“ನಮ್ಮ ಸಿದ್ದಣ್ಣ ನಮಗೆ ಹೆಮ್ಮೆ”
ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯ ಬಿಜೆಪಿ ನಾಯಕರೆಂದರೆ ಮೊಟ್ಟ ಮೊದಲು ನೆನಪಿಗೆ ಬರುವುದೇ ಡಾ. ಜಿ.ಎಂ. ಸಿದ್ಧೇಶ್ವರ. ಸಮರ್ಥ ನಾಯಕ, ದಕ್ಷ ಆಡಳಿಗಾರ, ನಿಷ್ಠಾವಂತ, ಸರ್ವ ಜನಾಂಗಕ್ಕೂ ಪ್ರೀತಿಯ ಸರದಾರ ಜಿ.ಎಂ ಸಿದ್ಧೇಶ್ವರ. ಹುಟ್ಟುತ್ತಲೇ ಶ್ರೀಮಂತಿಕೆ ಇದ್ದರೂ ಜನ ಸಾಮಾನ್ಯರಂತೆ ಬದುಕುತ್ತಿರುವ ಜನ ನಾಯಕ ಎಂದರೆ ತಪ್ಪಾಗಲ್ಲ.
ಜಾತಿ, ಮತ ಬೇಧವಿಲ್ಲದೆ ಎಲ್ಲರನ್ನು ಸರಿ ಸಮಾನರಂತೆ ಕಂಡು ಪಕ್ಷಕ್ಕೆ ದುಡಿದವರನ್ನು ಬೆಳಕಿಗೆ ತಂದ ಕೀರ್ತಿ ಜಿ.ಎಂ. ಸಿದ್ದೇಶ್ವರ ಅವರಿಗೆ ಸಲ್ಲುತ್ತದೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸತತವಾಗಿ ಜಯ ಸಾಧಿಸಿ ಇತಿಹಾಸ ಸೃಷ್ಟಿಸಿದ್ದು, ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದಾರೆ. ಪಕ್ಷ ಕೊಟ್ಟ ಎಲ್ಲಾ ಜವಾಬ್ದಾರಿಗಳನ್ನು ಸಂಘಟನೆ ಮೂಲಕ ಕಟ್ಟಿ ಬೆಳಸಿ ಇಂದಿಗೂ ಜಿಲ್ಲೆಯಲ್ಲಿ ಲಕ್ಷಾಂತರ ಕಾರ್ಯಕರ್ತರು, ನಾಯಕರನ್ನ ಹುಟ್ಟಿ ಹಾಕಿದ್ದಾರೆ.

ಅಧಿಕಾರ ಶಾಶ್ವತವಲ್ಲ, ಜನರ ಸೇವೆ ಶಾಶ್ವತ ಎಂದು ರಾಜಕಾರಣ ಮಾಡಿದ ಧೀಮಂತ ನಾಯಕ ಎಂದರೆ ನಮ್ಮ ಜಿ.ಎಂ. ಸಿದ್ಧೇಶ್ವರ ಎಂದು ಹೆಮ್ಮೆಯಿಂದ ಹೇಳಿಕೊಳುತ್ತೇವೆ. ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಿ ಬೆಳಸಿ ಇಂದು ಹೆಮ್ಮರವಾಗುವಂತೆ ಮಾಡಿದ ಸಿದ್ದಣ್ಣನಿಗೆ ಹುಟ್ಟುಹಬ್ಬದ ಶುಭಾಷಯಗಳನ್ನ ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಬಾಡದ ಆನಂದರಾಜ್ ತಿಳಿಸಿದ್ದಾರೆ.
“ಅಭಿವೃದ್ಧಿ ಕ್ರಾಂತಿ”
ದಾವಣಗೆರೆ ಜಿಲ್ಲೆಯನ್ನು ವಿಶ್ವಮಟ್ಟಕ್ಕೆ ಕೊಂಡುಯ್ಯುವಲ್ಲಿ ಜಿ.ಎಂ. ಸಿದ್ದೇಶ್ವರ ಅವರ ಪಾತ್ರ ಕೂಡ ಮಹತ್ವದ್ದಾಗಿದೆ. ಅವರ ಆಡಳಿತಾವಧಿಯಲ್ಲಿ ಸಾವಿರಾರು ಕೋಟಿ ಅನುದಾನ ತಂದ ಅತ್ಯಂತ ಪ್ರಾಮಾಣಿಕವಾಗಿ ಜಿಲ್ಲೆಯನ್ನು ಅಭಿವೃದ್ಧಿ ಮಾಡಿದ್ದಾರೆ. ರೈಲ್ವೇ ನಿಲ್ದಾಣಕ್ಕೆ ಆಧುನಿಕತೆ ಸ್ಪರ್ಶ, ರೈಲ್ವೇ ಮೇಲ್ಸೇತುವೆ ನಿರ್ಮಾಣ, ಸ್ವಚ್ಛ ಭಾರತದಡಿ ನಗರದಲ್ಲಿ ಪಾರ್ಕ್ ರಸ್ತೆಗಳ ಅಭಿವೃದ್ಧಿ, ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಸೌಲಭ್ಯ, ಲೆಕ್ಕಕ್ಕಿಲ್ಲದ ಬಸ್ ತಂಗುದಾಣ, ಕೆರೆಗಳ ಅಭಿವೃದ್ಧಿ, ಸುಸಜ್ಜಿತ ಶಾಲಾ ಕಟ್ಟಡಗಳು, ಆಸ್ಪತ್ರೆಗಳ ಉನ್ನತೀಕರಣ, ಉದ್ಯೋಗ ಅವಕಾಶಗಳಿಗೆ ಅವಕಾಶ ಕಲ್ಪಸಿದ ಸಂಸದರಿದ್ದಾರೆ ಅವರೇ ಜಿ.ಎಂ. ಸಿದ್ಧೇಶ್ವರ ಅವರು. ಅವರು ಮಾಡಿದ ಕೆಲಸಗಳು ಇಂದಿಗೂ ಜನರ ಬಾಯಲ್ಲಿ ಮಾತನಾಡುತ್ತಿವೆ. ಇತರೆ ರಾಜಕಾರಣಿಗಳಂತೆ ಎಂದಿಗೂ ಅವರು ಎಸಿ ಕೊಠಡಿಯಲ್ಲಿ ಕುಳಿತು ಆಡಳಿತ ಮಾಡಲಿಲ್ಲ, ಜನರೊಂದಿಗೆ ಬೆರೆತು ಅವರ ಕಷ್ಟಕ್ಕೆ ಸ್ಪಂದಿಸಿ ಸರ್ವರಿಗೂ ಒಳ್ಳೆಯದಾಗುವಂತ ಕೆಲಸಗಳನ್ನು ಮಾಡಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ದಾವಣಗೆರೆ ಲೋಕಸಭಾ ಕ್ಷೇತ್ರದ ರಾಜಕೀಯಕ್ಕೆ ಸಂಬಂಧಿಸಿದಂತೆ ಪ್ರತಿಯೊಂದು ಹಳ್ಳಿಗೂ ಭೇಟಿ ಕೊಟ್ಟ ರಾಜಕಾರಣಿ ಯಾರದರೂ ಇದ್ದರೆ ಜಿ.ಎಂ. ಸಿದ್ದೇಶ್ವರ ಒಬ್ಬರೇ ಎನಿಸುತ್ತದೆ. ಪ್ರತಿಯೊಂದು ಹಳ್ಳಿಗಳಲ್ಲೂ ಜಿ.ಎಂ. ಸಿದ್ದೇಶ್ವರ ಹೆಸರು ಇಂದಿಗೂ ಪ್ರಚಲಿತವಿದೆ ಎಂದರೆ ಬಡವರು, ರೈತರೊಂದಿಗೆ ಸಿದ್ದೇಶ್ವರ ಅವರು ಹೊಂದಿದ್ದ ಆತ್ಮೀಯ ಒಡನಾಟ. ಹೀಗಾಗಿ ಜಿಲ್ಲೆಯಲ್ಲಿ ಸಿದ್ಧೇಶ್ವರ ಅವರು ಹೆಸರು ಅಚ್ಚಳಿಯದೇ ಉಳಿದಿದೆ.
“ಸಂಘಟನಾ ಚತುರ, ರಾಜಕೀಯ ಚಾಣಕ್ಯ”
ಎಂದಿಗೂ ದ್ವೇಷ, ಅಸೂಯೆಯಿಂದ ರಾಜಕರಾಣ ಮಾಡಿದವರಲ್ಲ, ಪ್ರೀತಿ ವಿಶ್ವಾಸದಿಂದ ಜನಾನುರಾಗಿಯಾಗಿ ಆಡಳಿತ ಮಾಡಿದವರು. ಅಧಿಕಾರಕ್ಕಾಗಿ ದ್ವೇಷದ ರಾಜಕಾರಣ ಮಾಡಿದವರೇ ಹೆಚ್ಚು ಆದರೆ ಜಿ.ಎಂ. ಸಿದ್ಧೇಶ್ವರ ಜನರ ಪ್ರೀತಿಯನ್ನು ಗೆದ್ದು ಅಧಿಕಾರಕ್ಕೆ ಬಂದವರು, ಇನ್ನೂ ಆಡಳಿತಾತ್ಮಕವಾದ ವಿಚಾರಗಳಿಗೆ ಪ್ರತಿಪಕ್ಷದವರನ್ನು ಟೀಕೆ ಮಾಡಿರಬಹುದು ಆದರೆ ರಾಜಕೀಯವಾಗಿ ದ್ವೇಷ ಮಾಡಲಿಲ್ಲ. ಎಲ್ಲಾ ಪಕ್ಷದ ಜನರಿಗೂ ಒಳ್ಳೆಯದನ್ನೇ ಬಯಸಿ ಇಡೀ ಕ್ಷೇತ್ರದ ಜನರ ಮನಸ್ಸನ್ನ ಗೆದ್ದಿದ್ದಾರೆ, ಅಧಿಕಾರ ಇರಲಿ ಬಿಡಲಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.
