ್ಷರ ದಾಸೋಹ ಅಧಿಕಾರಿಗಳು ಮತ್ತು ಆಹಾರ ಇಲಾಖೆ ಅಧಿಕಾರಿಗಳು ಗುಣಮಟ್ಟ ಖಾತರಿಪಡಿಸಿಕೊಳ್ಳಬೇಕು. ಕಳಪೆಯಾಗಿದ್ದಲ್ಲಿ ಅದನ್ನು ವಾಪಸ್ ಮಾಡಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠ್ಠಲ್ ರಾವ್ ಆಹಾರ ಇಲಾಖೆ ಅಧಿಕಾರಿಗೆ ತಿಳಿಸಿದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment