ಕೊಚ್ಚಿ (ಕೇರಳ): ಕೇರಳದಲ್ಲಿ ನಡೆದ ಮುಸ್ಲಿಂ ಯೂತ್ ಲೀಗ್ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರೆಸ್ಸೆಸ್ ಮತ್ತು ಸಂಘ ಪರಿವಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪ್ರಗತಿಪರ ಚಿಂತಕರಾದ ಗೌರಿ ಲಂಕೇಶ್, ಎಂ.ಎಂ. ಕಲ್ಬುರ್ಗಿ ಹಾಗೂ ನರೇಂದ್ರ ದಾಬೋಲ್ಕರ್ ಅವರನ್ನು ಸಂಘ ಪರಿವಾರದವರೇ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿರುವ ಅವರು, ಇಂತಹ ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾದ ಪ್ರತಿಯೊಬ್ಬರನ್ನೂ ಜೈಲಿಗೆ ತಳ್ಳುತ್ತೇವೆ ಎಂದು ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ.
ಆರೆಸ್ಸೆಸ್ನ ವಿಭಜಕ ಐದೇಷ್ಟ್ಯ ಹಾಗೂ ದ್ವೇಷದ ರಾಜಕೀಯದ ವಿರುದ್ಧ ಕಿಡಿಕಾರಿರುವ ಸಚಿವರು, ಸಂವಿಧಾನ ಮತ್ತು ದೇಶದ ಪ್ರಜಾಪ್ರಭುತ್ವ ಮೌಲ್ಯಗಳನ್ನು ಕಾಪಾಡಲು ಸರಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಾವರ್ಕರ್ ಗೆ ವೀರ್ ಬಿರುದು ಕೊಟ್ಟವರು ಯಾರು? ಗಾಂಧೀಜಿಗೆ ರವೀಂದ್ರ ನಾಥ ಠಾಗೂರ್ ಅವರು ಮಹಾತ್ಮ ಎಂಬ ಬಿರುದು ನೀಡಿದರು. ಸುಭಾಶ್ ಚಂದ್ರ ಬೋಸ್ ಅವರಿಗೆ ಅನುಯಾಯಿಗಳು ನೀಡಿದರು. ಬಿಜೆಪಿಯವರಿಗೆ ವೀರ್ ಸಾವರ್ಕರ್ ಗೆ ವೀರ್ ಅಂತ ಯಾಕೆ ಕರೆಯುತ್ತೀರಿ ಎಂದರೆ ಅಂಡಮಾನ್ ಜೈಲಿಗೆ ಹೋಗಿದ್ದರು ಎನ್ನುತ್ತಾರೆ. ಕಾಲಪಾನಿ ಜೈಲಿಗೆ ಸಾವಿರಾರು ಮಂದಿ 33 ವರ್ಷ ಇದ್ದರು. ಆದರೆ ವೀರ್ ಸಾವರ್ಕರ್ ಅವರೂ ಇದ್ದರು ಅಷ್ಟೇ. ಮಹಾತ್ಮಾ ಗಾಂಧೀಜಿ ಹತ್ಯೆ ಕೇಸ್ ನಲ್ಲಿ ವೀರ್ ಸಾವರ್ಕರ್ ಏಳನೇ ಆರೋಪಿ ಎಂದು ಹೇಳಿದರು.
ವಿಚಾರವಾದಿಗಳ ಹತ್ಯೆಗೆ ಆರೆಸ್ಸೆಸ್ ಹೊಣೆ: ಗೌರಿ ಲಂಕೇಶ್, ಎಂ.ಎಂ. ಕಲ್ಬುರ್ಗಿ ಮತ್ತು ದಾಬೋಲ್ಕರ್ ಅವರ ಹತ್ಯೆಗಳ ಹಿಂದೆ ಸಂಘ ಪರಿವಾರದ ಹಸ್ತವಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಕಠಿಣ ಕಾನೂನು ಕ್ರಮದ ಎಚ್ಚರಿಕೆ: ಸಮಾಜದ ಶಾಂತಿ ಕದಡುವ ಹಾಗೂ ವಿಚಾರವಾದಿಗಳನ್ನು ಹತ್ಯೆ ಮಾಡಿದ ಪ್ರತಿಯೊಬ್ಬ ಆರೋಪಿಯನ್ನೂ ಜೈಲಿಗೆ ಕಳುಹಿಸುವುದಾಗಿ ಅವರು ನುಡಿದಿದ್ದಾರೆ.
ಆರೆಸ್ಸೆಸ್ ಸಿದ್ಧಾಂತಕ್ಕೆ ವಿರೋಧ: ಕ್ವಿಟ್ ಇಂಡಿಯಾ ಚಳವಳಿಯಿಂದ ಹೊರಗುಳಿದು, ತ್ರಿವರ್ಣ ಧ್ವಜ ಹಾಗೂ ಸಂವಿಧಾನವನ್ನು ವಿರೋಧಿಸಿದ ಇತಿಹಾಸ ಆರೆಸ್ಸೆಸ್ಗಿದೆ ಎಂದು ಸಮ್ಮೇಳನದಲ್ಲಿ ಯುವಜನತೆಗೆ ನೆನಪಿಸಿದ್ದಾರೆ.
ಕೇರಳದಲ್ಲಿ ನಡೆದ ಯೂತ್ ಲೀಗ್ ಸಮಾವೇಶದಲ್ಲಿ ಪ್ರಿಯಾಂಕ್ ಖರ್ಗೆ ಅವರು ನೀಡಿದ ಈ ಆಕ್ರಮಣಕಾರಿ ಹೇಳಿಕೆಗಳು ಕರ್ನಾಟಕ ಹಾಗೂ ಕೇರಳದ ರಾಜಕೀಯ ವಲಯದಲ್ಲಿ ಭಾರೀ ವಾಕ್ಸಮರಕ್ಕೆ ನಾಂದಿ ಹಾಡಿದೆ.





Leave a comment