Home ದಾವಣಗೆರೆ ಬಿಜೆಪಿ ಮತ್ತು ಆರ್ ಎಸ್ ಎಸ್ ನವರು ನನ್ನ ತಾಯಿ ಬಗ್ಗೆ ಸುಳ್ಳುಗಳ ಹಬ್ಬಿಸಿದ್ದರು: ಈಗ ಅಮ್ಮ ಸತ್ಯ ಹೇಳುತ್ತಿದ್ದಾರೆ ಎಂದ್ರು ಪ್ರಿಯಾಂಕಾ ಗಾಂಧಿ ವಾದ್ರಾ!
ದಾವಣಗೆರೆನವದೆಹಲಿಬೆಂಗಳೂರು

ಬಿಜೆಪಿ ಮತ್ತು ಆರ್ ಎಸ್ ಎಸ್ ನವರು ನನ್ನ ತಾಯಿ ಬಗ್ಗೆ ಸುಳ್ಳುಗಳ ಹಬ್ಬಿಸಿದ್ದರು: ಈಗ ಅಮ್ಮ ಸತ್ಯ ಹೇಳುತ್ತಿದ್ದಾರೆ ಎಂದ್ರು ಪ್ರಿಯಾಂಕಾ ಗಾಂಧಿ ವಾದ್ರಾ!

Share
ಪ್ರಿಯಾಂಕಾ ಗಾಂಧಿ
Share

ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ನೂತನ ಆತ್ಮಕತೆ ‘ಬೆಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ಪುಸ್ತಕ ಬಿಡುಗಡೆಯಾದ ಬಳಿಕ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಆರಂಭವಾಗಿದೆ. 

ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರು ದಶಕಗಳಿಂದ ತಮ್ಮ ತಾಯಿಯ ಬಗ್ಗೆ ಸುಳ್ಳುಗಳನ್ನು ಮತ್ತು ಕಥೆಗಳನ್ನು ಕಟ್ಟಿಕೊಂಡು ಪ್ರಚಾರ ಮಾಡಿದ್ದರು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ತಮ್ಮ ತಾಯಿ ಸೋನಿಯಾ ಗಾಂಧಿ ಅವರು ದೀರ್ಘಕಾಲ ಮೌನವಾಗಿದ್ದು, ಈಗ ತಮ್ಮ ಪುಸ್ತಕದ ಮೂಲಕ ತಮ್ಮ ಬದುಕಿನ ಸತ್ಯವನ್ನು ಜನರ ಮುಂದಿಡುವ ಸಂಪೂರ್ಣ ಹಕ್ಕನ್ನು ಹೊಂದಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಸಮರ್ಥಿಸಿಕೊಂಡಿದ್ದಾರೆ.

ಬಿಜೆಪಿ-ಆರ್‌ಎಸ್‌ಎಸ್ ವಿರುದ್ಧ ಕಿಡಿ: ದಶಕಗಳಿಂದ ವಿರೋಧ ಪಕ್ಷದವರು ಮತ್ತು ಸಂಘಪಾರಿವಾರದವರು ತಮ್ಮ ತಾಯಿಯ ಬಗ್ಗೆ ಅನೇಕ ಅಪಪ್ರಚಾರಗಳನ್ನು ಮಾಡಿದರು. ಆದರೆ ಈಗ ಸೋನಿಯಾ ಗಾಂಧಿ ಅವರು ನಿಜಾಂಶವನ್ನು ಸಾರುತ್ತಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ತಿರುಗೇಟು ನೀಡಿದ್ದಾರೆ.

ಪುಸ್ತಕ ಓದುತ್ತಿರುವುದಕ್ಕೆ ಖುಷಿ: ತಮ್ಮ ತಾಯಿಯ ಆತ್ಮಕತೆಯನ್ನು ಜನರು ಮತ್ತು ವಿರೋಧಿಗಳು ಈಗ ಓದುತ್ತಿರುವುದು ನನಗೆ ಸಂತೋಷ ತಂದಿದೆ. ಸತ್ಯ ಏನು ಎಂಬುದು ಜನರಿಗೆ ತಿಳಿಯಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅಣ್ಣಾ ಹಜಾರೆ ಆಂದೋಲನದ ಉಲ್ಲೇಖ: 2011-2012ರ ‘ಭ್ರಷ್ಟಾಚಾರದ ವಿರುದ್ಧ ಭಾರತ’ ಆಂದೋಲನದ ಹಿಂದೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ತೆರೆಮರೆಯ ಕುಮ್ಮಕ್ಕು ಇತ್ತು ಎಂಬ ಸೋನಿಯಾ ಗಾಂಧಿ ಅವರ ಪುಸ್ತಕದ ಹೇಳಿಕೆ ದೇಶಾದ್ಯಂತ ಭಾರಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ರಾಜಕೀಯ ನಾಯಕರ ಹಾಗೂ ವಿರೋಧಿಗಳ ಟೀಕೆ-ಟಿಪ್ಪಣಿಗಳ ನಡುವೆಯೂ ಪ್ರಿಯಾಂಕಾ ಗಾಂಧಿ ಅವರು ತಮ್ಮ ತಾಯಿಯ ಪರವಾಗಿ ಬ್ಯಾಟ್ ಬೀಸಿರುವುದು ಈಗ ರಾಷ್ಟ್ರೀಯ ರಾಜಕಾರಣದಲ್ಲಿ ಮತ್ತಷ್ಟು ಸಂಚಲನ ಮೂಡಿಸಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles