Home ಕ್ರೈಂ ನ್ಯೂಸ್ ಲಂಡನ್‌ನಲ್ಲಿದ್ದಾಳೆಂದೇ ಭಾವಿಸಿದ್ದ ಪಾಲಕರು: ಫುಡ್ ಆರ್ಡರ್ ಸುಳಿವಿನಿಂದ ಬಯಲಾಯ್ತು ಯುವತಿಯ ಶವದ ರಹಸ್ಯ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಲಂಡನ್‌ನಲ್ಲಿದ್ದಾಳೆಂದೇ ಭಾವಿಸಿದ್ದ ಪಾಲಕರು: ಫುಡ್ ಆರ್ಡರ್ ಸುಳಿವಿನಿಂದ ಬಯಲಾಯ್ತು ಯುವತಿಯ ಶವದ ರಹಸ್ಯ!

Share
ಲಂಡನ್‌
Share

ಪುಣೆ/ಛತ್ರಪತಿ ಸಂಭಾಜಿನಗರ: ಲಂಡನ್‌ನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದಾಳೆಂದು ಪಾಲಕರು ನಂಬಿದ್ದ 34 ವರ್ಷದ ಯುವತಿಯೊಬ್ಬರು ಪುಣೆಯ ಅಪಾರ್ಟ್‌ಮೆಂಟ್‌ನಲ್ಲಿ ನಿಗೂಢವಾಗಿ ಮೃತಪಟ್ಟಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ.

ಛತ್ರಪತಿ ಸಂಭಾಜಿನಗರ ಮೂಲದ ಮುಗ್ಧಾ ದೇಶಮುಖ್ (34) ಎಂಬವರು ಕಳೆದ 2025ರ ಜುಲೈನಲ್ಲಿ ಲಂಡನ್‌ಗೆ ತೆರಳಿದ್ದರು. ಆದರೆ, ಯಾರಿಗೂ ತಿಳಿಸದೆ ಕಳೆದ ಆಗಸ್ಟ್‌ನಲ್ಲೇ ರಹಸ್ಯವಾಗಿ ಭಾರತಕ್ಕೆ ವಾಪಸಾಗಿದ್ದರು. ಅಕ್ಟೋಬರ್ 24ರಿಂದ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಫುಡ್ ಡೆಲಿವರಿ ಆ್ಯಪ್‌ಗಳ ವಹಿವಾಟಿನ ಜಾಡು ಹಿಡಿದು ಪೊಲೀಸರು ಹುಡುಕಿದಾಗ ಪುಣೆಯ ಗಹುಂಜೆ ಪ್ರದೇಶದ ವಸತಿ ಸಮುಚ್ಚಯದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಯುವತಿ ಲಂಡನ್‌ನಲ್ಲಿ ನೆಲೆಸಿದ್ದರೂ ಪಾಲಕರೊಂದಿಗೆ ವಾಟ್ಸಾಪ್ ಮೂಲಕ ಸಂಪರ್ಕದಲ್ಲಿದ್ದಳು. ಅಕ್ಟೋಬರ್ ೨೩ರಂದು ತಾಯಿಗೆ ಕೊನೆಯದಾಗಿ ಕರೆ ಮಾಡಿ ಉದ್ಯೋಗ ಸಂದರ್ಶನವಿದೆ ಎಂದು ತುರ್ತಾಗಿ ಫೋನ್ ಕಟ್ ಮಾಡಿದ್ದಳು. ಆದರೆ ಅಕ್ಟೋಬರ್ ೨೪ರ ಬಳಿಕ ಸಂಪರ್ಕಕ್ಕೆ ಸಿಗದಿದ್ದಾಗ ಆತಂಕಗೊಂಡ ಪಾಲಕರು ಲಂಡನ್‌ನಲ್ಲಿದ್ದ ಆಕೆಯ ಸ್ನೇಹಿತೆಯ ಸಹಾಯ ಪಡೆದಿದ್ದಾರೆ. ಲಂಡನ್ ಪೊಲೀಸರ ವಿಚಾರಣೆಯಿಂದ ಆಕೆ ಆಗಸ್ಟ್ ತಿಂಗಳಲ್ಲೇ ಯುಕೆ ತೊರೆದಿರುವುದು ಗೊತ್ತಾಗಿದೆ. ಬಳಿಕ ತಂದೆ ಅವಿನಾಶ್ ದೇಶಮುಖ್ ಅವರು ಬ್ಯಾಂಕ್ ಖಾತೆಯ ಆನ್‌ಲೈನ್ ವಹಿವಾಟು ಹಾಗೂ ಫುಡ್ ಡೆಲಿವರಿ ಆ್ಯಪ್‌ಗಳ ವಿವರ ಪರಿಶೀಲಿಸಿದಾಗ ಭಾರತದಲ್ಲೇ ಇರುವುದು ಗೊತ್ತಾಗಿ, ಕ್ರೈಂ ಬ್ರ್ಯಾಂಚ್ ಸಹಾಯದಿಂದ ಪುಣೆಯ ಲೋಧಾ ಬೆಲ್ಮೊಂಡೋ ಅಪಾರ್ಟ್‌ಮೆಂಟ್ ತಲುಪಿದ್ದಾರೆ. ಪೊಲೀಸರ ಸಹಾಯದಿಂದ ಬಾಗಿಲು ತೆರೆದು ನೋಡಿದಾಗ ಆಕೆ ಮೃತಪಟ್ಟಿರುವುದು ಪತ್ತೆಯಾಗಿದೆ.

ರಹಸ್ಯ ವಾಪಸಾತಿ: ಲಂಡನ್‌ನಲ್ಲಿ ಓದುತ್ತಿದ್ದಾಳೆ ಎಂದು ಪಾಲಕರು ನಂಬಿದ್ದರೂ, ಮುಗ್ಧಾ ಯಾರಿಗೂ ತಿಳಿಸದೆ ಆಗಸ್ಟ್‌ನಲ್ಲೇ ಭಾರತಕ್ಕೆ ಬಂದು ಪುಣೆಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.

ಫುಡ್ ಡೆಲಿವರಿ ಸುಳಿವು: ಯುವತಿ ಬಳಸುತ್ತಿದ್ದ ಆನ್‌ಲೈನ್ ಫುಡ್ ಡೆಲಿವರಿ ಹಾಗೂ ಸೇವಾ ಪ್ಲಾಟ್‌ಫಾರ್ಮ್‌ಗಳ ಬ್ಯಾಂಕ್ ವಹಿವಾಟುಗಳೇ ಆಕೆ ದೇಶದಲ್ಲೇ ಇರುವುದನ್ನು ಪತ್ತೆಹಚ್ಚಲು ಪ್ರಮುಖ ಸುಳುವಾಯಿತು.

ಪೊಲೀಸ್ ತನಿಖೆ: ಶವದ ಮೇಲೆ ಯಾವುದೇ ಬಾಹ್ಯ ಗಾಯದ ಗುರುತುಗಳಿಲ್ಲ. ಸಾವಿಗೆ ನಿಖರ ಕಾರಣ ತಿಳಿಯಲು ವಿಸೆರಾ (Viscera) ಮಾದರಿಯನ್ನು ಸಂರಕ್ಷಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles