Home ದಾವಣಗೆರೆ ಕಂಪ್ಯೂಟರ್ ಸೈನ್ಸ್ ಓದಿಲ್ಲ, ಆದರೂ ಎನ್‌ವಿಡಿಯಾದಲ್ಲಿ ಸೀನಿಯರ್ ಡೈರೆಕ್ಟರ್: ಯಾರು ಈ ಮ್ಯಾಡಿಸನ್ ಹುವಾಂಗ್?
ದಾವಣಗೆರೆಬೆಂಗಳೂರುವಾಣಿಜ್ಯ

ಕಂಪ್ಯೂಟರ್ ಸೈನ್ಸ್ ಓದಿಲ್ಲ, ಆದರೂ ಎನ್‌ವಿಡಿಯಾದಲ್ಲಿ ಸೀನಿಯರ್ ಡೈರೆಕ್ಟರ್: ಯಾರು ಈ ಮ್ಯಾಡಿಸನ್ ಹುವಾಂಗ್?

Share
ಎನ್‌ವಿಡಿಯಾ
Share

ನವದೆಹಲಿ: ಸಾಮಾನ್ಯವಾಗಿ ಕೃತಕ ಬುದ್ಧಿಮತ್ತೆ (AI) ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉನ್ನತ ಹುದ್ದೆಗೇರಲು ಕಂಪ್ಯೂಟರ್ ಸೈನ್ಸ್ ಅಥವಾ ಎಂಜಿನಿಯರಿಂಗ್ ಪದವಿ ಬೇಕು ಎಂಬ ನಂಬಿಕೆಯಿದೆ. ಆದರೆ, ವಿಶ್ವದ ಅಗ್ರಗಣ್ಯ ಟೆಕ್ ಕಂಪನಿ ಎನ್‌ವಿಡಿಯಾ  ಸಿಇಒ ಜೆನ್ಸನ್ ಹುವಾಂಗ್ ಅವರ ಪುತ್ರಿ ಮ್ಯಾಡಿಸನ್ ಹುವಾಂಗ್, ಪಾಕಶಾಲೆ (Pastry School) ಮತ್ತು ಐಷಾರಾಮಿ ಫ್ಯಾಷನ್ ಲೋಕದ ಮೂಲಕ AI ತಂತ್ರಜ್ಞಾನ ಕ್ಷೇತ್ರಕ್ಕೆ ಕಾಲಿಡುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.

ಪ್ರಸ್ತುತ ಅವರು ಎನ್‌ವಿಡಿಯಾದಲ್ಲಿ ‘ಫಿಸಿಕಲ್ AI ಪ್ಲಾಟ್‌ಫಾರ್ಮ್‌ಗಳ’ ಪ್ರಾಡಕ್ಟ್ ಮತ್ತು ಟೆಕ್ನಿಕಲ್ ಮಾರ್ಕೆಟಿಂಗ್ ವಿಭಾಗದ ಸೀನಿಯರ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

2012ರಲ್ಲಿ ಕಲಿನರಿ ಇನ್‌ಸ್ಟಿಟ್ಯೂಟ್ ಆಫ್ ಅಮೆರಿಕಾದಿಂದ ಪದವಿ ಪಡೆದ ಮ್ಯಾಡಿಸನ್, ಪ್ಯಾರಿಸ್‌ನ ಪ್ರಸಿದ್ಧ ‘ಲೆ ಕಾರ್ಡನ್ ಬ್ಲೂ’ನಲ್ಲಿ ಪೇಸ್ಟ್ರಿ ತಯಾರಿಕೆಯಲ್ಲಿ ತರಬೇತಿ ಪಡೆದಿದ್ದರು. ಬಳಿಕ ಲಂಡನ್‌ನಲ್ಲಿ ವೈನ್ ಮ್ಯಾನೇಜ್‌ಮೆಂಟ್ ಅಧ್ಯಯನ ಮಾಡಿ, ಮಿಯಾಮಿ ಮತ್ತು ನ್ಯೂಯಾರ್ಕ್‌ನ ವೃತ್ತಿಪರ ಅಡುಗೆಮನೆಗಳಲ್ಲಿ ಶೆಫ್ ಆಗಿ ದುಡಿದಿದ್ದರು. 2015ರಲ್ಲಿ ಫ್ರಾನ್ಸ್‌ನ ಐಷಾರಾಮಿ ಬ್ರ್ಯಾಂಡ್ ಸಮೂಹವಾದ ‘ಲೂಯಿ ವಿಟಾನ್’ ಸೇರಿದ ಅವರು, ಸುಮಾರು ನಾಲ್ಕು ವರ್ಷಗಳ ಕಾಲ ಮಾರ್ಕೆಟಿಂಗ್ ಮತ್ತು ಬ್ಯುಸಿನೆಸ್ ಡೆವಲಪ್‌ಮೆಂಟ್ ವಿಭಾಗದಲ್ಲಿ ಕೆಲಸ ಮಾಡಿದ್ದರು.

ಪಾಕಶಾಲೆ ಮತ್ತು ಐಷಾರಾಮಿ ಬ್ರ್ಯಾಂಡ್ ಅನುಭವ: ಪ್ಯಾರಿಸ್‌ನಲ್ಲಿ ಪೇಸ್ಟ್ರಿ ಶೆಫ್ ಆಗಿ ತರಬೇತಿ ಪಡೆದು, ಸೊಮೆಲಿಯರ್ (ವೈನ್ ತಜ್ಞೆ) ಆಗಿ ಕೆಲಸ ಮಾಡಿದ ನಂತರ 2015ರಿಂದ 2019ರವರೆಗೆ LVMH ಸಮೂಹದಲ್ಲಿ ಮಾರ್ಕೆಟಿಂಗ್ ಜವಾಬ್ದಾರಿ ನಿರ್ವಹಿಸಿದ್ದರು.

ಟೆಕ್ ಮತ್ತು ಮ್ಯಾನೇಜ್‌ಮೆಂಟ್ ಶಿಕ್ಷಣ: ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಡೇಟಾ ಸೈನ್ಸ್, MIT ಸ್ಲೋನ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ AI ಕೋರ್ಸ್‌ಗಳು ಹಾಗೂ ಲಂಡನ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ MBA ಪದವಿ ಪಡೆಯುವ ಮೂಲಕ ತಂತ್ರಜ್ಞಾನ ಕ್ಷೇತ್ರಕ್ಕೆ ಅಡಿಪಾಯ ಹಾಕಿಕೊಂಡರು.

ಎನ್‌ವಿಡಿಯಾದಲ್ಲಿ ಬೆಳವಣಿಗೆ: 2020ರಲ್ಲಿ ಎನ್‌ವಿಡಿಯಾದಲ್ಲಿ MBA ಇಂಟರ್ನ್ ಆಗಿ ವೃತ್ತಿ ಆರಂಭಿಸಿದ ಮ್ಯಾಡಿಸನ್, ಓಮ್ನಿವರ್ಸ್ (Omniverse) ಪ್ಲಾಟ್‌ಫಾರ್ಮ್‌ನಲ್ಲಿ ಕೆಲಸ ಮಾಡಿ, ಇದೀಗ ರೊಬೊಟಿಕ್ಸ್ ಮತ್ತು ಇಂಡಸ್ಟ್ರಿಯಲ್ ಸಿಮ್ಯುಲೇಶನ್‌ನಂತಹ ಫಿಸಿಕಲ್ AI ವಿಭಾಗದ ಹಿರಿಯ ನಿರ್ದೇಶಕಿಯಾಗಿ ಬಡ್ತಿ ಪಡೆದಿದ್ದಾರೆ.

“ಕೌಶಲ್ಯ (Craftsmanship) ಮತ್ತು ಸೂಕ್ಷ್ಮ ವಿವರಗಳ ಮೇಲಿನ ತೀವ್ರ ಆಸಕ್ತಿಯೇ ನನ್ನ ವಿಭಿನ್ನ ವೃತ್ತಿ ಆಯ್ಕೆಗಳನ್ನು ಬೆಸೆದಿದೆ” ಎಂದು ಮ್ಯಾಡಿಸನ್ ತಮ್ಮ ಪಯಣದ ಕುರಿತು ವಿವರಿಸಿದ್ದಾರೆ. ತಂದೆ ಜೆನ್ಸನ್ ಹುವಾಂಗ್ ಅವರೊಂದಿಗೆ ಸಾರ್ವಜನಿಕ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಮತ್ತು ಕಂಪನಿಯಲ್ಲಿ ಅವರ ಜವಾಬ್ದಾರಿ ಹೆಚ್ಚುತ್ತಿರುವುದು ಮುಂದಿನ ಉತ್ತರಾಧಿಕಾರಿ ಎಂಬ ಚರ್ಚೆಗೆ ಕಾರಣವಾಗಿದ್ದರೂ, ಕಂಪನಿಯಿಂದ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.

Share

Leave a comment

Leave a Reply

Your email address will not be published. Required fields are marked *

Related Articles