SUDDIKSHANA KANNADA NEWS/ DAVANAGERE/ DATE:25-09-2023
– ಗಿರೀಶ್ ಕೆ ಎಂ
ಸತತ ನಾಲ್ಕು ದಿನಗಳಿಂದ ಇಳಿಕೆಯ ಹಾದಿಯಲ್ಲಿದ್ದ ಭಾರತೀಯ ಷೇರು ಮಾರುಕಟ್ಟೆ (Stock market) ಇಂದು ಚೇತರಿಕೆ ಕಂಡು ಅಲ್ಪ ಮೊತ್ತದ ಏರಿಕೆ ದಾಖಲಿಸಿದೆ.
ಈ ಸುದ್ದಿಯನ್ನೂ ಓದಿ:
ಅಡಿಕೆ (Areca nut) ಬೆಳೆಗಾರರಿಗೆ ಕಹಿ ಸುದ್ದಿ, ಮತ್ತೆ ಕುಸಿದ ಅಡಿಕೆ ಧಾರಣೆ: ಮತ್ತೆ ಎಷ್ಟು ಕಡಿಮೆ ಆಯ್ತು ಗೊತ್ತಾ…?
ವಲಯವಾರು ಸೂಚ್ಯಂಕಗಳ ಪೈಕಿ ನಿಫ್ಟಿ ಐಟಿ (ಶೇ. 0.78 ಇಳಿಕೆ) ಮತ್ತು ನಿಫ್ಟಿ ಮೀಡಿಯಾ (ಶೇ. 0.73 ಇಳಿಕೆ) ನಿಫ್ಟಿ ಫಾರ್ಮಾ (ಶೇ. 0.34), ಆಯಿಲ್ ಆ್ಯಂಡ್ ಗ್ಯಾಸ್ (ಶೇ. 0.25), ಮೆಟಲ್ (ಶೇ. 0.11) ಮತ್ತು ಆಟೋ (ಶೇ. 0.08 ಇಳಿಕೆ) ಷೇರುಗಳು ಅಲ್ಪ ಪ್ರಮಾಣದ ಇಳಿಕೆಯೊಂದಿಗೆ ಕೊನೆಗೊಂಡಿತು.
ಲಾಭ ಗಳಿಸಿದವರಲ್ಲಿ ನಿಫ್ಟಿ ರಿಯಾಲ್ಟಿ ಶೇ.1.52ರಷ್ಟು ಜಿಗಿದಿದೆ. ನಿಫ್ಟಿ ಬ್ಯಾಂಕ್ ಶೇ.0.35ರಷ್ಟು ಏರಿಕೆ ಕಂಡರೆ, ನಿಫ್ಟಿ ಪ್ರೈವೇಟ್ ಬ್ಯಾಂಕ್ ಸೂಚ್ಯಂಕ ಶೇ.0.45ರಷ್ಟು ಮತ್ತು ನಿಫ್ಟಿ ಪಿಎಸ್ ಯು ಬ್ಯಾಂಕ್ ಶೇ.0.16ರಷ್ಟು ಏರಿಕೆ ಕಂಡಿವೆ.
ದಿನದ ಅಂತ್ಯಕ್ಕೆ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ +0.30 (0.00%) ಅಂಕ ಏರಿಕೆ ಕಂಡು 19,674.55 ರಲ್ಲಿ ಮತ್ತು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 14.54 (0.02%) ಅಂಕ ಏರಿಕೆ ಕಂಡು 66,023.69 ರಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದವು.
ಏರಿಕೆ ಕಂಡ ಷೇರುಗಳು:
ಇಂದು ನಿಟ್ಟಿಯಲ್ಲಿ BAJFINANCE,TATACONSUM,BAJAJFINSV, APOLLOHOSP, COALINDIA ಷೇರುಗಳು ಜಿಗಿತ ಕಂಡವು.
ಇಳಿಕೆ ಕಂಡ ಷೇರುಗಳು:
ನಿಫ್ಟಿಯಲ್ಲಿ HINDALCO, SBILIFE, HEROMOTOCO, INFY, M&M ಷೇರುಗಳು ನಕಾರಾತ್ಮಕ ವಹಿವಾಟು ನಡೆಸಿದವು.
ಕರೆನ್ಸಿ ವಹಿವಾಟು:
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 83.14 ಕ್ಕೆ ತನ್ನ ವಹಿವಾಟು ಕೊನೆಗೊಳಿಸಿದೆ.
FII ಮತ್ತು DII ನಗದು ವಹಿವಾಟು ವಿವರ:
ಇಂದಿನ ಮಾರುಕಟ್ಟೆಯ ಅಂತ್ಯದಲ್ಲಿ ‘ವಿದೇಶಿ ಸಾಂಸ್ಥಿಕ ಹೂಡಿಕೆದಾರರು” (FII) : ರೂ. -2,333.03 ಕೋಟಿ ನಿವ್ವಳ ಮಾರಾಟ ಮಾಡಿದರೆ , ‘ದೇಶೀಯ ಸಾಂಸ್ಥಿಕ ಹೂಡಿಕೆದಾರರು’ (DII) ರೂ.+1,579.28 ಕೋಟಿ ನಿವ್ವಳ ಖರೀದಿ ಮಾಡಿದ್ದಾರೆ.