Home ದಾವಣಗೆರೆ ಬಿಪಿ ಹರೀಶ್ ಗೆ “ರಾಜಕೀಯ ಏಡ್ಸ್” ಬಂದಿದೆ, ಹುಚ್ಚು ಹುಚ್ಚಾಗಿ ಮಾತನಾಡಿದ್ರೆ ಜನರೇ ಪೊರಕೆಯಲ್ಲಿ ಹೊಡೀತಾರೆ: ಮಾಡಾಳ್ ಮಲ್ಲಿಕಾರ್ಜುನ್ ರೋಷಾಗ್ನಿ!
ದಾವಣಗೆರೆನವದೆಹಲಿಬೆಂಗಳೂರು

ಬಿಪಿ ಹರೀಶ್ ಗೆ “ರಾಜಕೀಯ ಏಡ್ಸ್” ಬಂದಿದೆ, ಹುಚ್ಚು ಹುಚ್ಚಾಗಿ ಮಾತನಾಡಿದ್ರೆ ಜನರೇ ಪೊರಕೆಯಲ್ಲಿ ಹೊಡೀತಾರೆ: ಮಾಡಾಳ್ ಮಲ್ಲಿಕಾರ್ಜುನ್ ರೋಷಾಗ್ನಿ!

Share
ಮಾಡಾಳ್ ಮಲ್ಲಿಕಾರ್ಜುನ್
Share

ದಾವಣಗೆರೆ: ಹರಿಹರ ಬಿಜೆಪಿ ಶಾಸಕ ಬಿ. ಪಿ. ಹರೀಶ್ ಅವರಿಗೆ “ರಾಜಕೀಯ ಏಡ್ಸ್” ಬಂದಿದೆ. ನನಗೆ ಬಂದುಬಿಟ್ಟಿದೆ. ಏಡ್ಸ್ ಬಂದ ಮೇಲೆ ಏನಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಶಾಸಕರಿಗೆ ರಾಜಕೀಯವಾಗಿ ಏಡ್ಸ್ ಬಂದಿರುವುದನ್ನು ಬೇರೆಯವರಿಗೂ ಅಂಟಿಸಲು ಹೋಗುತ್ತಿದ್ದಾರೆ ಎಂದು ಚನ್ನಗಿರಿ ಬಿಜೆಪಿ ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್ ಆಕ್ರೋಶ ವ್ಯಕ್ತಪಡಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ಬೇರೆ ತಟ್ಟೆಯವರ ನೊಣ ಹುಡುಕುತ್ತಿದ್ದೀಯಾ? ವಿಜಯದಶಮಿ ದಿನ ಸಂಹಾರ ಆಗುತ್ತೆಂದು ಹರೀಶ್ ಹೇಳಿದ್ದಾರೆ. ರಾಜ್ಯದಲ್ಲಿ
ಸಂಹಾರ ಆಗುತ್ತದೆ. ಮುಂದೆ ಬಿಜೆಪಿ ಬರಬಾರದು ಎಂಬ ಉದ್ದೇಶ ಅವರದ್ದು ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನಲ್ಲಿದ್ದಾಗ ಕಾಂಗ್ರೆಸ್, ಬಿಜೆಪಿಯಲ್ಲಿದ್ದಾಗ ಬಿಜೆಪಿ, ಮುಸ್ಲಿಂ ಲೀಗ್ ಗೆ ಹೋದರೂ ಅಲ್ಲಿ ನಿಯತ್ತಾಗಿರುತ್ತೇನೆ ಎಂದು ಬಿಪಿ ಹರೀಶ್ ಹೇಳಿದ್ದಾರೆ. ಹಾಗೆಂದ ಮೇಲೆ ಬಿಜೆಪಿಯಲ್ಲಿ ಹರೀಶ್ ಗೆ ಅವಕಾಶ ಇಲ್ಲ ಎಂಬಂತಾಯಿತು. ಹಾಗಾಗಿ ಬಿಜೆಪಿ ಬಿಟ್ಟು ಹೋಗಲು ತಯಾರಾಗಿದ್ದಾರೆ ಎಂದು ಹೇಳಿದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಹರಿಹರದಲ್ಲಿ ಕಾಂಗ್ರೆಸ್ ಮುನ್ನಡೆ ಬಂದಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ಇದ್ದರೂ ಲೀಡ್ ಬರಲಿಲ್ಲ. ಹುಚ್ಚು ಹುಚ್ಚಾಗಿ ಮಾತನಾಡುತ್ತಾ ಹೋದರೆ ಜನರು ಪೊರಕೆ ತೆಗೆದುಕೊಂಡು ಹೊಡೆಯುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಕೆ. ಎಂ. ಸುರೇಶ್ ಅವರನ್ನು ಗೆಲ್ಲಿಸಲು ಶಿವಯೋಗಿಸ್ವಾಮಿ ಅವರು ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಸೇರಿದಂತೆ ಎಲ್ಲಾ ನಾಯಕರು ಶ್ರಮಿಸಿದ್ದಾರೆ. ದಾವಣಗೆರೆಗೆ ಆಗ್ನೇಯ ಪದವೀಧರರ ಕ್ಷೇತ್ರ ಸಿಗಬೇಕು. ಇಲ್ಲಿಯವರೇ ಅಭ್ಯರ್ಥಿಯಾಗಬೇಕೆಂಬ ನಿಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಪಕ್ಷದ ವರಿಷ್ಠರು ಕೆ. ಎಂ. ಸುರೇಶ್ ಅವರಿಗೆ ಟಿಕೆಟ್ ನೀಡಿದ್ದಾರೆ. ಒಳ್ಳೆಯ ವಾತಾವರಣದಿಂದ ಗೆದ್ದರು. ಆಟೋ ಡ್ರೈವರ್ ಎಂಎಲ್ ಸಿ ಆಗಬಾರದಾ? ಕಷ್ಟಪಟ್ಟು ಎಂಎ ಓದಿ ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಸುರೇಶಪ್ಪನ ಮೇಲೆ ಹೊಟ್ಟೆ ಕಿಚ್ಚು ಮಾಡ್ತೀಯ ನಾಚಿಕೆಯಾಗಲ್ವ. ಪಿಬಿ ರಸ್ತೆಯಲ್ಲಿ ಮಾತನಾಡಿಸಲು ನಿನಗೆ ಕೇಳಬೇಕಾ? ಬಾಯಿಗೆ ಬಂದಂತೆ ಎಲ್ಲರ ಮೇಲೆ ಮಾತನಾಡುವುದು ಸರಿಯಲ್ಲ ಎಂದು ಮಾಡಾಳ್ ಮಲ್ಲಿಕಾರ್ಜುನ್ ಕಿಡಿಕಾರಿದರು.

ಹರಿಹರದಲ್ಲಿ ರಾಜಕಾರಣ ಮಾಡುವುದು ಬಿಟ್ಟು ಇಲ್ಲಿಗೆ ಯಾಕೆ ಬರುತ್ತೀರಾ? ಬಿ. ಪಿ. ಹರೀಶ್ ಕಾಲು ಕೆರೆದು ಜಗಳಕ್ಕೆ ಬರುತ್ತಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಈ ಮಟ್ಟದಲ್ಲಿ ಅನಾವಶ್ಯಕವಾಗಿ ಕಾಲು ಕೆರೆದು ಹಂಗಿಸಿ ವಿವಾದಾತ್ಮಕವಾಗಿ ಯಾರೂ ಮಾತನಾಡುತ್ತಿಲ್ಲ. ಶಾಸಕರೆಂಬುದನ್ನು ಅರಿತು ಮಾತನಾಡಬೇಕು ಎಂದು ಹೇಳಿದರು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles