Home ಕ್ರೈಂ ನ್ಯೂಸ್ ಮೋಹಕ ರೂಪದ ಮಹಿಳಾ ಡಿಎಸ್‌ಪಿ ಪ್ರೇಮದ ಬಲೆಗೆ ಬಿದ್ದು 5 ಕೋಟಿ ರೂ. ಕಳೆದುಕೊಂಡ ಹೋಟೆಲ್ ಉದ್ಯಮಿ: ಅಧಿಕಾರಿ ಸಸ್ಪೆಂಡ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಮೋಹಕ ರೂಪದ ಮಹಿಳಾ ಡಿಎಸ್‌ಪಿ ಪ್ರೇಮದ ಬಲೆಗೆ ಬಿದ್ದು 5 ಕೋಟಿ ರೂ. ಕಳೆದುಕೊಂಡ ಹೋಟೆಲ್ ಉದ್ಯಮಿ: ಅಧಿಕಾರಿ ಸಸ್ಪೆಂಡ್!

Share
ಮಹಿಳಾ
Share

ರಾಯ್‌ಪುರ (ಛತ್ತೀಸ್‌ಗಢ): ಮೋಹಕ ರೂಪದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಪ್ರೇಮದ ಬಲೆಗೆ ಬಿದ್ದು, ಹೋಟೆಲ್ ಉದ್ಯಮಿಯೊಬ್ಬರು ಬರೋಬ್ಬರಿ 2 ರಿಂದ 5 ಕೋಟಿ ರೂಪಾಯಿ ಹಣ ಹಾಗೂ ಆಸ್ತಿಯನ್ನು ಕಳೆದುಕೊಂಡಿರುವ ಆಘಾತಕಾರಿ ಘಟನೆ ಛತ್ತೀಸ್‌ಗಢದಲ್ಲಿ ಬೆಳಕಿಗೆ ಬಂದಿದೆ.

ವಿವಾಹಿತ ಉದ್ಯಮಿಗೆ ಮದುವೆಯ ಆಮಿಷವೊಡ್ಡಿ ವಂಚಿಸಿದ ಗಂಭೀರ ಆರೋಪದ ಮೇಲೆ ದಂತೇವಾಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಿಎಸ್‌ಪಿ ಕಲ್ಪನಾ ವರ್ಮಾ ಅವರನ್ನು ಪೊಲೀಸ್ ಇಲಾಖೆ ಅಮಾನತುಗೊಳಿಸಿದೆ.

ರಾಯ್‌ಪುರದ ಹೋಟೆಲ್ ಮಾಲೀಕ ದೀಪಕ್ ಟಂಡನ್ ಎಂಬಾತನಿಗೆ ಈಗಾಗಲೇ ಮದುವೆಯಾಗಿದ್ದರೂ, 2021ರಲ್ಲಿ ಡಿಎಸ್‌ಪಿ ಕಲ್ಪನಾ ವರ್ಮಾ ಅವರ ಪರಿಚಯವಾಗಿತ್ತು. ಮದುವೆಯಾಗುವುದಾಗಿ ನಂಬಿಸಿದ ಅಧಿಕಾರಿ, ಉದ್ಯಮಿಯಿಂದ ಕೋಟ್ಯಂತರ ರೂಪಾಯಿ ನಗದು, ಐಷಾರಾಮಿ ಕಾರು, ವಜ್ರದ ಉಂಗುರ ಹಾಗೂ ಚಿನ್ನದ ಸರ ಸೇರಿದಂತೆ ಹಲವು ದುಬಾರಿ ಉಡುಗೊರೆಗಳನ್ನು ಪಡೆದಿದ್ದರು. ಅಷ್ಟೇ ಅಲ್ಲದೆ, ಉದ್ಯಮಿಯ ಒಂದು ಹೋಟೆಲ್ ಅನ್ನು ತಮ್ಮ ಸಹೋದರನ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಹಣ ಕೈಸೇರಿದ ಬಳಿಕ ನಿರ್ಲಕ್ಷ್ಯ ಹಾಗೂ ಬ್ಲ್ಯಾಕ್‌ಮೇಲ್: ಬೇಡಿಕೆಗಳು ಈಡೇರುವವರೆಗೂ ಪ್ರೀತಿ ಮತ್ತು ಮದುವೆಯ ಮಾತುಗಳನ್ನಾಡುತ್ತಿದ್ದ ಡಿಎಸ್‌ಪಿ, ಆಸ್ತಿ ಹಾಗೂ ಹಣ ಕೈಸೇರಿದ ನಂತರ ಉದ್ಯಮಿಯನ್ನು ಸಂಪೂರ್ಣವಾಗಿ ಕಡೆಗಣಿಸಿ ಬ್ಲ್ಯಾಕ್‌ಮೇಲ್ ಮಾಡಲು ಶುರುಮಾಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸಾಕ್ಷ್ಯಾಧಾರಗಳೊಂದಿಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಉದ್ಯಮಿ: ವಂಚನೆಗೊಳಗಾದ ದೀಪಕ್ ಟಂಡನ್ ಕೊನೆಗೆ ತಮ್ಮ ಪತ್ನಿಗೆ ಎಲ್ಲಾ ವಿಷಯ ತಿಳಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಸಾಕ್ಷಿಯಾಗಿ ಅಧಿಕಾರಿಯೊಂದಿಗಿನ ಫೋಟೋಗಳು, ವಾಟ್ಸಾಪ್ ಚಾಟ್‌ಗಳು ಹಾಗೂ ಬ್ಯಾಂಕ್ ವಹಿವಾಟಿನ ದಾಖಲೆಗಳನ್ನು ಸಲ್ಲಿಸಿದ್ದಾರೆ.

ಆರೋಪ ನಿರಾಕರಿಸಿದ ಡಿಎಸ್‌ಪಿ, ಉದ್ಯಮಿಗೂ ವಾರಂಟ್: ತಾವು ಯಾವುದೇ ತಪ್ಪು ಮಾಡಿಲ್ಲ, ಹಾಜರುಪಡಿಸಲಾದ ಚಾಟ್ ಮತ್ತು ಫೋಟೋಗಳು ಎಡಿಟ್ ಮಾಡಲಾದವು ಎಂದು ಡಿಎಸ್‌ಪಿ ಕಲ್ಪನಾ ವರ್ಮಾ ಸಮರ್ಥಿಸಿಕೊಂಡಿದ್ದಾರೆ. ಆದರೆ ಹಣಕಾಸಿನ ವಹಿವಾಟಿಗೆ ಬಲವಾದ ಸಾಕ್ಷ್ಯ ಸಿಕ್ಕ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿದೆ. ಇನ್ನೊಂದೆಡೆ, 28 ಲಕ್ಷ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಃ ಉದ್ಯಮಿ ದೀಪಕ್ ಟಂಡನ್ ವಿರುದ್ಧವೂ ವಾರಂಟ್ ಜಾರಿಯಾಗಿದೆ.

ಸದ್ಯ ಈ ಹೈ-ಪ್ರೊಫೈಲ್ ವಂಚನೆ ಪ್ರಕರಣವು ನ್ಯಾಯಾಲಯದ ಅಂಗಳ ತಲುಪಿದ್ದು, ಪೊಲೀಸರು ಮತ್ತು ನ್ಯಾಯಾಂಗದಿಂದ ಹೆಚ್ಚಿನ ತನಿಖೆ ಮುಂದುವರಿದಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles