ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಶ್ನೆ ಕೇಳಲು ಯತ್ನಿಸಿದ್ದ ನಾರ್ವೆಯ ಪತ್ರಕರ್ತೆ ಹೆಲ್ಲೆ ಲಿಂಗ್ (Helle Lyng) ಅವರ ಭಾರತದ ವೀಸಾವನ್ನು ಕೊನೆಯ ಕ್ಷಣದಲ್ಲಿ ರದ್ದುಪಡಿಸಿರುವುದಕ್ಕೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.
ಪ್ರಶ್ನೆಗಳನ್ನು ಕೇಳುವುದನ್ನು ಅಪರಾಧದಂತೆ ಬಿಂಬಿಸುತ್ತಿರುವ ಕೇಂದ್ರ ಸರ್ಕಾರದ ನಡೆ ಪ್ರಜಾಸಾತ್ತಾತ್ಮಕ ಸ್ವಾತಂತ್ರ್ಯದ ಕುರಿತು ಗಂಭೀರ ಕಳವಳ ಮೂಡಿಸಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಹೈದರಾಬಾದ್‌ನಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಬೇಕಿದ್ದ ನಾರ್ವೆಯ ಪತ್ರಕರ್ತೆಗೆ ಓಸ್ಲೋದಲ್ಲಿರುವ ಭಾರತೀಯ ದೂತಾವಾಸ ಕಚೇರಿಯು ಪ್ರಯಾಣದ ಕೆಲವೇ ಕ್ಷಣಗಳ ಮೊದಲು ವೀಸಾ ರದ್ದುಗೊಳಿಸಿದೆ. ಪತ್ರಕರ್ತರು ಪ್ರಶ್ನೆಗಳನ್ನು ಕೇಳುವುದು ಅವರ ಮೂಲಭೂತ ಜವಾಬ್ದಾರಿಯಾಗಿದೆ ಹೊರತು ಅಪರಾಧವಲ್ಲ ಎಂದು ಬಲವಾಗಿ ಪ್ರತಿಪಾದಿಸಿರುವ ರೇವಂತ್ ರೆಡ್ಡಿ, ಪ್ರಧಾನಿ ಮೋದಿ ವಿರುದ್ಧ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಪ್ರಶ್ನೆಗಳಿಗೆ ಯಾಕೆ ಅಂಜಿಕೆ?: ಪತ್ರಕರ್ತರು ಪ್ರಶ್ನೆ ಕೇಳುವುದನ್ನು ಸಹಿಸದ ಮೋದಿ ಸರ್ಕಾರವು ಪ್ರಜಾಸಾತ್ತಾತ್ಮಕ ಮೌಲ್ಯಗಳಿಗೆ ಧಕ್ಕೆ ತರುತ್ತಿದೆ ಎಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೀಸಾ ಕೊನೆಯ ಕ್ಷಣದಲ್ಲಿ ರದ್ದು: ನಾರ್ವೆ ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಧಾನಿಗೆ ಪ್ರಶ್ನೆ ಕೇಳಿದ್ದ ಪತ್ರಕರ್ತೆ ಹೆಲ್ಲೆ ಲಿಂಗ್ ಅವರ ಹೈದರಾಬಾದ್ ಭೇಟಿಯ ವೀಸಾವನ್ನು ದಿಢೀರ್ ರದ್ದುಪಡಿಸಲಾಗಿದೆ.
ಬಿಜೆಪಿ ಹಾಗೂ ಬಿಆರ್‌ಎಸ್ ವಿರುದ್ಧ ವಾಗ್ದಾಳಿ: ಈ ವಿಷಯವನ್ನು ವಿರೋಧಿಸುತ್ತಿರುವ ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ, ಬಿಜೆಪಿ ಅಧ್ಯಕ್ಷ ಎನ್. ರಾಮಚಂದರ್ ರಾವ್ ಹಾಗೂ ಬಿಆರ್‌ಎಸ್ ಪಕ್ಷಗಳ ವಿರುದ್ಧ ಮುಖ್ಯಮಂತ್ರಿ ತೀವ್ರ ಟೀಕೆಗಳನ್ನು ಮಾಡಿದರು.
ಭಾರತವು ಬುದ್ಧನ ಕಾಲದಿಂದಲೂ ಚರ್ಚೆ ಮತ್ತು ಸಂವಾದಗಳ ಮೂಲಕ ಬೆಳೆದು ಬಂದ ದೇಶವಾಗಿದೆ ಎಂದು ಸ್ಮರಿಸಿದ ರೇವಂತ್ ರೆಡ್ಡಿ, ವಿದೇಶಿ ಭಾಗಿದಾರರನ್ನು ಆಹ್ವಾನಿಸುವ ರೈಸಿನಾ ಡೈಲಾಗ್ ಅನ್ನು ಉದಾಹರಿಸುತ್ತಾ, ಚರ್ಚೆ ಮತ್ತು ಸಂವಾದಗಳಿಗೆ ಬಿಜೆಪಿ ಯಾಕೆ ಹೆದ್ರಿಕೊಳ್ಳುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಪತ್ರಕರ್ತೆಯೊಬ್ಬರು ಪ್ರಶ್ನೆ ಕೇಳಲು ಮುಂದಾದರೆ ಪ್ರಧಾನಿಯವರ ಚುನಾವಣಾ ಭವಿಷ್ಯಕ್ಕೆ ಧಕ್ಕೆ ಬರುತ್ತದೆಯೇ ಎಂದು ಅವರು ವ್ಯಂಗ್ಯವಾಡಿದ್ದಾರೆ.





Leave a comment