Home ದಾವಣಗೆರೆ ಫ್ರೀ ಬಸ್ ಕೊಡುವಂತೆ ಕೇಳಿದ್ದರಾ? ಸರ್ಕಾರಿ ಕಾರಲ್ಲಿ ಓಡಾಡೋ ನಿಮಗೆ ಬಡವರ ಕಷ್ಟ ಏನು ಗೊತ್ತು?: ಬಸ್ ದರ ಏರಿಕೆಗೆ ಚೇತನಾ ಶಿವಕುಮಾರ್ ಆಕ್ರೋಶ
ದಾವಣಗೆರೆನವದೆಹಲಿಬೆಂಗಳೂರು

ಫ್ರೀ ಬಸ್ ಕೊಡುವಂತೆ ಕೇಳಿದ್ದರಾ? ಸರ್ಕಾರಿ ಕಾರಲ್ಲಿ ಓಡಾಡೋ ನಿಮಗೆ ಬಡವರ ಕಷ್ಟ ಏನು ಗೊತ್ತು?: ಬಸ್ ದರ ಏರಿಕೆಗೆ ಚೇತನಾ ಶಿವಕುಮಾರ್ ಆಕ್ರೋಶ

Share
ಚೇತನಾ ಶಿವಕುಮಾರ್
Share

ದಾವಣಗೆರೆ: ಫ್ರೀ ಬಸ್ ಕೊಡಿ ಎಂದು ಯಾರಾದರೂ ಚುನಾವಣೆಗೆ ಮುನ್ನ ನಿಮಗೆ ಕೇಳಿದ್ದರಾ. ಸರ್ಕಾರಿ ಕಾರಲ್ಲಿ ಓಡಾಡೋ ನಿಮಗೆ ಬಡವರ ಕಷ್ಟ ಏನು ಗೊತ್ತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಉಚಿತ ಬಸ್ ಪ್ರಯಾಣ ಶಕ್ತಿ ಯೋಜನೆ ಹಾಗೂ ಕೆಎಸ್‌ಆರ್‌ಟಿಸಿ ಸಾರಿಗೆ ಸಂಸ್ಥೆಯ ಹಣಕಾಸಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬಸ್ ದರ ಏರಿಕೆ ಮಾಡಿರುವುದಾಗಿ ಹೇಳಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ದಾವಣಗೆರೆ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಚೇತನಾ ಶಿವಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚುನಾವಣೆಯ ಸಮಯದಲ್ಲಿ ಉಚಿತ ಯೋಜನೆಗಳ ಭರವಸೆ ನೀಡಿ ಅಧಿಕಾರ ಗಿಟ್ಟಿಸಿಕೊಂಡ ಕಾಂಗ್ರೆಸ್, ಈಗ ಡೀಸೆಲ್‌ಗೆ ಹಣವಿಲ್ಲ, ನೌಕರರಿಗೆ ಸಂಬಳ ನೀಡಲು ಹಣವಿಲ್ಲ ಎಂದು ಕಥೆ ಹೇಳುತ್ತಿದೆ ಎಂದು ಅವರು ಸರ್ಕಾರದ ವಿರುದ್ಧ
ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ನಡೆ ಮತ್ತು ಸರ್ಕಾರದ ಕಾರ್ಯವೈಖರಿಯನ್ನು ಪ್ರಶ್ನಿಸಿರುವ ಅವರು, ಸರ್ಕಾರಿ ವೆಚ್ಚದ ಐಷಾರಾಮಿ ಇನೋವಾ ಕಾರುಗಳಲ್ಲಿ ಸಂಚರಿಸುವ ನಾಯಕರಿಗೆ ಬಡವರ
ಮತ್ತು ಸಾಧಾರಣ ಪ್ರಯಾಣಿಕರ ಕಷ್ಟದ ಅರಿವು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಜನರು ಕೇಳದೇ ಇದ್ದರೂ ಅಧಿಕಾರ ಹಿಡಿಯಲು ‘ಫ್ರೀ’ ಭರವಸೆಗಳನ್ನು ನೀಡಿ, ಈಗ ನಿರ್ವಹಣೆ ಸಾಧ್ಯವಾಗದೆ ಸಾರಿಗೆ ನೌಕರರನ್ನು ಮತ್ತು ಸಾರ್ವಜನಿಕರನ್ನು ಸಂಕಷ್ಟಕ್ಕೆ ಸಿಲುಕಿಸಲಾಗಿದೆ. ಹಾಲು, ಮೊಸರು ದರ ಏರಿಸಿ ಮೂರ್ನಾಲ್ಕು ದಿನಗಳು ಕಳೆದಿಲ್ಲ.
ಆಗಲೇ ಬಸ್ ದರ ಏರಿಕೆ ಮಾಡಿ ರಾಜ್ಯದ ಜನರ ಮೇಲೆ ಗದಾಪ್ರಹಾರ ನಡೆಸುತ್ತಿರುವ ಸಿಎಂ ಡಿ. ಕೆ. ಶಿವಕುಮಾರ್ ಅವರಿಗೆ ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ ಚುನಾವಣೆಗೆ ಹೋಗಲಿ ಎಂದು ಸವಾಲು ಹಾಕಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles