ಬೆಂಗಳೂರು: ರಾಜ್ಯದಲ್ಲಿ ಮುಂಬರುವ ವಿಧಾನಮಂಡಲ ಅಧಿವೇಶನಕ್ಕೂ ಮೊದಲೇ ಸಂಪುಟಕ್ಕೆ ಮಹಿಳಾ ಸಚಿವೆಯೊಬ್ಬರನ್ನು ಸೇರ್ಪಡೆಗೊಳಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಮುಖ ಘೋಷಣೆ ಮಾಡಿದ್ದಾರೆ.
ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳೊಂದಿಗೆ ನಡೆಸಿದ ಸಂವಾದದ ಸಮಾರೋಪ ಸಮಾರಂಭದಲ್ಲಿ ಅವರು ಈ ಮಹತ್ವದ ವಿಷಯ ತಿಳಿಸಿದರು.
ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಡ್ಡಿ ವ್ಯವಹಾರ ಅಥವಾ ಚೀಟಿ ವ್ಯವಹಾರಗಳಿಗೆ ಬಳಸದಂತೆ ಮಹಿಳೆಯರಿಗೆ ಕಿವಿಮಾತು ಹೇಳಿದ ಸಿಎಂ, ಮೀಟರ್ ಬಡ್ಡಿ ಹಾಗೂ ಅತಿಯಾದ ಬಡ್ಡಿ ವಸೂಲಿ ಪದ್ಧತಿಯಿಂದ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದು, ಇಂತಹ ಅಕ್ರಮ ವ್ಯವಹಾರಗಳಿಗೆ ಕಡಿವಾಣ ಹಾಕುವುದಾಗಿ ಎಚ್ಚರಿಸಿದರು.
ಸಂಪುಟಕ್ಕೆ ಮಹಿಳಾ ಪ್ರಾತಿನಿಧ್ಯ: ಮುಂಬರುವ ಅಧಿವೇಶನಕ್ಕೂ ಮುನ್ನ ಸಚಿವ ಸಂಪುಟಕ್ಕೆ ಮಹಿಳಾ ಸಚಿವೆಯನ್ನು ನೇಮಕ ಮಾಡಲಾಗುವುದು ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
ಮೀಟರ್ ಬಡ್ಡಿ ಹಾಗೂ ಚೀಟಿ ವ್ಯವಹಾರಕ್ಕೆ ಎಚ್ಚರಿಕೆ: ಗೃಹಲಕ್ಷ್ಮಿ ಹಣವನ್ನು ಶೇ. 10 ರವರೆಗೆ ಬಡ್ಡಿ ವಸೂಲಿ ಮಾಡುವ ಮೀಟರ್ ಬಡ್ಡಿ ಅಥವಾ ಮೋಸ ಹೋಗುವ ಚೀಟಿ ವ್ಯವಹಾರಗಳಲ್ಲಿ ತೊಡಗಿಸಬೇಡಿ ಎಂದು ಮಹಿಳೆಯರಿಗೆ ಸಲಹೆ ನೀಡಿದರು.
ಸ್ವಂತ ಮೊಬೈಲ್ ನಂಬರ್ ಕಡ್ಡಾಯ: ಫಲಾನುಭವಿಗಳ ಪೈಕಿ ಶೇ. 30 ರಿಂದ 35 ರಷ್ಟು ಮಂದಿ ಬೇರೆಯವರ ಫೋನ್ ನಂಬರ್ ನೀಡಿರುವುದು ಗಮನಕ್ಕೆ ಬಂದಿದ್ದು, ಪ್ರತಿಯೊಬ್ಬರೂ ತಮ್ಮದೇ ಸ್ವಂತ ದೂರವಾಣಿ ಸಂಖ್ಯೆ ನೀಡಿ ಸರ್ಕಾರದ ಸಂದೇಶ ಪಡೆಯುವಂತೆ ಮನವಿ ಮಾಡಿದರು.
ಮೂರು ವರ್ಷಗಳನ್ನು ಪೂರೈಸಿರುವ ಗೃಹಲಕ್ಷ್ಮಿ ಯೋಜನೆಯಡಿ ನಿನ್ನೆ ಒಂದೇ ದಿನ ಸುಮಾರು ₹7,000 ಕೋಟಿ ಬಿಡುಗಡೆ ಮಾಡಲಾಗಿದೆ ಎಂದ ಸಿಎಂ, 2028ರಲ್ಲೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.





Leave a comment