SUDDIKSHANA KANNADA NEWS/ DAVANAGERE/ DATE-12-06-2025
ಬೆಂಗಳೂರು: “Brutal Murder ‘ಕೈ’ಸರ್ಕಾರ”. ಇದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿರುವ ಪರಿ.
ವಿಧಾನಸೌಧದ ಮುಂಭಾಗದ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ RCB ಅಭಿಮಾನಿಗಳ ಮರ್ಡರ್. ಕಾಂಗ್ರೆಸ್ ಬೆಂಬಲಿತ ಮತಾಂಧರಿಂದ ಹಿಂದೂ ಕಾರ್ಯಕರ್ತರ ಮರ್ಡರ್. ರಾಜ್ಯದಲ್ಲಿ ಕಲುಷಿತ ನೀರು ಪೂರೈಸಿ ಅಮಾಯಕರ ಮರ್ಡರ್. ಸರ್ಕಾರಿ ಆಸ್ಪತ್ರೇಲಿ ಗರ್ಭಿಣಿಯರು, ಬಾಣಂತಿಯರು, ನವಜಾತ ಶಿಶುಗಳ ಮರ್ಡರ್. ಅಧಿಕಾರದ ಆರಂಭದ ದಿನಗಳಲ್ಲೇ ಕಾಂಗ್ರೆಸ್ನಿಂದ ರೈತರ ಮರ್ಡರ್. ಕಾಂಗ್ರೆಸ್ ಕಮಿಷನ್, ಕಲೆಕ್ಷನ್ ದಂಧಗೆ ಗುತ್ತಿಗೆದಾರರು, ಅಧಿಕಾರಿಗಳ ಮರ್ಡರ್ ಎಂದು ಬಿಜೆಪಿ ರೋಷವೇಷ ವ್ಯಕ್ತಪಡಿಸಿದೆ.

ರಾಜಕೀಯ ಲಾಭಕ್ಕಾಗಿ ಸಿದ್ದರಾಮಯ್ಯ ಅವರು ಎಸಿ ರೂಮಿನಲ್ಲಿ ತಯಾರಿಸಿದ ಜಾತಿಗಣತಿ ವರದಿಯನ್ನು ಡಿ.ಕೆ.ಶಿವಕುಮಾರ್ ವಿರೋಧದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕಸದ ಬುಟ್ಟಿಗೆ ಎಸೆದಿದೆ ಎಂದು ವ್ಯಂಗ್ಯವಾಡಿದೆ.
ಈ ಮೂಲಕ 10 ವರ್ಷಗಳ ಹಿಂದಿನ ದತ್ತಾಂಶದ ಮೂಲಕ ಸಮಾಜದಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸಿದ್ದ ಸಿದ್ದರಾಮಯ್ಯ ಅವರಿಗೆ ಮುಖಭಂಗವಾಗಿದೆ. ಅವೈಜ್ಞಾನಿಕ ದತ್ತಾಂಶವೆಂದು ಸ್ವತಃ ಡಿ. ಕೆ. ಶಿವಕುಮಾರ್ ಅವರೇ ಈಗ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ.
ಕೇಂದ್ರ ಸರ್ಕಾರವೇ ಮುಂದಿನ ದಿನಗಳಲ್ಲಿ ಜನಗಣತಿ ಜೊತೆಗೆ ಜಾತಿ ಗಣತಿ ನಡೆಸುವುದಕ್ಕೆ ತೀರ್ಮಾನ ಮಾಡಿರುವುದರಿಂದ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ಮರು ಸಮೀಕ್ಷೆಗೆ ದುಂದು ವೆಚ್ಚ ಮಾಡುವ ಅಗತ್ಯವಿಲ್ಲ. ಸಿಎಂ ಹಾಗೂ ಡಿಸಿಎಂ ಅವರ ಒಳಜಗಳಕ್ಕೆ ಜನರ ಕೋಟ್ಯಂತರ ತೆರಿಗೆ ಹಣ ಪೋಲು ಮಾಡದಿರಿ ಎಂದು ಸಲಹೆ ನೀಡಿದೆ.