SUDDIKSHANA KANNADA NEWS/ DAVANAGERE/ DATE:27-09-2023
ಕಳೆದ ಎರಡು ದಿನಗಳಿಂದ ಭಾರತೀಯ ಷೇರು ಪೇಟೆ (Stock market)ಯಲ್ಲಿ ಇದ್ದ ನಿರುತ್ಸಹಕ್ಕೆ ಇಂದು ಬ್ರೇಕ್ ಬಿದ್ದಿದೆ. ಮಾರುಕಟ್ಟೆ ಆರಂಭದಲ್ಲಿ ಅಲ್ಪ ಮಟ್ಟದ ಇಳಿಕೆ ಕಂಡು ನಂತರ ಚೇತರಿಕೆಯ ಹಾದಿಯಲ್ಲಿ ಸಾಗಿತು.
ಈ ಸುದ್ದಿಯನ್ನೂ ಓದಿ:
ರಿಯಲ್ ಎಸ್ಟೇಟ್ (Real estate)ಉದ್ಯಮದತ್ತ ಯುವ ಹೂಡಿಕೆದಾರರು ಹೆಚ್ಚು ಆಸಕ್ತಿ ಹೊಂದುತ್ತಿರುವುದ್ಯಾಕೆ…? ಸ್ವಂತ ಮನೆ ಹೊಂದುವ ಕನಸು ಹೊಂದಿರುವವರೇ ಹೆಚ್ಚು..!
ದಿನದ ಅಂತ್ಯಕ್ಕೆ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್ಎಸ್ಇ) ನಿಫ್ಟಿ +51.75 (0.26%) ಅಂಕ ಏರಿಕೆ ಕಂಡು 19,716.45 ರಲ್ಲಿ ಮತ್ತು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ +173.22 (0.26%) ಅಂಕ ಏರಿಕೆ ಕಂಡು 66,118.69 ರಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದವು.
ಏರಿಕೆ ಕಂಡ ಷೇರುಗಳು:
ಇಂದು ನಿಫ್ಟಿಯಲ್ಲಿ LT,COALINDIA,ITC,CIPLA,LTIM ಷೇರುಗಳು ಜಿಗಿತ ಕಂಡವು.
ಇಳಿಕೆ ಕಂಡ ಷೇರುಗಳು:
ನಿಫ್ಟಿಯಲ್ಲಿ TITAN,GRASIM,HEROMOTOCO,SBIN,ICICIBANK ಷೇರುಗಳು ನಕಾರಾತ್ಮಕ ವಹಿವಾಟು ನಡೆಸಿದವು.
ಕರೆನ್ಸಿ ವಹಿವಾಟು:
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 83.24 ಕ್ಕೆ ತನ್ನ ವಹಿವಾಟು ಕೊನೆಗೊಳಿಸಿದೆ.
FII ಮತ್ತು DII ನಗದು ವಹಿವಾಟು ವಿವರ:
ಇಂದಿನ ಮಾರುಕಟ್ಟೆಯ ಅಂತ್ಯದಲ್ಲಿ ‘ವಿದೇಶಿ ಸಾಂಸ್ಥಿಕ ಹೂಡಿಕೆದಾರರು” (FII) : ರೂ. -354.35 ಕೋಟಿ ನಿವ್ವಳ ಮಾರಾಟ ಮಾಡಿದರೆ , ‘ದೇಶೀಯ ಸಾಂಸ್ಥಿಕ ಹೂಡಿಕೆದಾರರು’ (DII) ರೂ.+386.28 ಕೋಟಿ ನಿವ್ವಳ ಖರೀದಿ ಮಾಡಿದ್ದಾರೆ.