Home ಕ್ರೈಂ ನ್ಯೂಸ್ ಹೆದ್ದಾರಿಯಲ್ಲಿ ಕತ್ತಿಯಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ: ವೀಡಿಯೊ ವೈರಲ್ ಬೆನ್ನಲ್ಲೇ ಹಿಂದೂ ರಕ್ಷಾ ದಳದ ಜಿಲ್ಲಾಧ್ಯಕ್ಷ ಸೇರಿ 8 ಮಂದಿ ಅರೆಸ್ಟ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಹೆದ್ದಾರಿಯಲ್ಲಿ ಕತ್ತಿಯಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ: ವೀಡಿಯೊ ವೈರಲ್ ಬೆನ್ನಲ್ಲೇ ಹಿಂದೂ ರಕ್ಷಾ ದಳದ ಜಿಲ್ಲಾಧ್ಯಕ್ಷ ಸೇರಿ 8 ಮಂದಿ ಅರೆಸ್ಟ್!

Share
ಹೆದ್ದಾರಿ
Share

ಹಾಪುರ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಬರ್ತ್‌ಡೇ ಪಾರ್ಟಿ ಸ್ಪಾಟ್ ಮಾಡಿಕೊಂಡು ಹುಚ್ಚಾಟ ಮೆರೆದಿದ್ದ ಯುವಕನೊಬ್ಬನ ಲೀಲೆ ಪೊಲೀಸರ ಅತಿಥಿಯಾಗಲು ಕಾರಣವಾಗಿದೆ.

ಎನ್‌ಎಚ್-9 (NH-9) ರಸ್ತೆಯ ರಾಜಾ ಕಿ ಹವೇಲಿ ಹೋಟೆಲ್ ಬಳಿ ಚಲಿಸುತ್ತಿರುವ ಕಾರಿನ ಬೋನೆಟ್ ಮೇಲೆ ಬರೋಬ್ಬರಿ ಐದು ಹುಟ್ಟುಹಬ್ಬದ ಕೇಕ್‌ಗಳನ್ನು ಇರಿಸಿ, ಕತ್ತಿಯಿಂದ ಕೇಕ್ ಕತ್ತರಿಸಿ ಯುವಕ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಕಾರ್ಯಾಚರಣೆ ನಡೆಸಿ, ಹಿಂದೂ ರಕ್ಷಾ ದಳದ ಜಿಲ್ಲಾ ಅಧ್ಯಕ್ಷ ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಬಂಧಿಸಿದ್ದಾರೆ.

ಬಾಬುಗಢ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕಾರಿನ ಬೋನೆಟ್ ಮೇಲೆ ಕೇಕ್ ಕತ್ತರಿಸುವುದಲ್ಲದೆ, ಚಲಿಸುವ ಕಾರಿನ ಕಿಟಕಿಗಳಿಂದ ಹೊರಬಿದ್ದು ಅಪಾಯಕಾರಿ ಸ್ಟಂಟ್‌ಗಳನ್ನು ಮಾಡಲಾಗಿದೆ. ಅಲ್ಲದೆ ಹೆದ್ದಾರಿಯಲ್ಲಿ ಬೈಕ್‌ನಲ್ಲೂ ಅಪಾಯಕಾರಿ ಕಸರತ್ತುಗಳನ್ನು ನಡೆಸುವ ಮೂಲಕ ಸಾರ್ವಜನಿಕರಿಗೆ ಹಾಗೂ ಇತರೆ ವಾಹನ ಸವಾರರಿಗೆ ತೊಂದರೆ ಉಂಟುಮಾಡಲಾಗಿತ್ತು. ವೀಡಿಯೊ ಗಮನಕ್ಕೆ ಬಂದ ತಕ್ಷಣ ಹಾಪುರ್ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದ ಮೇರೆಗೆ ಕಠಿಣ ಕ್ರಮ ಕೈಗೊಂಡಿರುವ ಪೊಲೀಸರು, ಕೃತ್ಯಕ್ಕೆ ಬಳಸಿದ ಕಾರು ಹಾಗೂ ಮೋಟಾರ್ ಸೈಕಲ್ ಅನ್ನು ವಶಪಡಿಸಿಕೊಂಡು ಎಂಟು ಯುವಕರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

ಹೆದ್ದಾರಿಯಲ್ಲಿ ಹುಚ್ಚಾಟ: ಎನ್‌ಎಚ್-೯ ಹೆದ್ದಾರಿಯಲ್ಲಿ ಕಾರಿನ ಬೋನೆಟ್ ಮೇಲೆ ಐದು ಕೇಕ್‌ಗಳನ್ನು ಇಟ್ಟು ಕತ್ತಿಯಿಂದ ಕತ್ತರಿಸಿ ಹುಟ್ಟುಹಬ್ಬ ಆಚರಿಸಲಾಗಿದೆ.

ಅಪಾಯಕಾರಿ ಸ್ಟಂಟ್‌ಗಳು: ಕೇಕ್ ಕತ್ತರಿಸುವುದರ ಜೊತೆಗೆ ಹೆದ್ದಾರಿಯಲ್ಲಿ ಕಾರಿನಿಂದ ಹೊರಬಿದ್ದು ಹಾಗೂ ಬೈಕ್‌ನಲ್ಲಿ ಅಪಾಯಕಾರಿ ಸ್ಟಂಟ್‌ಗಳನ್ನು ಪ್ರದರ್ಶಿಸಲಾಗಿದೆ.

ಪೊಲೀಸ್ ಕಠಿಣ ಕ್ರಮ: ವೀಡಿಯೊ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಬಾಬುಗಢ ಪೊಲೀಸರು ಹಿಂದೂ ರಕ್ಷಾ ದಳದ ಜಿಲ್ಲಾ ಅಧ್ಯಕ್ಷ ಸೇರಿದಂತೆ ೮ ಮಂದಿಯನ್ನು ಬಂಧಿಸಿ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *