Home ಕ್ರೈಂ ನ್ಯೂಸ್ ರೈಲಿನಲ್ಲಿ ಟಿಕೆಟ್ ತಡವಾಗಿ ತೋರಿಸಿದ ಪ್ರಯಾಣಿಕನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ: ಟಿಟಿಇ ಅಹಂಕಾರದ ವರ್ತನೆಗೆ ತಕ್ಕ ಶಾಸ್ತಿ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ರೈಲಿನಲ್ಲಿ ಟಿಕೆಟ್ ತಡವಾಗಿ ತೋರಿಸಿದ ಪ್ರಯಾಣಿಕನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ: ಟಿಟಿಇ ಅಹಂಕಾರದ ವರ್ತನೆಗೆ ತಕ್ಕ ಶಾಸ್ತಿ!

Share
ಟಿಕೆಟ್
Share

ಝಾನ್ಸಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಝಾನ್ಸಿಯ ವೀರಾಂಗನಾ ಲಕ್ಷ್ಮೀಬಾಯಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಮೇಲೆ ಮಹಿಳಾ ಟಿಟಿಇ  ಅತ್ಯಂತ ದುರ್ವರ್ತನೆ ತೋರಿರುವ ಘಟನೆ ತೀವ್ರ ವಿವಾದ ಸೃಷ್ಟಿಸಿದೆ.

ಟಿಕೆಟ್ ತೋರಿಸಲು ಸ್ವಲ್ಪ ತಡವಾಯಿತೆಂಬ ಕಾರಣಕ್ಕೆ ಪ್ರಯಾಣಿಕನನ್ನು ನಿರಕ್ಷರಸ್ಥ ಎಂದು ಅವಮಾನಿಸಿ, ನಿಲ್ದಾಣದಿಂದ ಹೊರಹೋಗುವಂತೆ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ರೈಲ್ವೆ ಇಲಾಖೆಯು ಕೂಡಲೇ ಎಚ್ಚೆತ್ತುಕೊಂಡು ಕರ್ತವ್ಯಲೋಪ ಎಸಗಿರುವ ಮಹಿಳಾ ಟಿಟಿಇಯನ್ನು ಅಮಾನತುಗೊಳಿಸಿದೆ.

ನವೆಂಬರ್ 8ರಂದು ಕೆಎಸ್‌ಆರ್ ಬೆಂಗಳೂರು-ಹೊಸದೆಹಲಿ ಕರ್ನಾಟಕ ಎಕ್ಸ್‌ಪ್ರೆಸ್ (12627) ರೈಲು ಝಾನ್ಸಿ ನಿಲ್ದಾಣಕ್ಕೆ ಆಗಮಿಸಿದಾಗ ಈ ಘಟನೆ ನಡೆದಿದೆ. ಲಖನೌ ನಿವಾಸಿ ಶ್ರವಣ್ ಕುಮಾರ್ ಹಾಗೂ ಇಬ್ಬರು ಸಹಯಾತ್ರಿಗಳು ಆಂಧ್ರಪ್ರದೇಶದ ಪೆನುಕೊಂಡದಿಂದ ಸ್ಲೀಪರ್ ಕ್ಲಾಸ್ ಟಿಕೆಟ್ ಪಡೆದು ಪ್ರಯಾಣಿಸುತ್ತಿದ್ದರು. ಟಿಕೆಟ್ ಪರೀಕ್ಷಿಸುವ ವೇಳೆ ಶ್ರವಣ್ ತಮ್ಮ ಬ್ಯಾಗ್‌ನಲ್ಲಿ ಟಿಕೆಟ್ ಹುಡುಕಲು ಸ್ವಲ್ಪ ಸಮಯ ತೆಗೆದುಕೊಂಡಿದ್ದಾರೆ. ಸಿಟ್ಟಿಗೆದ್ದ ಟಿಟಿಇ ಅವರನ್ನು ತಮ್ಮ ಕಚೇರಿಗೆ ಕರೆದೊಯ್ದು ಇತರ ಸಿಬ್ಬಂದಿಯೆದುರು ತೀವ್ರವಾಗಿ ನಿಂದಿಸಿದ್ದಾರೆ. ಶ್ರವಣ್ ಬಳಿ ಮಾನ್ಯವಾದ ಟಿಕೆಟ್ ಇದ್ದರೂ, “ನಿನಗೆ ಏನೂ ಗೊತ್ತಿಲ್ಲ, ನೀನೊಬ್ಬ ಅನಕ್ಷರಸ್ಥ” ಎಂದು ಹೀಯಾಳಿಸಿ, ರೈಲು ನಿಲ್ದಾಣದಿಂದ ಹೊರಟುಹೋಗುವಂತೆ ಬಲವಂತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್: ಟಿಟಿಇ ಅಹಂಕಾರದ ನಡವಳಿಕೆಯನ್ನು ಪ್ರಯಾಣಿಕ ಶ್ರವಣ್ ಕುಮಾರ್ ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದು ಎಕ್ಸ್ (X) ತಾಣದಲ್ಲಿ ರೈಲ್ವೆ ಸಚಿವಾಲಯ ಹಾಗೂ ಅಧಿಕಾರಿಗಳನ್ನು ಟ್ಯಾಗ್ ಮಾಡಿ ದೂರು ದಾಖಲಿಸಿದ್ದರು.

ತಕ್ಷಣದ ಅಮಾನತು ಕ್ರಮ: ವಿಡಿಯೋ ವೈರಲ್ ಆಗುತ್ತಿದ್ದಂತೆ ಗಂಭೀರವಾಗಿ ಪರಿಗಣಿಸಿದ ಝಾನ್ಸಿ ರೈಲ್ವೆ ವಿಭಾಗದ ಅಧಿಕಾರಿಗಳು, ಮಹಿಳಾ ಟಿಟಿಇಯನ್ನು ತಕ್ಷಣವೇ ಅಮಾನತುಗೊಳಿಸಿ ಇಲಾಖಾ ತನಿಖೆಗೆ (Departmental Enquiry) ಆದೇಶಿಸಿದ್ದಾರೆ.

ಪ್ರಯಾಣಿಕರ ಗೌರವಕ್ಕೆ ಧಕ್ಕೆ ಇಲ್ಲ: ರೈಲ್ವೆ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸುವುದು ನಮ್ಮ ಮೊದಲ ಆದ್ಯತೆಯಾಗಿದ್ದು, ಸಿಬ್ಬಂದಿಯ ಇಂತಹ ಅಸಭ್ಯ ವರ್ತನೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ರೈಲ್ವೆ ಪ್ರಕಟಣೆ ಸ್ಪಷ್ಟಪಡಿಸಿದೆ.

ಪ್ರಯಾಣಿಕರೊಂದಿಗೆ ಉತ್ತಮವಾಗಿ ವ್ಯವಹರಿಸುವಂತೆ ಮತ್ತು ವಿನಯದಿಂದಿರಲು ರೈಲ್ವೆ ಸಿಬ್ಬಂದಿಗೆ ವಿಶೇಷ ಕೌನ್ಸೆಲಿಂಗ್ ಸೆಷನ್‌ಗಳನ್ನು ಆಯೋಜಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles