ಮುಂಬೈ: ಬಾಲಿವುಡ್‌ನ ಸೌಂದರ್ಯದ ರಾಣಿ, ನಟಿ ಐಶ್ವರ್ಯ ರೈ ಬಚ್ಚನ್ ತಮ್ಮ 53ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅವರ ಸೌಂದರ್ಯ ಮತ್ತು ಫಿಟ್‌ನೆಸ್‌ನ ರಹಸ್ಯದ ಬಗ್ಗೆ ಅಭಿಮಾನಿಗಳಲ್ಲಿ ಸದಾ ಕುತೂಹಲವಿರುತ್ತದೆ. ಕಠಿಣ ಆಹಾರ ಪಥ್ಯಗಳನ್ನು ಅನುಸರಿಸುವ ಬದಲು ಸರಳವಾದ ಮನೆಯೂಟಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವ ಐಶ್ವರ್ಯ ರೈ ಅವರ ದಿನಚರಿಯ ಆಹಾರ ಪದ್ಧತಿ ಬಹಳ ಸರಳವಾಗಿದೆ ಎಂದು ವರದಿಯಾಗಿದೆ.
ಬೇಳೆಕಾಳುಗಳು, ಚಪಾತಿ, ಬೇಯಿಸಿದ ತರಕಾರಿಗಳು ಮತ್ತು ತಾಜಾ ಹಣ್ಣುಗಳನ್ನು ತಮ್ಮ ದೈನಂದಿನ ಆಹಾರದಲ್ಲಿ ಒಳಗೊಳ್ಳುವ ಅವರು, ಜಂಕ್ ಫುಡ್ ಹಾಗೂ ಎಣ್ಣೆ ಪದಾರ್ಥಗಳಿಂದ ದೂರವಿರುತ್ತಾರೆ.
ದಿನದ ಆರಂಭವನ್ನು ಬೆಚ್ಚಗಿನ ನೀರಿಗೆ ಜೇನುತುಪ್ಪ ಮತ್ತು ನಿಂಬೆರಸ ಬೆರೆಸಿ ಕುಡಿಯುವುದರೊಂದಿಗೆ ಆರಂಭಿಸುವ ಐಶ್ವರ್ಯ, ಉಪಾಹಾರವನ್ನು ಎಂದಿಗೂ ಮರೆಯುವುದಿಲ್ಲ.
ಬೆಳಗಿನ ಉಪಾಹಾರದಲ್ಲಿ ಬ್ರೌನ್ ಬ್ರೆಡ್ ಟೋಸ್ಟ್ ಮತ್ತು ಓಟ್ಸ್ ಸೇವಿಸುವ ಅವರು, ಮಧ್ಯಾಹ್ನದ ಊಟಕ್ಕೆ ಸರಳವಾಗಿ ಬೇಳೆ, ಚಪಾತಿ ಮತ್ತು ಬೇಯಿಸಿದ ತರಕಾರಿಗಳನ್ನು ಇಷ್ಟಪಡುತ್ತಾರೆ. ರಾತ್ರಿ ವೇಳೆ ಹಗುರವಾದ ಗ್ರಿಲ್ಡ್ ಫಿಶ್ (Fish) ಮತ್ತು ಬ್ರೌನ್ ರೈಸ್ ಸೇವಿಸುವುದಾಗಿ ವರದಿಯಾಗಿದೆ. ಇದರೊಂದಿಗೆ ಪ್ರತಿದಿನ ಬೆಳಿಗ್ಗೆ ನಡಿಗೆ, ಜಾಗಿಂಗ್ ಹಾಗೂ ಸುಮಾರು 45 ನಿಮಿಷಗಳ ಕಾಲ ಯೋಗ ಮತ್ತು ಪವರ್ ಯೋಗ ಮಾಡುವ ಮೂಲಕ ತಮ್ಮ ದೇಹದ ಫಿಟ್‌ನೆಸ್ ಕಾಪಾಡಿಕೊಳ್ಳುತ್ತಾರೆ.
ದಿನದ ಆರಂಭ: ಪ್ರತಿದಿನ ಬೆಳಿಗ್ಗೆ ಒಂದು ಲೋಟ ಬೆಚ್ಚಗಿನ ನೀರಿಗೆ ಜೇನುತುಪ್ಪ ಮತ್ತು ನಿಂಬೆರಸ ಬೆರೆಸಿ ಕುಡಿಯುವುದರೊಂದಿಗೆ ನಟಿ ತಮ್ಮ ದಿನವನ್ನು ಆರಂಭಿಸುತ್ತಾರೆ.
ಆಹಾರ ಶೈಲಿ: ಕಠಿಣ ಡಯಟ್ ಬದಲಿಗೆ ಸರಳವಾದ ಬೇಳೆಕಾಳು, ಚಪಾತಿ, ತರಕಾರಿಗಳು ಹಾಗೂ ಹಣ್ಣುಗಳನ್ನು ಮಿತ ಪ್ರಮಾಣದಲ್ಲಿ ನಿಯಮಿತವಾಗಿ ಸೇವಿಸುತ್ತಾರೆ.
ರಾತ್ರಿಯ ಊಟ: ರಾತ್ರಿಯ ಭೋಜನದಲ್ಲಿ ಸಾಮಾನ್ಯವಾಗಿ ಗ್ರಿಲ್ಡ್ ಮೀನು ಮತ್ತು ಬ್ರೌನ್ ರೈಸ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಫಿಟ್‌ನೆಸ್ ರಹಸ್ಯ: ಜಿಮ್‌ನಲ್ಲಿ ತೀವ್ರ ವರ್ಕೌಟ್ ಮಾಡುವ ಬದಲು ಪ್ರತಿದಿನ ಯೋಗ, ಮಾರ್ನಿಂಗ್ ವಾಕ್ ಮತ್ತು ಜಾಗಿಂಗ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.





Leave a comment