SUDDIKSHANA KANNADA NEWS/ DAVANAGERE/ DATE_04-07_2025
ದಾವಣಗೆರೆ: ದಾವಣಗೆರೆ ಹಾಗೂ ಹರಿಹರದಿಂದ ಜೋಗ ಮತ್ತು ಶಿರಸಿಗೆ ವಿಶೇಷ ಪ್ಯಾಕೇಜ್ ಸಾರಿಗೆ ವ್ಯವಸ್ಥೆಯನ್ನು ಜುಲೈ 13 ರಿಂದ ಪ್ರತಿ ಶನಿವಾರ, ಭಾನುವಾರ, ರಜಾದಿನಗಳಂದು ಮಾಡಲಾಗಿದೆ.
READ ALSO THIS STORY: ಸೌಂದರ್ಯವೇ ಮುಳುವಾಯಿತೇ… ಅನೈತಿಕ ಸಂಬಂಧದ ಶಂಕೆಯಿಂದ ಕೌನ್ಸಿಲರ್ ಪತ್ನಿಯನ್ನೇ ಕೊಚ್ಚಿ ಕೊಂದ ಗಂಡ!

ದಾವಣಗೆರೆ-ಶಿರಸಿ ಬೆಳಿಗ್ಗೆ 7 ಗಂಟೆಗೆ, ಶಿರಸಿ-ಜೋಗ ಮಧ್ಯಾಹ್ನ 12 ಗಂಟೆಗೆ, ಜೋಗ-ದಾವಣಗೆರೆ ಸಂಜೆ 4.30ಕ್ಕೆ ಇರುತ್ತದೆ. ಪ್ರಯಾಣದ ದರ 2 ಬದಿ ಸೇರಿ ಒಬ್ಬರಿಗೆ ರೂ.650, ಮಕ್ಕಳ ಪ್ರಯಾಣ ದರ ರೂ.500 ಅನ್ನು ನಿಗಧಿಗೊಳಿಸಲಾಗಿದೆ.
ಮುಂಗಡ ಬುಕ್ಕಿಂಗ್ ಕೌಂಟರ್ ಹಾಗೂ ಆನ್ಲೈನ್ ಬುಕ್ಕಿಂಗ್ ksrtc.karnataka.gov.in ಮಾಡಬಹುದೆಂದು ವಿಭಾಗೀಯ ನಿಯಂತ್ರಣಾಧಿಕಾರಿ ಕಿರಣಕುಮಾರ ಎಫ್ ಬಸಾಪುರ ತಿಳಿಸಿದ್ದಾರೆ.