SUDDIKSHANA KANNADA NEWS/ DAVANAGERE/ DATE:27-09-2023
ದಾವಣಗೆರೆ (Davanagere): ಕಾವೇರಿ ನದಿ ನೀರು ವಿವಾದದ ಹಿನ್ನೆಲೆಯಲ್ಲಿ ಕರೆ ನೀಡಲಾಗಿರುವ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಸೆ. 29ರಂದು ನಡೆಯಬೇಕಿದ್ದ ದಾವಣಗೆರೆ ವಿಶ್ವವಿದ್ಯಾನಿಲಯ ವ್ಯಾಪ್ತಿಯ ಎಲ್ಲ ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಈ ಸುದ್ದಿಯನ್ನೂ ಓದಿ:
Davanagere: ಉಚಿತ ಲ್ಯಾಪ್‍ಟಾಪ್ ಪಡೆಯಲು ಅರ್ಜಿ ಆಹ್ವಾನ
ಈ ಪರೀಕ್ಷೆಗಳು ಅಕ್ಟೋಬರ್ 1 ರಂದು ನಡೆಸಲಾಗುವುದು ಎಂದು ದಾವಣಗೆರೆ ವಿವಿಯ ಪರೀಕ್ಷಾಂಗ ಕುಲಸಚಿವ ಡಾ.ಕೆ.ಶಿವಶಂಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎನ್ ಎಂ ಎಂ ಎಸ್ ಪರೀಕ್ಷೆಗೆ ಅರ್ಜಿ ಆಹ್ವಾನ:
ದಾವಣಗೆರೆ(Davanagere)ಯಲ್ಲಿ ಎನ್‍ಎಂಎಂಎಸ್ ಪರೀಕ್ಷೆಯನ್ನು ಡಿ.17 ರಂದು ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು ವತಿಯಿಂದ ನಡೆಸಲು ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಎನ್‍ಎಂಎಂಎಸ್ ಪರೀಕ್ಷೆಯನ್ನು ಸರ್ಕಾರಿ, ಸ್ಥಳೀಯ ಸಂಸ್ಥೆಗಳ ಶಾಲೆಗಳು, ಅನುದಾನಿತ, ಶಾಲೆಗಳಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು https://kseab.karnataka.gov.in
ಈ ವೆಬ್ ಸೈಟ್‍ನಲ್ಲಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ಅ.4 ಆಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿ, ಹಾಗೂ ಜಿಲ್ಲಾ ಎನ್‍ಎಂಎಂಎಸ್ ನೋಡಲ್ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದಲ್ಲಿ ಎನ್‍ಎಂಎಂಎಸ್ ಜಿಲ್ಲಾ ನೋಡಲ್ ಅಧಿಕಾರಿ ಮಂಜುನಾಥಚಾರಿ ಬಿ., ಮೊ.ಸಂ:-8660520686 ಸಂಪರ್ಕಿಸಲು ಡಯಟ್ ಪ್ರಾಚಾರ್ಯರು ಹಾಗೂ ಪದನಿಮಿತ್ತ ಉಪನಿರ್ದೇಶಕರು ಗೀತಾ.ಎಸ್ ತಿಳಿಸಿದ್ದಾರೆ.
ವಿಶೇಷಚೇತನರಿಗೆ ಉಚಿತ ಕೃತಕ ಅಂಗ ಜೋಡಣೆ ಶಿಬಿರ:
ದಾವಣಗೆರೆ (Davanagere)ರೋಟರಿ ಕ್ಲಬ್ ಆಪ್ ಬೆಂಗಳೂರು ಜಂಕ್ಷನ್ ಸಮಿತಿ ವತಿಯಿಂದ ವಿಶೇಷ ಚೇತನರಿಗೆ ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 2 ರವರೆಗೆ ಬೆಂಗಳೂರಿನ ಶ್ರೀ ಚಂದ್ರಶೇಖರ ಭಾರತಿ ಕಲ್ಯಾಣ ಮಂಟಪ, 29/1, ಪಂಪ ಮಹಾಕವಿ ರಸ್ತೆ, ಶಂಕರಪುರಂ ಇಲ್ಲಿ ಉಚಿತ ಮೆಗಾ ಕೃತಕ ಅಂಗ ಜೋಡಣೆ ಶಿಬಿರವನ್ನು ಏರ್ಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ರೇಖಾ-9945486688, ಲಕ್ಷ್ಮಿ-6363234044, ಪವಿತ್ರಾ-9538454596, ಶಂಕರ್ ಲಾಲ್ ಅಗರ್ವಾಲ್ (ಅಧ್ಯಕ್ಷರು) – 9342069904, ಮುರಳಿ ಅಗರ್ವಾಲ್ (ಸಿಎಸ್ ನಿರ್ದೇಶಕರು)-9611108153, ಜಿತೇಂದ್ರ ಶೆಟ್ಟಿ (ಕಾರ್ಯದರ್ಶಿ)- 9845066469, ಸುರೇಶಅರಕೆರೆ (ಅಧ್ಯಕ್ಷರು)-9845283458 ಗೆ ಸಂಪರ್ಕಿಸಬಹುದೆಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಡಾ. ಕೆ.ಕೆ ಪ್ರಕಾಶ್ ತಿಳಿಸಿದ್ದಾರೆ.