“ಸರ್ವ ಜನಾಂಗದ ನಾಯಕ”
ಪಕ್ಷದಲ್ಲಿ ಎಲ್ಲಾ ಸಮುದಾಯದವರಿಗೂ ನ್ಯಾಯ ಕೊಡಿಸಿದ್ದಾರೆ ನಿಷ್ಠೆಯಿಂದ ದುಡಿದ ಸಣ್ಣ ಸಮಾಜದ ವ್ಯಕ್ತಿಗೂ ಅಧಿಕಾರ ಹಂಚಿ ಸರ್ವ ಜನಾಂಗದ ನಾಯಕರಾಗಿದ್ದಾರೆ. ಸಿದ್ಧೇಶ್ವರ ಅವರ ವಿಶೇಷ ಗುಣವೆಂದರೆ ದಾವಣಗೆರೆ ಜಿಲ್ಲೆಯಲ್ಲಿ ಅಧಿಕಾರವಿದ್ದರೂ ಕುಟುಂಬದವರು, ಸಂಬಂಧಿಕರು ಎಂದು ಬೇಧಭಾವ ಮಾಡಲಿಲ್ಲ, ಪಕ್ಷಕ್ಕೆ ನಿಷ್ಠೆ ಪ್ರಾಮಾನಿಕವಾಗಿ ದುಡಿದವರನ್ನು ಗುರುತಿಸಿದ್ದಾರೆ. ಹಿಂದುಳಿದ, ಶೋಷಿತರು, ದಲಿತರು ಎಲ್ಲರನ್ನು ಮುಂಚೂಣಿಗೆ ತಂದಿರುವ ನಾಯಕರೆಂದರೆ ಜಿ.ಎಂ. ಸಿದ್ದೇಶ್ವರ ಎಂದರೆ ತಪ್ಪಾಗಲ್ಲ.
“ಸಮಾಜ ಸೇವಕ”
ಕೇವಲ ಸಂಸದರಾಗಿ ಕೆಲಸ ಮಾಡಲಿಲ್ಲ ಜಿ.ಎಂ ಮಲ್ಲಿಕಾರ್ಜುನಪ್ಪ – ಹಾಲಮ್ಮ ಚಾರಿಟಿ ಫೌಂಡೇಶನ್ ನಿಂದಲೂ ಸಾಕಷ್ಟು ಸಮಾಜ ಸೇವೆ ಮಾಡಿದ್ದಾರೆ. ಹರಿಹರ, ಹರಪನಹಳ್ಳಿ ಮತ್ತು ಚಿತ್ರದುರ್ಗ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್ ಗಳನ್ನು ನಿರ್ಮಿಸಿ ನೂರಾರು ಬಡ ರೋಗಿಗಳಿಗೆ ನೆರವಾಗಿದ್ದಾರೆ. ಲಕ್ಷಾಂತ ಮಕ್ಕಳಿಗೆ ಶಾಲಾ ಬ್ಯಾಗ್ ಶೋ ವಿತರಣೆ ಮಾಡಿದ್ದಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ತಂಗುದಾಣ ನಿರ್ಮಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡಿದ್ದಾರೆ ಹೀಗೆ ಹತ್ತಾರು ಸಮಾಜ ಸೇವೆಗಳನ್ನು ಮಾಡುತ್ತಾ ಬರುತ್ತಿದ್ದಾರೆ.
“ಸಂಸ್ಕಾರವಂತರು”
ಹಿರಿಯರನ್ನು ಸತ್ಕಾರದಿಂದ, ಕಿರಿಯರಿಯನ್ನು ನಮಸ್ಕರಿಸುತ್ತಾ, ಅಧಿಕಾರಿ ವರ್ಗದವರನ್ನು ಗೌರವದಿಂದ ಕಾಣುತ್ತಾ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ರಾಜಕಾರಣಿ ಜಿ.ಎಂ. ಸಿದ್ದೇಶ್ವರ ಅವರಿಗೆ ಮತ್ತೊಮ್ಮೆ ಜನ್ಮದಿನದ ಶುಭಾಷಯ ಕೋರುತ್ತಾ ನಿಮ್ಮ ಮಾರ್ಗದರ್ಶನದಲ್ಲೇ ಬಿಜೆಪಿ ಅಧಿಕಾರಕ್ಕೆ ಬರಲಿ ಎಂದು ಆಶಿಸುತ್ತೇವೆ. ಇವರ ಹುಟ್ಟು ಹಬ್ಬವನ್ನು ದಿನಾಂಕ 08/07/2025 ರಂದು ನಗರದ ಶ್ರೀ ರೇಣುಕಾ ಮಂದಿರದಲ್ಲಿ ಅಭಿಮಾನಿಗಳಿಂದ ಜನ್ಮದಿನದ ಸಂಭ್ರಮ ಉತ್ಸವಕ್ಕೆ ತಾವುಗಳು ಸಾಕ್ಷಿಯಾಗಬೇಕಿದೆ ಎಂದು ಬಾಡದ ಆನಂದರಾಜ್ ಮನವಿ ಮಾಡಿಕೊಂಡಿದ್ದಾರೆ