Home ದಾವಣಗೆರೆ ದಾವಣಗೆರೆ ತಾಲ್ಲೂಕಿನಲ್ಲಿ ಬಂಜಾರ ಹಾಗೂ ಗ್ರಾಮೀಣ ಮಹಿಳೆಯರಿಗೆ ಕುಕ್ಕುಟ ಮಹಾಮಂಡಳದಿಂದ ಉಚಿತ ಕೋಳಿಮರಿ ಭಾಗ್ಯ!
ದಾವಣಗೆರೆಬೆಂಗಳೂರುವಾಣಿಜ್ಯ

ದಾವಣಗೆರೆ ತಾಲ್ಲೂಕಿನಲ್ಲಿ ಬಂಜಾರ ಹಾಗೂ ಗ್ರಾಮೀಣ ಮಹಿಳೆಯರಿಗೆ ಕುಕ್ಕುಟ ಮಹಾಮಂಡಳದಿಂದ ಉಚಿತ ಕೋಳಿಮರಿ ಭಾಗ್ಯ!

Share
ಕೋಳಿ
Share

ದಾವಣಗೆರೆ: ಕರ್ನಾಟಕ ಕುಕ್ಕುಟ ಮಹಾಮಂಡಳ ನಿಯಮಿತ, ಬೆಂಗಳೂರು ಇವರ ವತಿಯಿಂದ 2026-27ನೇ ಸಾಲಿಗೆ ದಾವಣಗೆರೆ ತಾಲ್ಲೂಕಿನ ಗ್ರಾಮೀಣ ಹಾಗೂ ತಾಂಡಾ (ಬಂಜಾರ) ಮಹಿಳೆಯರಿಗೆ ಉಚಿತವಾಗಿ ೫ ವಾರಗಳ ವಯಸ್ಸಿನ ದೇಶಿ ಕೋಳಿಮರಿಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಅರ್ಹ ಮಹಿಳೆಯರು ನಿಗದಿತ ದಿನಾಂಕದೊಳಗೆ ಸಂಬಂಧಪಟ್ಟ ಪಶು ವೈದ್ಯ ಸಂಸ್ಥೆಗಳಲ್ಲಿ ಅರ್ಜಿ ಪಡೆದು ಸಲ್ಲಿಸಬಹುದಾಗಿದೆ.

ಯೋಜನೆಯನ್ವಯ ದಾವಣಗೆರೆ ತಾಲ್ಲೂಕಿನ 99 ಗ್ರಾಮೀಣ ಮಹಿಳೆಯರಿಗೆ ಮತ್ತು93 ಬಂಜಾರ ಮಹಿಳೆಯರಿಗೆ ತಲಾ ೨೦ ರಂತೆ ಉಚಿತ ದೇಶಿ ಕೋಳಿಮರಿಗಳನ್ನು ವಿತರಿಸಲಾಗುತ್ತದೆ. ಫಲಾನುಭವಿಗಳನ್ನು ಮೀಸಲಾತಿ ನಿಯಮಾನುಸಾರ ಆಯ್ಕೆ ಮಾಡಲಾಗುವುದು ಎಂದು ದಾವಣಗೆರೆ ಪಶು ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಫಲಾನುಭವಿಗಳ ವಿವರ: ದಾವಣಗೆರೆ ತಾಲ್ಲೂಕಿನ 99 ಗ್ರಾಮೀಣ ಮಹಿಳೆಯರು ಹಾಗೂ 93 ಬಂಜಾರ ಮಹಿಳೆಯರಿಗೆ ತಲಾ 20 ರಂತೆ 5 ವಾರಗಳ ವಯಸ್ಸಿನ ದೇಶಿ ಕೋಳಿಮರಿಗಳನ್ನು ಉಚಿತವಾಗಿ ನೀಡಲಾಗುತ್ತದೆ.

ಮೀಸಲಾತಿ ವಿವರ: ಸಾಮಾನ್ಯ ವರ್ಗಕ್ಕೆ ಶೇ. 44, ಹಿಂದುಳಿದ ವರ್ಗಕ್ಕೆ ಶೇ. 32, ಪರಿಶಿಷ್ಟ ಜಾೃತಿಗೆ ಶೇ. 17 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ. 7ರಂತೆ ಮೀಸಲಾತಿ ಆಧಾರದ ಮೇಲೆ ಫಲಾನುಭವಿಗಳ ಆಯ್ಕೆ ನಡೆಯಲಿದೆ.

ಅರ್ಜಿ ಸಲ್ಲಿಕೆ ಕೊನೆಯ ದಿನ: ಆಸಕ್ತರು ನವೆಂಬರ್ 15ರೊಳಗೆ ದಾವಣಗೆರೆ ತಾಲ್ಲೂಕಿನ ಪಶು ವೈದ್ಯ ಸಂಸ್ಥೆಗಳಿಂದ ಅರ್ಜಿಗಳನ್ನು ಪಡೆದು ಭರ್ತಿ ಮಾಡಿ ಸಲ್ಲಿಸಬೇಕು.

ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಸ್ವಾವಲಂಬನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಮಹತ್ವದ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.
Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles