ದಾವಣಗೆರೆ: ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ 66/11 ಕೆ.ವಿ. ಪಲ್ಲಾಗಟ್ಟೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನವೀಕರಣ ಹಾಗೂ ಅಭಿವೃದ್ಧಿ ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ, ಇಂದಿನಿಂದ ಒಂದು ತಿಂಗಳ ಕಾಲ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಅಧಿಕೃತವಾಗಿ ತಿಳಿಸಿದ್ದಾರೆ.
ವಿದ್ಯುತ್ ಕೇಂದ್ರದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 8 ಎಂ.ವಿ.ಎ (TC-2) ಸಾಮರ್ಥ್ಯದ ಟ್ರಾನ್ಸ್ಫಾರ್ಮರ್ ಅನ್ನು ತೆರವುಗೊಳಿಸಿ, ಇದರ ಬದಲಾಗಿ ನೂತನ ಹಾಗೂ ಅತ್ಯಧಿಕ 12.5 ಎಂ.ವಿ.ಎ ಸಾಮರ್ಥ್ಯದ ಶಕ್ತಿಶಾಲಿ ಟ್ರಾನ್ಸ್ಫಾರ್ಮರ್ ಅಳವಡಿಸುವ ಕಾಮಗಾರಿ ಕೈಗೊಳ್ಳಲಾಗಿದೆ.
ವಿದ್ಯುತ್ ವ್ಯತ್ಯಯದಾವಧಿ: ಅಕ್ಟೋಬರ್ 27 ರಿಂದ ನವೆಂಬರ್ 26 ರವರೆಗೆ ನಿರಂತರವಾಗಿ ಒಂದು ತಿಂಗಳ ಕಾಲ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಬಾಧಿತ ಪ್ರದೇಶಗಳು ಮತ್ತು ಮಾರ್ಗಗಳು: ಪಲ್ಲಾಗಟ್ಟೆ ವಿ.ವಿ. ಕೇಂದ್ರದ ವ್ಯಾಪ್ತಿಗೆ ಬರುವ ಎನ್.ಜೆ.ವೈ (NJY) ಮತ್ತು ಐ.ಪಿ (IP) ವಿದ್ಯುತ್ ಮಾರ್ಗಗಳಿಗೆ ಸಂಪರ್ಕ ಕಡಿತಗೊಳ್ಳಲಿದೆ.
ಸಾರ್ವಜನಿಕರಲ್ಲಿ ಮನವಿ: ಗ್ರಾಹಕರ ಉತ್ತಮ ಸೇವೆಗಾಗಿ ಕೈಗೊಳ್ಳಲಾಗಿರುವ ಈ ತಾಂತ್ರಿಕ ಕಾಮಗಾರಿಗೆ ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಸಹಕರಿಸುವಂತೆ ಜಗಳೂರು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿನಂತಿಸಿದ್ದಾರೆ.





Leave a comment