SUDDIKSHANA KANNADA NEWS/ DAVANAGERE/ DATE:27-09-2023
ದಾವಣಗೆರೆ (Davanagere): ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಸೆ. 29ರ ಕರ್ನಾಟಕ ಬಂದ್ ಬೆಂಬಲಿಸುವುದಿಲ್ಲ. ದಾವಣಗೆರೆಯಲ್ಲಿ ನಡೆಯಲಿರುವ ಬಂದ್ ಗೆ ಬೆಂಬಲ ಇಲ್ಲ. ಆದ್ರೆ, ಪ್ರತಿಭಟನೆ ನಡೆಸುತ್ತೇವೆ ಎಂದು ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ವಿ. ಅವಿನಾಶ್ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:
ಸೆ. 29ಕ್ಕೆ ದಾವಣಗೆರೆ (Davanagere) ಬಂದ್ ಹಿನ್ನೆಲೆ: ದಾವಣಗೆರೆ ವಿವಿ ಪರೀಕ್ಷೆ ಅ.1ಕ್ಕೆ ಮುಂದೂಡಿಕೆ
ಕಾವೇರಿ ನದಿ ನೀರು ತಮಿಳುನಾಡಿಗೆ ಹರಿಸಿರುವುದರ ಬಗ್ಗೆ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಉದ್ಬವಿಸಿರುವ ಕಾವೇರಿ ವಿವಾದ ಹಾಗೂ ಸುಪ್ರೀಂಕೋರ್ಟ್ ಆದೇಶದನ್ವಯ
ತಮಿಳುನಾಡಿಗೆ ಪ್ರತಿ ನಿತ್ಯ ನದಿನೀರು ಹರಿಸಿರುವ ಸಂಬಂಧ ಸಂಘಟನೆಯ ಕೇಂದ್ರ ಕಚೇರಿಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಚರ್ಚೆ ನಡೆಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸುಮಾರು 245 ವರ್ಷಗಳ ಇತಿಹಾಸವಿರುವ ಬ್ರಿಟಿಷರ ಕಾಲದ ಮದ್ರಾಸ್ ಪ್ರಾಂತ್ಯದ ಈ ಹಿಂದೆ ರಚಿಸಿರುವ ಕಾವೇರಿ ನದಿನೀರು ಹಂಚಿಕೆ ಪ್ರಾಧಿಕಾರ ಸಮಿತಿಯನ್ನು ಮೊದಲು ವಿಸರ್ಜಿಸಿ ಪುನರ್ ನವೀಕರಣಗೊಳಿಸಿ ಹೊಸ ಸದಸ್ಯರ ನೇಮಕ
ಮಾಡಲು ಹಕ್ಕೊತ್ತಾಯಿಸುತ್ತಾ, ವಾಸ್ತವ ಸ್ಥಿತಿಯನ್ನು ಸರ್ವೋಚ್ಚ ನ್ಯಾಯಲಯಕ್ಕೆ ಮನವರಿಕೆ ಮಾಡುವಂತ ಕಾನೂನು ತಜ್ಞರನ್ನು ನೇಮಿಸಬೇಕು. ಇಲ್ಲಿ ಮಲತಾಯಿ ಧೋರಣೆ ಮಾಡಿ ಕರ್ನಾಟಕ ಮತ್ತು ತಮಿಳುನಾಡು ಎರಡು ರಾಜ್ಯಗಳಲ್ಲಿ
ರೈತರು, ಪ್ರಗತಿಪರರು, ಸಂಘಟನೆ ಹೋರಾಟಗಾರರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಈ ಈ ಸಮಯದಲ್ಲಿ ಎರಡು ರಾಜ್ಯಗಳಲ್ಲಿ ವೈಷಮ್ಯ ಬಿತ್ತುವಂಥ ಪರಿಸ್ಥಿತಿಗೆ ಕೇಂದ್ರ ಸರ್ಕಾರ ಕಾರಣವಾಗಿದೆ ಎಂದಿದ್ದಾರೆ.
ಸೆ. 29ರ ಕರ್ನಾಟಕ ರಾಜ್ಯ ಬಂದ್ಗೆ ನಮ್ಮ ಸಂಘಟನೆ ಬೆಂಬಲ ವ್ಯಕ್ತಪಡಿಸದೇ ಅದೇ ದಿನ ಬೆಳಗ್ಗೆ ದಾವಣಗೆರೆ ಹೃದಯ ಭಾಗದಲ್ಲಿರುವ ಜಯದೆವ ವೃತ್ತದಿಂದ ಎ.ಸಿ.ಕಛೇರಿಯವರೆಗೆ ಪಾದಯಾತ್ರೆ ಮೂಲಕ ಹೋಗಿ ಈ ಕಾವೇರಿ ವಿವಾದಕ್ಕೆ
ಕರ್ನಾಟಕದಿಂದ ಆಯ್ಕೆಯಾಗಿರುವ 28 ಸಂಸದರು ಪ್ರಧಾನ ಮಂತ್ರಿಯವರಿಗೆ ಕರ್ನಾಟಕ ರಾಜ್ಯದ ಸದ್ಯದ ಬರ ಪರಿಸ್ಥಿತಿಯನ್ನು ಮನವರಿಕೆ ಮಾಡಿಸಿ. ಮಧ್ಯಸ್ಥಿಕೆವಹಿಸಿ ವಿವಾದವನ್ನು ಬಗೆಹರಿಸಬೇಕು ಎಂದು ಹೇಳಿ ಮನವಿ ಪತ್ರ ನೀಡಲಾಗುವುದು ಎಂದು ಹೇಳಿದ್ದಾರೆ.
ದಾವನಗೆರೆ ಜಿಲ್ಲೆಯಲ್ಲಿ ಬರಗಾಲ ಎದುರಾಗಿದ್ದು, ಎಲ್ಲಾ ತಾಲ್ಲೂಕುಗಳನ್ನು ರಾಜ್ಯಸರ್ಕಾರ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿರುವ ಈ ಸಂದರ್ಭದಲ್ಲಿ ನಮ್ಮ ದಾವಣಗೆರೆ ಜಿಲ್ಲೆಯು ಕೂಲಿ ಕಾರ್ಮಿಕರು, ದೀನದಲಿತರು, ಆಟೋರೀಕ್ಷಾ ಚಾಲಕರು, ಹಮಾಲರು, ಖೇಣಿದಾರರು, ತರಕಾರಿ ವ್ಯಾಪರಸ್ಥರು, ಬೀದಿಬದಿಯ ಟೀ, ತಿಂಡಿ ವ್ಯಾಪಾರಿಗಳು, ಹೂವು, ಹಣ್ಣು, ಸೊಪ್ಪಿನ ವ್ಯಾಪಾರಿಗಳು ಹಾಗೂ ಇನ್ನಿತರೆ ವ್ಯಾಪಾರಸ್ಥರು ಸಂಕಷ್ಟಕ್ಕೆ ಒಳಗಾಗುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅವಿನಾಶ್ ಮತ್ತು ವೇದಿಕೆಯ ಎಲ್ಲಾ ಪದಾಧಿಕಾರಿಗಳು ತೀರ್ಮಾನ ತೆಗೆದುಕೊಂಡಿದ್ದಾರೆ.